ಜಿಲ್ಲಾ ಸಮಾಲೋಚನಾ ಸಮಿತಿ, ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ಸಭೆ
ಜನ ಸುರಕ್ಷಾ ಯೋಜನೆಗಳ ಜಾಗೃತಿ ಮೂಡಿಸಿ ಸಿಇಒ: ಶ್ರೀ ಲವೀಶ್ ಒರಡಿಯಾ
ಯಾದಗಿರಿ: ಕುಟುಂಬಗಳ ಆರ್ಥಿಕ ಸುರಕ್ಷತೆಗೆ ಪೂರಕವಾದ ಜನ ಸುರಕ್ಷಾ ಯೋಜನೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಹಾಗೂ
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಯಾದಗಿರಿ ಜಿಲ್ಲಾ
ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಹೇಳಿದರು.
ಭಾರತೀಯ ಸ್ಟೇಟ್ ಬ್ಯಾಂಕ್ , ಲೀಡ್ ಬ್ಯಾಂಕ್ ಯಾದಗಿರಿ ಜಿಲ್ಲಾ ಪಂಚಾಯತ್ ಯಾದಗಿರಿ ಸಭಾಂಗಣದಲ್ಲಿ ನಡೆದ DCC /DLRC
ಸಭೆಯು ಶ್ರೀ ಲವೀಶ್ ಒರಡಿಯ ಮಾನ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿತು . ಸರ್ಕಾರ ಮಹತ್ವಾಕಾಂಕ್ಷಿ
ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು, ಪಿಎಂಎಸ್ಬಿವೈ , ಪಿಎಂಜೆಜೆಬಿವೈ ಯೋಜನೆಯಡಿ ನೋಂದಣಿಯಾಗಿ ಮೃತರಾದ
ಕುಟುಂಬದ ಸದಸ್ಯರಿಗೆ ನಾಲ್ಕು ಲಕ್ಷ ರೂ ಪರಿಹಾರ ಚೆಕ್ ವಿತರಣೆ ಮಾಡಿದರು ಮತ್ತು ಮುದ್ರಾ, ಉದ್ಯೋಗಿನಿ , ಟ್ಯಾಕ್ಸಿ
ಫಲಾನುಭವಿಗಳಿಗೆ ಆರ್ಥಿಕವಾಗಿ ಸಬಲರಾಗಲು 2 ಲಕ್ಷಗಳ ಚೆಕ್ ವಿತರಣೆ ಮಾಡಲಾಯಿತು.
ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಭವಿಷ್ಯದ ಆರ್ಥಿಕ ಸುರಕ್ಷತೆ ಹಾಗೂ ಭದ್ರತೆಗೆ ಸರಕಾರ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಹಾಗೂ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ವಿಮಾ ಯೋಜನೆ ಜಾರಿಗೊಳಿಸಿ,18 ವರ್ಷ ಮೇಲ್ಪಟ್ಟವರು ಈ ವಿಮೆಯಡಿ ಹೆಸರು
ನೋಂದಣಿಗೆ ಅರ್ಹರಾಗಿದ್ದು, ಪ್ರತಿಯೊಬ್ಬರೂ ಈ ಜನ ಸುರಕ್ಷಾ ಯೋಜನೆಯ ಲಾಭ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಿ, ಹೆಸರು
ನೋಂದಣಿಗೆ ಪ್ರೋತ್ಸಾಹ ನೀಡಿ ಎಂದು ಸೂಚಿಸಿದರು.
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆಗೆ ವಾರ್ಷಿಕ 20ರೂ.ಗಳು ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ವಿಮಾ
ಯೋಜನೆಗೆ ವಾರ್ಷಿಕ 436 ರೂಗಳು ಪಾವತಿಸಿ, ಎರಡು ವಿಮಾ ಯೋಜನೆಯಡಿ ಹೆಸರು ನೋಂದಾಯಿಸಿದರೆ ಪ್ರತಿ ವರ್ಷ 456ರೂ
ಪಾವತಿಸಿದರೆ, ವಿಮೆ ಮಾಡಿಕೊಂಡ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಎರಡು ವಿಮೆ ಸೇರಿ ಒಟ್ಟು 4ಲಕ್ಷ ರೂ ಮೃತನ ಕುಟುಂಬಕ್ಕೆ
ಸೇರುತ್ತದೆ ಎಂದು ಜನರಿಗೆ ಮನವರಿಕೆ ಮಾಡಿ ಎಂದರು.
