Home ಜಿಲ್ಲಾ ಸುದ್ದಿಗಳು ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದು ಹಲವು ಬೇಡಿಕೆಗಳ ಈಡೇರಿಕೆಗೆ ಜ.26 ಗಡುವು

ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದು ಹಲವು ಬೇಡಿಕೆಗಳ ಈಡೇರಿಕೆಗೆ ಜ.26 ಗಡುವು

by Laxmikanth Nayak
0 comments

ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದು ಹಲವು ಬೇಡಿಕೆಗಳ ಈಡೇರಿಕೆಗೆ ಜ.26 ಗಡುವು

ಕೊಪ್ಪಳ : ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಸೇರಿದಂತೆ ಸಿಂಧನೂರು ದಿಂದ ಬೆಂಗಳೂರು ಚಲಿಸುವ ರೈಲು ಸಮಯ ಕಡಿತ ಗೊಳಿಸಲು ಮತ್ತು ಕೆಲ ರೈಲುಗಳು ವಿಸ್ತರಿಸಲು ಹಾಗೂ ಇತರ ಬೇಡಿಕೆಗಳನ್ನು ಜನವರಿ 26.2026 ರೋಳಗಾಗಿ ಈಡೇರಿಕೆ ಮಾಡದಿದ್ದರೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹುಬ್ಬಳಿಯ ರೈಲು ಸೌಧದ ನೈಋತ್ಯ ವಲಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರ್ ಅವರಿಗೆ ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಕೊಪ್ಪಳ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಸೈಯ್ಯದ್ ಅಸಿಫ್ ಅವರ ಮುಖಾಂತರ ಮಂಗಳವಾರ ಎಚ್ಚರಿಕೆ ಪತ್ರ ರವಾನಿಸಲಾಗಿದೆ.

 ಮನವಿಯಲ್ಲಿ ಹುಬ್ಬಳ್ಳಿ ಬೆಂಗಳೂರು ವಾಯ ಹಾವೇರಿ ಮೂಲಕ ನಿತ್ಯ ಸಂಚರಿಸುವ ಅನೇಕ ರೈಲುಗಳಲ್ಲಿ ಆರು ರೈಲುಗಳನ್ನು ಹುಬ್ಬಳ್ಳಿ ವಾಯ ಕೊಪ್ಪಳ - ಹೊಸಪೇಟೆ ಮೂಲಕ ಬೆಂಗಳೂರಿಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು,ಸಂಖ್ಯೆ : 56519/56520 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ್ ಗಿಣಿಗೇರಾ ಕೊಪ್ಪಳ ಭಾಣಾಪುರ  ತಳಕಲ್ ಜಂಕ್ಷನ್ ಮೂಲಕ ಕುಕನೂರು ಯಲಬುರ್ಗಾ ಕುಷ್ಟಗಿವರೆಗೆ ವಿಸ್ತರಿಸಬೇಕು.ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು { ವಾಯ :ಗದಗ. ಕೊಪ್ಪಳ. ಹೊಸಪೇಟೆ , ಬಳ್ಳಾರಿ. ಗುಂತಕಲ್.ಮಂತ್ರಾಲಯ ರೋಡ್. ರಾಯಚೂರು. ಯಾದಗಿರಿ. ಕಲಬುರ್ಗಿ}. ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ  ರೈಲು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಏಕೈಕ ರೈಲಾಗಿದ್ದು. ಈ ಭಾಗದ ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ನಿತ್ಯ ಬೆಳಿಗ್ಗೆ 8.30 ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ. ಮಧ್ಯಾಹ್ನ  2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊಸದಾಗಿ ಡೆಮೋ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು.

