Home ಜಿಲ್ಲಾ ಸುದ್ದಿಗಳು ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ

ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ

by Laxmikanth Nayak
0 comments

ಗುರುಮಠಕಲ್ ಶಾಸಕರಿಗೆ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜ ಖಡಕ್ ಎಚ್ಚರಿಕೆ

ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ

ಯಾದಗಿರಿ: ಡಿಸೆಂಬರ್, 23

ಪೊಲೀಸ್ ಸ್ಟೇಷನ್ ನಲ್ಲಿ ಅಧಿಕಾರಿಗಳು ದುಡ್ಡಿನ ರೇಟ್ ಔಟ್ಲೆಟ್ ಇಟ್ಟುಕೊಂಡಿದ್ದಾರೆ ನನ್ನ ಕ್ಷೇತ್ರದಲ್ಲಿ ನಡೆಯೋ ಅವ್ಯವಹಾರಗಳಿಗೆ ನಾನು ಜವಾಬ್ದಾರನಲ್ಲ ಗುರುಮಠಕಲ್ ಪೊಲೀಸ್ ಠಾಣೆಯ ಪಿಐ ಮತ್ತು ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್ಐ ಕಾರಣ ಎಂದು ಬೆಳಗಾವಿ ಅಧಿವೇಶನದಲ್ಲಿ ಸಮಾಜದ ಅಧಿಕಾರಿಗಳನ್ನೇ ಗುರಿಯಾಗಿಸಿ ಶಾಸಕ ಶರಣಗೌಡ ಕಂದಕೂರ ಅವರು ಆರೋಪ ಮಾಡಿರುವುದು ಖಂಡನೀಯವಾಗಿದೆ ಎಂದು ಜಿಲ್ಲಾ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಅವರು ಆಕ್ರೋಶ ವ್ಯಕ್ತಪಡಿಸಿದರು.

banner

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಭ್ರಷ್ಟಚಾರ ನಡೆದಿರುವ ಯಾವುದಾದರೂ ಪುರಾವೆಗಳು ಇದ್ದರೆ ಲೋಕಾಯುಕ್ತರಿಗೆ, ಸರಕಾರದ ಮೇಲಾಧಿಕಾರಿಗಳಿಗೆ, ಗೃಹ ಮಂತ್ರಿಯವರಿಗೆ ಅಥವಾ ರಾಜ್ಯಪಾಲರಿಗೆ ಕೊಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಬಾಯಿ ಚಪಲಕ್ಕೆ ಅಧಿವೇಶನದಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಸಮಾಜದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮುಂದುವರಿದರೆ ಸಮಾಜದ ಎಲ್ಲಾರೂ ಪಕ್ಷಾತೀತವಾಗಿ ನಿಮ್ಮ ವಿರುದ್ಧ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ಹಿಂಜರೆಯುದಿಲ್ಲ ಎಂದು ಪತ್ರಿಕಾ ಮುಖಾಂತರ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ತಡೆಯಲು ರಾಯಲ್ಟಿ ಇಲ್ಲದ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಗಳನ್ನು ಜಪ್ತಿ ಮಾಡಿ ಕೇಸ್ ಗಳನ್ನು ದಾಖಲಿಸುತ್ತಿರುವುದು ಮತ್ತು ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಇಂತಹ ನಿಷ್ಠಾವಂತ ಅಧಿಕಾರಿಗಳ ಮೇಲೆ ಆಪಾದನೆ ಮಾಡುತ್ತಿರುವುದು ಶಾಸಕರ ಘನತೆಗೆ ತಕ್ಕದಲ್ಲ, ನೀವು ಒಬ್ಬ ಅಸಮರ್ಥ ಶಾಸಕರು ಎಂದರು.

ಶಾಸಕರಾದವರು ಹೆಚ್ಚಾಗಿ ಕ್ಷೇತ್ರದ ಅಭಿವೃದ್ಧಿಕಡೆ ಗಮನ ವಹಿಸಬೇಕೆ ಹೊರತು ಅಧಿಕಾರಿಗಳು ನಿಮಗೆ ಹಣ ವಸೂಲಿ ಮಾಡಿಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ದೌರ್ಜನ್ಯ, ಬ್ಲ್ಯಾಕ್ ಮೇಲೆ ಮಾಡಿ ಇಲ್ಲಸಲ್ಲದ ಆರೋಪಗಳು ಮಾಡುವುದು ತಪ್ಪು ಎಂದರು.

