ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ ಮಹಾ ಮಾನವತಾವಾದಿ ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್
ಕೊಪ್ಪಳ : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಕ್ರೌರ್ಯ ಇಡೀ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಂದಿನ ಕಾಲಘಟ್ಟದೊಳಗ ಅವರು ಜೀವವಿರೋಧಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿರುವುದಿದೆಯಲ್ಲ ಅವರ ಈ ಜೀವಪರ ಕಾಳಜಿಯನ್ನು ನಾವು ಅದೇಷ್ಟು ಸ್ಮರಿಸಿದರು ಕಡಿಮೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಬಸವರಾಜ್ ಶೀಲವಂತರ್ ಹೇಳಿದರು.
ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮದಿನದ ಅಂಗವಾಗಿ ಭ್ರಾತೃತ್ವ ಸಮಿತಿಯಿಂದ ನಡೆದ ಪ್ರವಾದಿಯವರ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸವರಾಜ್ ಶೀಲವಂತರ್ ಅವರು ಮುಂದುವರೆದು ಮಾತನಾಡಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು, ಮೌಡ್ಯತೆ ಹಾಗೂ ಜಾತಿಯತೆ ಅಳಿಯಬೇಕು.
ಇಡೀ ಜಗತ್ತು ಹಸಿವು ಮುಕ್ತವಾಗಬೇಕು , ಶಾಂತಿ ಸೌಹಾರ್ದತೆ ಉಳಿಯಬೇಕು. ಇವು ಅವರ ಆಶಯವಾಗಿತ್ತು. ಒಳ್ಳೆಯ ಆಲೋಚನೆಗಳು. ವಿಚಾರಗಳನ್ನು ಇಟ್ಟುಕೊಂಡು ದೊಡ್ಡ ಧ್ವನಿ ಎತ್ತಿ ಹೋರಾಟ ಮಾಡಿದಂತವರು.ಪೈಗಂಬರ್ ರವರು ಯಾವುದೇ ಒಂದು ಜಾತಿಗೆ.ಧರ್ಮಕ್ಕೆ ಸೀಮಿತ ಆದವರಲ್ಲ. ಅವರು ಜಗತ್ತು ಕಂಡ ಶ್ರೇಷ್ಠ ಮಹಾ ಮಾನವತಾವಾದಿ. ಅವರು ಯಾವುದೋ ಒಂದು ಜಾತಿಗೆ, ಸಮುದಾಯಕ್ಕೆ ಸೀಮಿತವಾಗಿಲ್ಲ.ಎಲ್ಲ ಅವರ ಮೌಲ್ಯಯುತ ವಿಚಾರಗಳನ್ನು ನಾವು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಬೇಕು ಅಂದಾಗಲೇ ಅವರ ಕುರಿತಾದ ಈ ತರಹದ ಆಚರಣೆಗಳಿಗೆ ಅರ್ಥ ಬರಲಿದೆ . ಜನರ ಒಳಿತಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವರಲ್ಲಿ ಪ್ರವಾದಿ ಪೈಗಂಬರ್.