ಶಹಾಪುರ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಮಿತಿ (ರಿ) ಸಂಘಟನೆಗೆ ಶಹಾಪುರ ತಾಲ್ಲೂಕು ಅಧ್ಯಕ್ಷರನ್ನಾಗಿ ಕೊಳ್ಳೂರು ಗ್ರಾಮದ ಶ್ರೀ ನಾಗಪ್ಪ ನರಿಬೋಳಿ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯ ಅಧ್ಯಕ್ಷರಾದ ಆರ್. ರವಿಚಂದ್ರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮಂಜಣ್ಣ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಈ ನೇಮಕಾತಿಯ ಮುಖ್ಯ ಉದ್ದೇಶ ದೀನ ದಲಿತರು ಮತ್ತು ವಾಲ್ಮೀಕಿ ಸಮುದಾಯದ ಜನರ ಪರವಾಗಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ನೇಮಕಾತಿಯ ಕುರಿತು ಸಂತಸ ವ್ಯಕ್ತಪಡಿಸಿರುವ ನಾಗಪ್ಪ ನರಿಬೋಳಿ, “ಸಂಘಟನೆಯ ಸೂಚನೆಗಳಿಗೆ ಅನುಗುಣವಾಗಿ ನನ್ನ ಕಾರ್ಯವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ವಹಿಸಿದ ರಾಜ್ಯ ಸಮಿತಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ಈ ನೇಮಕಾತಿ ಸಭೆಯಲ್ಲಿ ರಾಜ್ಯ ಮುಖಂಡರಾದ ಮಂಜುನಾಥ ಪಾಳೇಗಾರ, ರವಿಚಂದ್ರ, ಪ್ರೊ. ಅರ್ಜುನ್ ಪಂಗಣ್ಣನವರ್, ಮಹಿಳಾ ಅಧ್ಯಕ್ಷರಾದ ಸುಜಾತ ನಾಗರಾಜ ಮತ್ತು ಜಿ. ಜಿ. ನಾಯಕ ಕೊಳ್ಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.