|ಸ್ವಚ್ಛವಾಹಿನಿ ಸಿಬ್ಬಂದಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ |
ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ ಒರಡಿಯಾ
ಶ್ರೆದ್ದೆಯಿಂದ ಕೆಲಸ ಮಾಡಲು ಸ್ವಚ್ಛತಾ ಸಿಬ್ಬಂದಿಗೆ ಸೂಚನೆ
ಯಾದಗಿರಿ : 13-01-2026
ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಸ್ವಚ್ಛತಾ ವಾಹಿನಿ ಸಿಬ್ಬಂದಿಗಾಗಿ ಹಮ್ಮಿಕೊಂಡ ಸಾಮಥ್ಯ೯ ಅಭಿವೃದ್ಧಿ ಹಾಗೂ ಸ್ವ ಸಹಾಯ ಸಂಘಗಳ ಸಭೆಯಲ್ಲಿ ಸ್ವಚ್ಛತೆಯ ಕುರಿತು ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಲವೀಶ್ ಒರಡಿಯಾ ರವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ ಯಾದಗಿರಿ ತಾಲೂಕ ಪಂಚಾಯತ ಯಾದಗಿರಿ ಹಾಗೂ ಸಾಹಸ್ ಸಂಸ್ಥೆ ಹಾಗೂ ರೈನ್ ಮ್ಯಾಟರ ಫೌಂಡೇಶನ್, ಸ್ವಚ್ಛ ಭಾರತ ಮಿಷನ್ (ಗ್ರಾ) & ರಾಷ್ಟ್ರೀಯ ಗ್ರಾಮೀಣ ಜೀವನೋಪಯೋಗ ಅಭಿಯಾನ ಇವರ ಸಹಯೋಗದಲ್ಲಿ ಜನವರಿ 13 ರಂದು ಯಾದಗಿರಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಏರ್ಪಡಿಸಿದ ಸಾಮರ್ಥ್ಯ ಅಭಿವೃದಿ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮದ ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯತಿಯದ್ದಾಗಿದ್ದು, ಇದರ ಯಶಸ್ವಿಗೆ ಸ್ವಚ್ಛತಾ ಸಿಬ್ಬಂದಿ, ಗ್ರಾಮಸ್ಥರ ಸಹಕಾರ ಪ್ರಮುಖವಾಗಿದ್ದು ಪ್ರತಿ ಮನೆಯಿಂದ ಉತ್ಪತ್ತಿಯಾಗಿತ್ತಿರುವ ಘನತ್ಯಾಜ್ಯವನ್ನು (ಒಣ ಕಸ) ಸೂಕ್ತವಾಗಿ ವಿಲೇವಾರಿ ಮಾಡಲು ಜಾಗೃತಿ ಮೂಡಿಸಬೇಕಾಗಿದೆ ಇದರ ಜೊತೆ ಪ್ಲಾಸ್ಟಿಕ್ ಬಳಕೆಯ ವಸ್ತುಗಳನ್ನು ತ್ಯಜಿಸಿ, ಮರು ಬಳಕೆಯಾಗುವ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕೆ ಇದು ಪರಿಸರ ಸಂರಕ್ಷಣೆಯಲ್ಲಿ ನಮ್ಮಲ್ಲೆರ ಜವಾಬ್ದಾರಿಯಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯತಿಯಲ್ಲಿರುವ ಸ್ವಚ್ಛವಾಹಿನಿಯನ್ನು ಪ್ರತಿ ದಿನ ಓಡಿಸಬೇಕು ಗ್ರಾಮದಲ್ಲಿನ ಎಲ್ಲಾ ಮನ-ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿಕೊಂಡು ಬರಬೇಕು ಮನೆ, ಅಂಗಡಿ , ಹೋಟೇಲ್ ಮುಂತಾದ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಸಂಗ್ರಹಣೆ ಮಾಡಬೇಕು ಈ ಅಭ್ಯಾಸವನ್ನು ಪ್ರತಿ ಕುಟುಂಬದ ಸದಸ್ಯರು ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲರು ಶ್ರದ್ದೆಯಿಂದ ಕೆಲಸ ಮಾಡಲು ಸೂಚನೆ ನೀಡಿದರು.
ಗ್ರಾಮ ಪಂಚಾಯತಿಯೊಂದಿಗೆ ಒಡಂಬಡಿಕೆಯಾಗಿರುವ GPLF ನ ಸ್ವ- ಸಹಾಯ ಸಂಘದ ಸದಸ್ಯರು ತ್ಯಾಜ್ಯ ನಿರ್ವಹಣೆಯಲ್ಲಿ ತೊಡಬೇಕು ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಯ ಶ್ರಮ ಮುಖ್ಯವಾಗಿದೆ.
ಈ ಕಾರ್ಯಗಾರದಲ್ಲಿಠಾಣಗುಂದಿ ಸ್ವಚ್ಛವಾಹಿನಿ ಚಾಲಕಿ ವಿಜಯಕ್ಷ್ಮೀ ಮತ್ತು ರಾಮಸಮುದ್ರಾ ಗ್ರಾಮ ಪಂಚಾಯತಿಯ ಸ್ವಚ್ಛವಾಹಿನಿ ಸಿಬ್ಬಂದಿಯವರಿಗೆ ಉತ್ತಮಕೇಲಸಮಾಡುತ್ತಿರುವುದರಿಂದ ಪ್ರಶಂಸನಾ ಪತ್ರ ನೀಡಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ತ್ಯಾಜ್ಯ ಸಂಗ್ರಹಣೆ ಮಾಡಿ ಸೂಕ್ತ ವಿಲೇವಾರಿ ಮಾಡುವ ಗ್ರಾಮ ಪಂಚಾಯತಿಗಳಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಯವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಈ ವೇಳೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾದೇವ ಬಾಬಳಗಿ ಬಾಬಳಗಿ, ತಾಲೂಕ ಯೋಜನಾಧಿಕಾರಿಗಳಾದ ಶಶಿಧರ ಹಿರೇಮಠ ಇವರು ಉಪಸ್ಥಿತರಿದ್ದರು.
ತರಬೇತಿಯ ಕುರಿತು ಪ್ರಾಸ್ತಾವಿಕ ಮತ್ತು ತರಬೇತಿಯ ಉದ್ದೇಶ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಐಇಸಿ ಸಂಯೋಜಕ ಶಿವಕುಮಾರ ಮಾತನಾಡಿದರು,
ಸಾಹಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರವಿಚಂದ್ರ ಚಟ್ನಳ್ಳಿ, ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕರಾದ ವೆಂಕಟೇಶ್, ನಾರಾಯಣ ತರಬೇತಿ ನೀಡಿದರು.
ಇ ವೇಳೆ NRLM ಯೋಜನೆಯ ಡಿಪಿಎಂ ಗೀರಿಶ್, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ವಾಹಿನಿ ಸಿಬ್ಬಂದಿಗಳು ಹಾಗೂ MBK ಇದ್ದರು.

