Home ಕರ್ನಾಟಕ ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಬಿಡುಗಡೆ

ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಶಾಸಕ ರಾಘವೇಂದ್ರ ಹಿಟ್ನಾಳ್ ರಿಂದ ಬಿಡುಗಡೆ

48
0

ಕೊಪ್ಪಳ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 28 ರಂದು ಮೈಸೂರಿನಲ್ಲಿ ನಡೆಯುತ್ತಿರುವ ಪತ್ರಿಕಾ ವಿತರಕರ ಐದನೇ ರಾಜ್ಯ ಸಮ್ಮೇಳನದ ಲಾಂಛನವನ್ನು ತಾಲೂಕ ಪಂಚಾಯತ ಸಭಾಭವನದಲ್ಲಿ ಸೋಮವಾರ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನಾಳ ಅವರು ಬಿಡುಗಡೆ ಮಾಡಿದರು.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ಘಟಿಕೋತ್ಸವ ಭವನದಲ್ಲಿ ಆಗಸ್ಟ್ 28 ರಂದು ಗುರುವಾರ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಮತ್ತು 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ನಡೆಯಲಿದ್ದು.ಪತ್ರಿಕೆ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲಾ ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘ(ರಿ)ಅಧ್ಯಕ್ಷ ಗವಿರಾಜ್ ಕಂದಾರಿ ಕೋರಿದ್ದಾರೆ.
ಕೊಪ್ಪಳ ಜಿಲ್ಲಾ ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘ(ರಿ)ಅಧ್ಯಕ್ಷ ರವಿರಾಜ್ ಕಂದಾರಿ.ಉಪಾಧ್ಯಕ್ಷ ಮಂಜುನಾಥ್ ಟಪಾಲ್. ಕಾರ್ಯದರ್ಶಿ ಮಹೆಬೂಬ್ ಸಾಬ್ ಗಂಗಾವತಿ.ಹಿರಿಯ ಸಲಹೆಗಾರ ಎಸ್.ಎ.ಗಫಾರ್. ಸದಸ್ಯ ಮಹೆಬೂಬ್ ಮನಿಯಾರ್.ಕನ್ನಡ ಪ್ರಭ ಪತ್ರಿಕೆಯ ಜಿಲ್ಲಾ ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here