ಬುದ್ಧ. ಬಸವಣ್ಣ. ಅಂಬೇಡ್ಕರ್ ಆಗಿರಬಹುದು. ಈ ತರಹದವರು ಜಗತ್ತಿಗೆ ತಮ್ಮ ಹೋರಾಟದ ಗೋಸ್ಕರ ತಮ್ಮ ಜೀವ ಮುಡಿಪಾಗಿಟ್ಟಿದ್ದಾರೆ. ಇವರುಗಳನ್ನು ಮನುಷ್ಯರಾದ ನಾವು ಒಂದು ಜಾತಿಗೆ ಧರ್ಮಕ್ಕೆ ಸೀಮಿತ ಗೊಳಿಸುವದಿದೆಯಲ್ಲ ಅದು ಬಹಳ ಬೇಜಾರು ತರುತ್ತದೆ. ಇವತ್ತು ಈ ದೇಶದಲ್ಲಿ ಏನೆಲ್ಲ ಕೆಟ್ಟ ಬೆಳವಣಿಗೆಗಳು ಆಗುತ್ತಿವೆ.ತಿನ್ನುವ ಆಹಾರ, ಉಡುವ ಬಟ್ಟೆಗೆ ಜಾತಿಯ ಬಣ್ಣ ಮಾತನಾಡಿ ಎರಡು ಸಮುದಾಯಗಳ ಮಧ್ಯೆ ಬೆಂಕಿ ಹಚ್ಚುವಂತಹ ಕೆಲಸ ಮಾಡುತ್ತಾರೆ. ಕೋಮವಾದಿಗಳು ಪೈಗಂಬರ್ ರಂಥವರ ವಿಚಾರಗಳನ್ನು ತಿರುಚಿ ಬೆಂಕಿ ಹಚ್ಚುತ್ತಾರೆ. ಒಂದು ಸಮಾಧಾನದ ಸಂಗತಿ ಎಂದರೆ ಈ ದೇಶದ ಮುಸ್ಲಿಮರ ಬಗ್ಗೆ ನನಗೆ ಬಹಳಷ್ಟು ಹೆಮ್ಮೆ ಎನಿಸುತ್ತದೆ. ಸಮಾನತೆಯ ಪರಂಪರೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಮುಸ್ಲಿಮರು. ಅವರು ತಮ್ಮ ಮೇಲೆ ನಡೆದಂತಹ ದೌರ್ಜನ್ಯಗಳ ವಿರುದ್ಧ ಎಂದೂ ಪ್ರಚೋದನೆಗೊಂಡಿಲ್ಲ ಅಥವಾ ಅದರ ವಿರುದ್ಧ ತಿರುಗಿ ಬಿದ್ದಿಲ್ಲ. ಇವರನ್ನು ಪ್ರಚೋದನೆಗೊಳಿಸಿ. ಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರಬೇಕು ಅನ್ನುವ ಕೀಳು ರಾಜಕಾರಣವನ್ನು ಕೋಮುವಾದಿ ಪಕ್ಷಗಳು ಮಾಡುತ್ತಿವೆ. ಪ್ರವಾದಿ. ಬುದ್ಧ.ಬಸವ.ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡು ಒಟ್ಟಾಗಿ ಬಾಳೋಣ.ಇನ್ನೂ ಹಲವು ಕಡೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸೌಹಾರ್ದತೆಯ ಅರಿವು ಮೂಡಿಸಲು ಮುಂದಾಗಿ ಎಂದು ಕರೆ ನೀಡಿದರು.
ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಪ್ರವಾದಿ ಮುಹಮ್ಮದ್ (ಸ.ಅ.) ಅವರು ಶ್ರೀಮಂತರಿರಲಿ ಬಡವರಿರಲಿ ಹಸಿದವರಿಗೆ ಉಣಿಸಿ. ತನ್ನ ಮನೆಯ ಎಡಕ್ಕೆ ನಲವತ್ತು. ಬಲಕ್ಕೆ ನಲವತ್ತು ಮನೆಗಳಲ್ಲಿ ವಾಸಿಸುವ ಯಾವುದೇ ಜಾತಿ ಧರ್ಮದ ಜನರು ಊಟ ಮಾಡದೇ ಹಸಿವಿನಿಂದಿದ್ದರೆ ಅಲ್ಲಿಯ ಮುಸ್ಲಿಮನೇ ಹೊಣೆಗಾರನಾಗುತ್ತಾನೆ ಎಂದು ಹೇಳಿದ ಸಂದೇಶದ ತಾತ್ಪರ್ಯ ಎಲ್ಲಾ ಜಾತಿಯವರೊಂದಿಗೆ ಕೂಡಿ ಸೌಹಾರ್ದತೆಯಿಂದ ಬಾಳಲು ಸೂಚನೆಯಾಗಿದೆ ಎಂದು ವಿವರಿಸಿದರು.