ಜಿಲ್ಲೆಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಹತಾಶೆ ಆಗಿದ್ದಾರೆ ಎಂದು ಸದನದಲ್ಲಿ ಹೇಳುವ ನೀವು ಒಬ್ಬ ಅಸಮರ್ಥ ಶಾಸಕ ಎಂದು ಸಾಬೀತು ಮಾಡಿದ್ದೀರಿ‌. ಅಧಿಕಾರಿಗಳು ಸರ್ಕಾರದ ನಿಯಮಗಳ ಅನುಸಾರ ಕೆಲಸ ಮಾಡಬೇಕಾಗುತ್ತದೆ. ಅವರು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.

ನಮ್ಮ ಸಮಾಜದ ಬಂಧುಗಳ ಮತಗಳಿಂದ ಗೆದ್ದುಬಂದ ನೀವು ಸಮಾಜದ ಮೇಲೆ ದಬ್ಬಾಳಿಕೆ ಮಾಡುವುದು ಖಂಡನೀಯವಾಗಿದೆ. ಜೆಡಿಎಸ್ ಪಕ್ಷದ ರಾಜಾಧ್ಯಕ್ಷರಾದ ಬಡವರ ಬಂಧುಗಳಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ಇಂತಹ ಒಬ್ಬ ಜಾತೀ ವಿರೋಧಿಗೆ ಟಿಕೆಟ್ ಕೊಡಬೇಕಾದರೆ ಯೋಚನೆ ಮಾಡಬೇಕು ಎಂದು ಹೇಳಬಯಸುತ್ತೇವೆ ಎಂದರು.

ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಯರಗೋಳ ಮಾತನಾಡಿ: ಶಾಸಕರು ಕ್ಷೇತ್ರದ ಜನರ ವಿಶ್ವಾಸ ಗಳಿಸುದರಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಸಣ್ಣ ಸಮುದಾಯ ವ್ಯಕ್ತಿಗಳು ಉನ್ನತ ದರ್ಜೆಗೆ ಹೋದರೆ ಶಾಸಕರಿಗೆ ಸಹಿಸೋಕೆ ಆಗುತ್ತಿಲ್ಲ. ಇವರಿಗೆ ಯಾಕೆ ಇಷ್ಟೊಂದು ಅಸೂಯೆ, ಸುಮಾರು ಹಳ್ಳಿಗಳಲ್ಲಿ ರಸ್ತೆಗಳಲ್ಲಿ ಅವುಗಳ ಅಭಿವೃದ್ಧಿ ಕಡೆ ಗಮನವಹಿಸಿ, ಸುಖಾಸುಮ್ಮನೆ ಅಧಿಕಾರಿಗಳ ಮೇಲೆ ಆರೋಪ ಮಾಡೋದು ವರ್ಗಾವಣೆ ಮಾಡಿಸೋದು ಸರಿಯಲ್ಲ, ಕಳೆದ ಅಧಿವೇಶನದಲ್ಲಿಯೂ ಸಭಾಪತಿಗಳು ಕೇವಲ ಪ್ರಚಾರದ ಹುಚ್ಚಿಗಾಗಿ ಮಾತನಾಡಬೇಡಿ ಎಂದು ಬುದ್ದಿವಾದ ಹೇಳಿದು ಶಾಸಕರು ಮರೆತಿದ್ದಾರೆ ಎಂದರು.

ಸಣ್ಣ ಹಣಮಂತ ಬಳಿಚಕ್ರ ಅವರು ಮಾತನಾಡಿ ಶಾಸಕರು ಕ್ಷೇತ್ರದಲ್ಲಿ ಭ್ರಷ್ಟಚಾರ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸವರಾಜಪ್ಪ ಬಾಗ್ಲಿ, ಶರಣಪ್ಪ ಮೋಟ್ನಳ್ಳಿ ಹೂನಿಗೇರ, ಯುವ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ, ವಡಿಗೇರಾ ತಾಲೂಕು ಅಧ್ಯಕ್ಷ ಬಸವರಾಜ್ ಕೋಲ್ಕರ್, ಮಾಜಿ ಎಪಿಎಂಸಿ ಅಧ್ಯಕ್ಷ ಅಯ್ಯಪ್ಪ ಹಾಲಿಗೇರ,
ನಗರ ಗೌರವ ಅಧ್ಯಕ್ಷ
ಮಾದೇವಪ್ಪ ಗಣಪುರ, ನಗರ ಅಧ್ಯಕ್ಷ ರಾಜಪ್ಪ, ಮಹೇಶ ಬಾಡಿಯಾಳ, ಲಕ್ಷ್ಮೀನಾರಾಯಣ ಪೂಜಾರಿ , ಶಿವಣ್ಣ ಬಳಚಕ್ರ, ಮುದಕಪ್ಪ ಚಾಮನಾಳ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