ಅಪಘಾತದಲ್ಲಿ ಅಂಗವೈಕಲ್ಯ ಉಂಟಾದರೆ 1ಲಕ್ಷ ರೂ ಪರಿಹಾರ ಸಿಗುತ್ತದೆ. ಸಾಮಾನ್ಯ ಸಾವು ಉಂಟಾದರೆ, ಮೃತನ ಕುಟುಂಬಕ್ಕೆ 2 ಲಕ್ಷ
ರೂ. ಪರಿಹಾರ ರೂಪದಲ್ಲಿ ಆರ್ಥಿಕ ಸಹಾಯ ಸಿಗುತ್ತದೆ ಎಂದು ಜಾಗೃತಿ ಮೂಡಿಸಿ ಎಂದರು.
ಜನ ಸುರಕ್ಷಾ ಯೋಜನೆಗಳಡಿ ಹೆಸರು ನೋಂದಾಯಿಸಿಕೊಂಡ ವ್ಯಕ್ತಿ ಮೃತಪಟ್ಟ ಹಿನ್ನಲೆಯಲ್ಲಿ ಮೃತನ ಕುಟುಂಬದ ಅವಲಂಬಿತರಿಗೆ
ವಿಮೆಯ ಪರಿಹಾರ ಧನದ ಚೆಕ್ ಗಳನ್ನು ಬ್ಯಾಂಕ್ ಗಳ ವ್ಯವಸ್ಥಾಪಕರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ ಸಿಇಒ ಶ್ರೀ ಲವೀಶ್
ಒರಡಿಯಾ ಅವರು ವಿತರಿಸಿದರು.
ಸರಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆ PMSBY ಮತ್ತು PMJJBY ಕುರಿತು ಗ್ರಾಮೀಣ ಜನರಲ್ಲಿ ಹೆಚ್ಚು ಪ್ರಚಾರ ಮಾಡಿ
ವಿಮೆಯಡಿ ಹೆಸರು ನೋಂದಣಿಗೆ ಅರ್ಜಿ ಸ್ವೀಕರಿಸುವಲ್ಲಿ ಸಹಕರಿಸಿದ ಜಿಲ್ಲೆಯ ಅಧಿಕಾರಿಗಳಿಗೆ ಯಾದಗಿರಿ ಜಿಪಂ CEO ಶ್ರೀ ಲವೀಶ್
ಒರಡಿಯಾ ಅವರು ಪ್ರಶಂಸನಾ ಪತ್ರ ನೀಡಿ, ಗೌರವಿಸುವ ಮೂಲಕ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ ಚಟ್ನಲಿ ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯತ್, ಶ್ರೀ ದೇವರಮನಿ ಯೋಜನಾ ನಿರ್ದೇಶಕರು
ಜಿಲ್ಲಾ ಪಂಚಾಯತ್, ಶ್ರೀ ಹರಿಬನ್ಸ್ ನಾರಾಯಣ ಸಿಎಂ ಕ್ರೇಡಿಟ್ ಶ್ರೀ ಸುನೀಲ್ ಬತ್ತಿನಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು , ಶ್ರೀಮತಿ
ಯಮುನಾ ಪೈ ಡಿಡಿಎಂ ನಬಾರ್ಡ, ಶ್ರೀಮತಿ ನೀಶಾ ಠಾಕೂರ್ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಶ್ರೀ ಜಿ ಎಸ್ ಕೂಡ್ಲಿಗಿ
ಪ್ರಾದೇಶಿಕ ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶ್ರೀ ಕುಮಾರ ಸ್ವಾಮಿ , ಶ್ರಿ ಅಮೀರ್ ಪಟೇಲ್ ಲೀಡ್ ಬ್ಯಾಂಕ್ ಸಿಬ್ಬಂದಿ
ಮತ್ತು ಸರ್ಕಾರದ ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು

