Home ಜಿಲ್ಲಾ ಸುದ್ದಿಗಳು ಯಾದಗಿರಿ: ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹನುಮೇಗೌಡ ಮರಕಲ್ ನೇಮಕ

ಯಾದಗಿರಿ: ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹನುಮೇಗೌಡ ಮರಕಲ್ ನೇಮಕ

427
0

ಯಾದಗಿರಿ: ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹನುಮೇಗೌಡ ಮರಕಲ್ ನೇಮಕ

ಯಾದಗಿರಿ: ಅಹಿಂದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನುಮೇಗೌಡ ಮರಕಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಅಹಿಂದ ಜಿಲ್ಲಾಧ್ಯಕ್ಷರಾಗಿದ್ದ ಮೌಲಾಲಿ ಅನಪೂರ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಮರಕಲ್ ಅವರನ್ನು ಆಯ್ಕೆ ಮಾಡಲಾಗಿದ್ದು, ನಗರದ ಜಿಲ್ಲಾ ಅಹಿಂದ ಘಟಕದ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಡಾ. ಭೀಮಣ್ಣ ಮೇಟಿ, ಹನುಮೇಗೌಡ ಬೀರನಕಲ್, ಎ.ಸಿ. ಕಾಡ್ಲೂರು, ತಿಮ್ಮಯ್ಯ ಪುರ್ಲೆ, ಮಲ್ಲಿಕಾರ್ಜುನ ಪೂಜಾರಿ, ವಿಜಯಕುಮಾರ ಸೇರಿದಂತೆ ಅಹಿಂದ ಘಟಕದ ಹಲವು ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here