2
ಕೊಪ್ಪಳ : ನಗರದ ಮಿಟ್ಟಿಕೇರಿ ಬಡಾವಣೆಯ ನಿವಾಸಿಯಾದ ರುಬಿಯಾ ಬಾನು ಗಂಡ ಸಾಧಿಕ್ ಅಲಿ ಅಳವಂಡಿ ಇವರ ಮಗನಾದ ಮೊಹಮ್ಮದ್ ಅರ್ಮಾನ್ ಅಲಿ ಕಾಣೆ ಆಗಿರುವುದನ್ನು ತೀವ್ರದಲ್ಲಿ ಪತ್ತೆ ಹಚ್ಚಲು ಆಗ್ರಹಿಸಿ ಕರೀಮ್ ಪಾಷಾ ಎಂ.ಗಚ್ಚಿನ ಮನಿ ಅವರ ನೇತೃತ್ವದಲ್ಲಿ ಬುಧವಾರ ವಿವಿಧ ಸಂಘಟನೆಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ರಾಮ್ ಎಲ್.ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಪ್ಪಳ ನಗರದ ಮಿಟ್ಟಿಕೇರಿ ಬಡಾವಣೆಯ ನಿವಾಸಿಯಾದ ರುಬಿಯಾ ಬಾನು ಗಂಡ ಸಾಧಿಕ್ ಅಲಿ ಅಳವಂಡಿ ಇವರ ಮಗನಾದ ಮೊಹಮ್ಮದ್ ಅರ್ಮಾನ್ ಅಲಿ 04 ವರ್ಷದ ಬಾಲಕ ದಿನಾಂಕ, 02-09-2025 ರಂದು ಕಾಣೆಯಾಗಿರುವ ಕಾರಣ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು.ಸದರಿ ಬಾಲಕ ಸುಮಾರು ಎಂಟು ದಿವಸ ಕಳೆದರೂ ಇಲ್ಲಿಯವರೆಗೆ ಪತ್ತೆ ಆಗದೆ ಇರುವ ಕಾರಣ ದಿನನಿತ್ಯ ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿರುವ ಬಡ ಕುಟುಂಬದ ಮಗನ ಪತ್ತೆಗಾಗಿ ಸಂಬಂಧಪಟ್ಟ ಠಾಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಅಹಿಂದ ಮುಖಂಡ ಕರೀಮ್ ಪಾಷಾ ಎಂ.ಗಚ್ಚಿಮನಿ.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಎಂ.ಎಸ್.ಕೆ.ಶಫಿಕ್. ಕಾಣೆಯಾದ ಮೊಹಮ್ಮದ್ ಅರ್ಮಾನ್ ಅಲಿಯ ತಂದೆ ಸಾಧಿಕ್ ಅಲಿ ಅಳವಂಡಿ. ಆಟೋರಿಕ್ಷಾ ಚಾಲಕರ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಗವಿಸಿದ್ದಪ್ಪ ಚಾಕ್ರಿ. ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ.ಮೌಲಾ ಹುಸೇನ್ ಕೋಲ್ಕಾರ್.ಮಹೆಬೂಬ್ ಅರಗಂಜಿ. ಜಮಾಲ್ ದಫೇದಾರ್.ಮಾನವಿ ಪಾಷಾ ಮುಂತಾದವರು ಕೋರಿದ್ದಾರೆ.
