Home ರಾಜಕೀಯ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?

ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?

by Laxmikanth Nayak
0 comments
ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?

ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?

ಬೆಳಗಾವಿ: ಕಂದಾಯ ಸಚಿವರಿಂದ ಕೆರೆ ಸೇರಿದಂತೆ ಸರ್ಕಾರದ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕುರಿತು ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷಗಳು ವಿಧಾನಸಭೆಯಲ್ಲಿಂದು ಆಗ್ರಹಿಸಿದ್ದರಿಂದ ಸಣ್ಣ ಪ್ರಮಾಣದ ವಾಗ್ವಾದ ನಡೆಯಿತು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡ ಅವರು ಕೆರೆಯನ್ನು ನುಂಗಿದ್ದಾರೆ. ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದನ ನಡೆಯುವ ವೇಳೆ ತಪ್ಪು ಸಂದೇಶ ಹೋಗಬಾರದು. ಸಚಿವರು ಈಗಾಗಲೇ ಸದನದ ಹೊರಗೆ ಸ್ಪಷ್ಟನೆ ನೀಡಿದ್ದಾರೆ. ಸದನದಲ್ಲೂ ಹೇಳಿಕೆ ಕೊಟ್ಟು ಗೊಂದಲ ಬಗೆಹರಿಸಲಿ ಎಂದರು.

ಈ ವಿಚಾರವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ ಎಂದು ಸಭಾಧ್ಯಕ್ಷರು ಹೇಳಿದರು.ಸಚಿವರು ಸದನದಲ್ಲೇ ಇದ್ದಾರೆ, ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಡಲಿ. ಈ ಸಂಬಂಧಪಟ್ಟಂತೆ ದಾಖಲಾತಿಗಳು ಬಿಡುಗಡೆಯಾಗಿದೆ. ಸಚಿವರ ಹೇಳಿಕೆಯಿಂದ ಎಲ್ಲವೂ ಬಗೆಹರಿಯಬಹುದು ಎಂದು ಅಶೋಕ್‌ ಹೇಳಿದರು.

banner

ಎದ್ದು ನಿಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸದನದಲ್ಲಿ ಯಾವುದೇ ಸದಸ್ಯರ ಬಗ್ಗೆ ಆರೋಪ ಮಾಡಬೇಕಾದರೆ ಒಂದು ವಾರಕ್ಕಿಂತ ಮೊದಲು ನೋಟಿಸ್‌‍ ನೀಡಬೇಕಿದೆ. ಈ ವಿಷಯದಲ್ಲಿ ನನ್ನ ಹಕ್ಕನ್ನು ಬಿಟ್ಟುಕೊಡುತ್ತೇನೆ. ವಾರಕ್ಕಿಂತ ಮೊದಲು ನೋಟೀಸ್‌‍ ಬೇಕು ಎಂದು ಒತ್ತಾಯಿಸುವುದಿಲ್ಲ. ನಾನು ಚರ್ಚೆಗೆ ಸಿದ್ಧನಿದ್ದೇನೆ, ವಿರೋಧ ಪಕ್ಷದವರು ಏನು ಬೇಕಾದರೂ ಹೇಳಲಿ, ನಾನು ಉತ್ತರ ಕೊಡುತ್ತೇನೆ ಎಂದರು.

ವಿ.ಸುನೀಲ್‌ ಕುಮಾರ್‌, ಸಚಿವರೇ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಲಿ. ನಾವು ಆರೋಪ ಮಾಡುತ್ತಿಲ್ಲ. ಹೊರಗಡೆ ಈ ವಿಚಾರ ಚರ್ಚೆಯಾಗಿದೆ. ಸದನದಲ್ಲಿ ನೀಡಬೇಕಾದ ಹೇಳಿಕೆಯನ್ನು ಸಚಿವರು ಸದನದ ಹೊರಗೆ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ಸಚಿವ ಕೃಷ್ಣ ಭೈರೇಗೌಡ ಅವರ ನೆರವಿಗೆ ಬಂದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌, ಇದು ಸಂಪೂರ್ಣ ಖಾಸಗಿ ವಿಚಾರ. ಹೀಗಾಗಿ ಸದನದ ಹೊರಗೆ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು. ಸಚಿವರು ಸಿದ್ಧರಿರುವಾಗ ಅವರಿಂದ ಹೇಳಿಕೆ ಕೊಡಿಸಿ ಎಂದು ಆರ್‌.ಅಶೋಕ್‌ ಪಟ್ಟು ಹಿಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್‌, ಸಚಿವರು ಸಿದ್ದರಿದ್ದಾರೆ ನೀವೂ ಸಿದ್ಧರಿದ್ದೀರಾ. ಆದರೆ ನಾನು ಸಿದ್ಧನಿಲ್ಲ. ನನಗೆ ವಿತ್ತೀಯ ಕಾರ್ಯಕಲಾಪ ನಡೆಯಬೇಕು. ಮಸೂದೆಗಳು ಚರ್ಚೆ ಆಗಬೇಕು. ಸಮಯ ಇಲ್ಲದ ಕಾರಣ ಈ ವಿಚಾರಕ್ಕೆ ಈಗ ಅವಕಾಶ ನೀಡುವುದಿಲ್ಲ ಎಂದು ಹೇಳಿ ಪೂರಕ ಅಂದಾಜುಗಳ ಚರ್ಚೆಗೆ ಅನುಮತಿ ನೀಡಿದರು.

ಪೊಲೀಸರು ಉತ್ತಮವಾಗಿ ಮತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದರಿಂದಲೇ ಅನೇಕ ಅಪರಾಧ ಪ್ರಕರಣಗಳನ್ನು ಬೇಧಿಸಿದ್ದಾರೆ. ಸಾವಿರಾರು ಕೋಟಿ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಮರುಕಳಿಸುತ್ತವೆ. ನಮ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂಬುದು ನಮ ಮೊದಲ ಷರತ್ತು. ಪ್ರತಿ ತಿಂಗಳು ಹಿರಿಯ ಅಧಿಕಾರಿಗಳು ಅವರಿಗೆ ಕೆಳಹಂತದವರಿಗೆ ಕರ್ತವ್ಯ ನಿರ್ವಹಣೆ ಕುರಿತು ಮೌಲ್ಯ ಮಾಪನ ನಡೆಸುತ್ತಾರೆ ಎಂದು ತಿಳಿಸಿದರು.

ನಮ ಸರ್ಕಾರ ಬಂದ ಎರಡು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಹೇಳುವುದು ಸರಿಯಲ್ಲ. ಇದು ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ಆಯಾ ಕಾಲಕ್ಕೆ ಕಾನೂನು ವ್ಯವಸ್ಥೆ ಕಾಪಾಡಿ ಶಾಂತಿ ನೆಲೆಸುವಂತೆ ಮಾಡುವುದು ನಮ ಕರ್ತವ್ಯ ಎಂದರು.

ರಾಜ್ಯದಲ್ಲಿ ಒಟ್ಟು 1999 ಪೊಲೀಸ್‌‍ ಠಾಣೆಗಳಿವೆ. ಇದರಲ್ಲಿ 1,06,000 ಸಿಬ್ಬಂದಿಗಳಿದ್ದಾರೆ. ಪ್ರತಿಯೊಬ್ಬರಿಗೂ ಅಪರಾಧದಲ್ಲಿ ಶಾಮೀಲಾಗದಂತೆ ಸೂಚನೆ ನೀಡುತ್ತೇವೆ. ಆದರೂ ಕೆಲವು ಪ್ರಕರಣಗಳಲ್ಲಿ ಶಾಮೀಲಾಗುತ್ತಾರೆ. ಅಂಥವರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತೇವೆ ಎಂದು ಹೇಳಿದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಅಕ್ರಮ ಮದ್ಯದ ವಿರುದ್ಧ ಅಣಿಬಿಯಲ್ಲಿ ಜಾಗೃತಿ ಜಾಥಾ ರಾಯಚೂರು ಕೃಷಿ ವಿವಿ: ದಲಿತರ ಮೀಸಲಾತಿ ಸಹಿಸದವರಿಂದ ನೇಮಕಾತಿ ತಡೆಗೆ ಸಂಚು; ಜ.17ರ ಪರೀಕ್ಷೆಗೂ ಅಡ್ಡಿ ಸಾಧ್ಯತೆ? - ದಲಿ... ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ಒರಡಿಯಾ ದೇವತ್ಕಲ್–ಬಾಚಿಮಟ್ಟಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದ... ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?