ಈಗಾಗಲೇ ಸಿಂಧನೂರು ನಿಂದ ಯಶವಂತಪುರಕ್ಕೆ ಯಶವಂಪುರದಿಂದ ಸಿಂಧನೂರಿಗೆ ದಿನನಿತ್ಯವು ರೈಲು ಓಡಾಟ ಮಾಡುತ್ತಿದ್ದು, ಸುಮಾರು 15 ತಾಸುಗಳ ಸುಧಿರ್ಘ ಅವಧಿ ತೆಗೆದುಕೊಳ್ಳುತ್ತಿದ್ದು, ಪ್ರಮಾಣಿಕರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ, ಶಾಲಾ. ಕಾಲೇಜು‌ ಪರೀಕ್ಷೆ ಮತ್ತು ಕಛೇರಿಯ ಸಮಯಕ್ಕೆ ಬೆಂಗಳೂರು ತಲುಪಲು ಆಗುತ್ತಿಲ್ಲ. 15 ತಾಸುಗಳ ಸುಧಿರ್ಘ ಪ್ರಯಾಣವನ್ನು ಸುಮಾರು 10 ತಾಸಿಗೆ ಇಳಿಸಬೇಕು.ಪ್ರಯಾಣಿಕರ ಒತ್ತಾಯದ ಮೇರೆಗೆ ಸಿಂಧನೂರು ದಿಂದ ರಾತ್ರಿ 9.00 ಗಂಟೆಗೆ ರೈಲನ್ನು ಬಿಡಬೇಕು ಮರುದಿನ ಬೆಳಿಗ್ಗೆ 7.00 ಗಂಟೆಗೆ ಬೆಂಗಳೂರು ತಲುಪುವಂತೆ ಪ್ರಯಾಣೀಕರಿಗೆ ಅನುಕೂಲ ಮಾಡಿಕೊಡಬೇಕು. ಇಡೀ ಕೊಪ್ಪಳ ಜಿಲ್ಲೆಯ ಸುತ್ತ ಮುತ್ತಲಿನ ಸಾರ್ವಜನಿಕರು ತಮ್ಮ ದುಡಿಮೆಗಾಗಿ ಬೆಂಗಳೂರನ್ನು ಹೆಚ್ಚು ಅವಲಂಬಿಸಿದ್ದಾರೆ.ಇತ್ತೀಚೆಗೆ ಕೂಲಿ ಕಾರ್ಮಿಕ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ಪ್ರಯಾಣಿಕರಿಗೆ ರೈಲಿನ ಹಿಂದಿನ ಭಾಗದಲ್ಲಿ ನಾಲ್ಕು ಮುಂದಿನ ಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳ ಸಂಖ್ಯೆ ಹೆಚ್ಚಾಗಬೇಕು.ಈಗಾಗಲೇ ಓಡಾತ್ತಿರುವ ಸಿಂಧನೂರು ನಿಂದ ಯಶವಂತಪುರ ರೈಲನ್ನು ಪ್ರಯಾಣೀಕರು ಕೂರುವ ಸೀಟುಗಳು ಮತ್ತು ಶೌಚಾಲಯಗಳ ಸ್ವಚ್ಛತೆ.ನೀರಿನ ಕೊರತೆ ನಿಗಿಸಬೇಕು. ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ ಈ ಭಾಗದಲ್ಲಿ ದಿನನಿತ್ಯ ಎನಿಲ್ಲವೆಂದರೂ ಸುಮಾರು ರೈಲುಗಳ ಓಡಾಡುತ್ತಿವೆ. ಆದರೆ ವಾಣಿಜ್ಯ ನಗರ, ಬತ್ತದ ನಗರ ಎಂದೇ ಹೆಸರು ಪಡೆದ ಕೊಪ್ಪಳ ಜಿಲ್ಲೆಗೆ ಬೆಂಗಳೂರನಿಂದ ಕೊಪ್ಪಳಕ್ಕೆ ಹಂಪಿ ರೈಲು ಬಿಟ್ಟರೆ ಯಶವಂತಪುರದಿಂದ ಸಿಂಧನೂರು ನಿಂದ ರೈಲು ಈ ಎರಡು ರೈಲು ಬಿಟ್ಟರೆ ಯಾವುದೇ ತರಹದ ಹೆಚ್ಚಿನ ರೈಲುಗಳು ಲಭ್ಯವಿಲ್ಲ. ರೈಲಿನ ಅಸಮತೋಲವನ್ನು ಸರಿದುಗಿಸಲು ಬೆಂಗಳೂರಿನಿಂದ ಬೆಳಿಗ್ಗೆ ಕೊಪ್ಪಳ ಮಾರ್ಗವಾಗಿ ಹುಬ್ಬಳ್ಳಿಗೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು. ರಾತ್ರಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕನಿಷ್ಠ ಇನ್ನೊಂದು ರೈಲು ಬಿಡಬೇಕು. ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಶಾಲೆಯ ಬಳಿ ಇರುವ ಕೆಳ ಕಿರು ಸೇತುವೆಯ ರಸ್ತೆಯನ್ನು ಡಾಂಬರೀಕರಣ ಮಾಡಬೇಕು.ಕೊಪ್ಪಳ ರೈಲ್ವೆ ನಿಲ್ದಾಣದ ವಸತಿ ಗೃಹಗಳಿಗೆ ತುಂಗಭದ್ರ ನದಿಯ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಮ್ಮ ಬೇಡಿಕೆಗಳ ಜನವರಿ 26.2026 ರೊಳಗೆ ಈಡೇರಿಸದಿದ್ದರೆ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ರೈಲ್ವೆ ಜನಪರ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ್ ಶೀಲವಂತರ್. ಅಧ್ಯಕ್ಷ ಎಸ್.ಎ.ಗಫಾರ್.ಉಪಾಧ್ಯಕ್ಷ ಮತ್ತು ಹೈಕೋರ್ಟ್ ನ್ಯಾಯವಾದಿ ಹನುಮೇಶ್ ಗುಂಡೂರು.ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಸಹ ಕಾರ್ಯದರ್ಶಿ ಶಿವಪ್ಪ ಹಡಪದ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್.ಗವಿಸಿದ್ದಪ್ಪ ಗದಗ ಮುಂತಾದವರು ಎಚ್ಚರಿಕೆ ಪತ್ರ ಸಲ್ಲಿಸಿದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಅಕ್ರಮ ಮದ್ಯದ ವಿರುದ್ಧ ಅಣಿಬಿಯಲ್ಲಿ ಜಾಗೃತಿ ಜಾಥಾ ರಾಯಚೂರು ಕೃಷಿ ವಿವಿ: ದಲಿತರ ಮೀಸಲಾತಿ ಸಹಿಸದವರಿಂದ ನೇಮಕಾತಿ ತಡೆಗೆ ಸಂಚು; ಜ.17ರ ಪರೀಕ್ಷೆಗೂ ಅಡ್ಡಿ ಸಾಧ್ಯತೆ? - ದಲಿ... ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ಒರಡಿಯಾ ದೇವತ್ಕಲ್–ಬಾಚಿಮಟ್ಟಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದ... ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?