ಕಾರ್ಮಿಕ ಮುಖಂಡರಾದ ಕೆ.ಬಿ.ಗೋನಾಳ ಮಾತನಾಡಿ ಇಸ್ಲಾಂ 6ನೇ ಶತಮಾನದಿಂದ ಇಷ್ಟೊಂದು ಪ್ರವರ್ಧಮಾನಕ್ಕೆ ಬಂದಿದ್ದು.ಜಗತ್ತಿನಲ್ಲಿ ಸುಮಾರು ಎರಡು ನೂರು ಕೋಟಿಗೂ ಹೆಚ್ಚು ಜನ ಅನುಯಾಯಿಗಳಿದ್ದಾರೆ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ವೇಗವಾಗಿ ಬೆಳೆದಂಥ ಇಸ್ಲಾಂ ಧರ್ಮ ಇದರ ಅರ್ಥ ಇದರಲ್ಲಿ ಸತ್ಯ ಹಾಗೂ ಅನುಸರಿಸುವುದಕ್ಕೆ ಸಾಕಷ್ಟು ಮೌಲ್ಯಗಳಿಗೆ ಎಂಬುದನ್ನು ಇದರಿಂದ ನಾವು ಅರ್ಥಮಾಡಿಕೊಳ್ಳಬೇಕು. ಪ್ರವಾದಿಯವರು ನಾವು ಸಹ ಬಾಳ್ವೆ ಹೇಗೆ ನಡೆಸಬೇಕು. ನಾವು ಮನುಷ್ಯರಾಗಿ ಸಮಾನತೆಯಿಂದ ಹೇಗೆ ಇರಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.ಪುರುಷ.ಮಹಿಳೆ ಅವರವರ ಹಕ್ಕುಗಳಿಗೆ ಬಾಧ್ಯಸ್ತರಾಗಿರುವುದು. ಬಡತನದಲ್ಲಿರುವವರಿಗೆ. ನಿರ್ಗತಿಕರಿಗೆ ಝಕಾತ್ ಆಧಾರವಾಗಿದೆ. ಇಂತಹ ಸಾಕಷ್ಟು ಆದರ್ಶ ಪದ್ಧತಿಗಳೇ ರಹ ದಾರಿಯಾಗಿವೆ.ಇದನ್ನು ಧಾರ್ಮಿಕವಾಗಿ ಅಷ್ಟೇ ನೋಡದೆ ಮನಕುಲದ ಅಭಿವೃದ್ಧಿಗೆ ಸನ್ಮಾರ್ಗವಾಗಿದೆ.ನಾವು ಧಾರ್ಮಿಕವಾಗಿ ಅಷ್ಟೇ ಅಲ್ಲ ವೈಚಾರಿಕವಾಗಿಯೂ ಸ್ವೀಕರಿಸಬಹುದು ಎಂದು ಹೇಳಿದರು.
ಇನ್ನೊಬ್ಬ ಕಾರ್ಮಿಕ ಮುಖಂಡ ಶರಣು ಗಡ್ಡಿ ಮಾತನಾಡಿ ಪ್ರಜಾಪ್ರಭುತ್ವ ಇಲ್ಲದ ಹಳೆ ಕಾಲಘಟ್ಟದಲ್ಲಿ ಬಂದ ಪ್ರವಾದಿಗಳು ಜಗತ್ತಿಗೆ ಪ್ರೀತಿ ಕೊಟ್ಟಿದ್ದಾರೆ.ಪ್ರವಾದಿಗಳ ಹತ್ತಿರ ಪುರುಷರು. ಮಹಿಳೆಯರು ಯಾರೇ ಬಂದು ಎಂಥಾ ಜಟಿಲ ಪ್ರಶ್ನೆಗಳನ್ನು ಕೇಳಿದರೂ ಬಹಳ ಸರಳವಾಗಿ ಸಂಕ್ಷಿಪ್ತವಾಗಿ ಸ್ಪಷ್ಟ ಉತ್ತರ ಕೊಡುತ್ತಿದ್ದರು. ಮೊಹಮ್ಮದ್ ಪ್ರವಾದಿ ಅವರು ಹೇಳಿ ಕೊಟ್ಟಂತಹ ವಿಚಾರಗಳನ್ನು. ನಡೆದುಕೊಂಡಂತಹ ದಾರಿ ಮತ್ತು ಎಲ್ಲಾ ಧರ್ಮಗಳು ಹೇಳುವಂತಹ ಸೌಹಾರ್ದತೆಯ ಸಂದೇಶ ಹೆಚ್ಚೆಚ್ಚು ಜನರಿಗೆ ತಲುಪಿಸಬೇಕು ಎಂದು ನುಡಿದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಹೇಳಿದಂತೆ ಯಾರೂ ಹಸಿವಿನಿಂದ ಇರಬಾರದು ಎನ್ನುವಂತೆ ಯೇಸುಕ್ರಿಸ್ತನು ಸಹ ತನ್ನಲ್ಲಿ ಎರಡು ರೊಟ್ಟಿಗಳಿದ್ದರೆ ಒಂದನ್ನು ಹಸಿದವರಿಗೆ ಹಂಚಿ ತಿನ್ನು ಎಂದಿದ್ದಾರೆ. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂಬ ವಚನ ನುಡಿದಿದ್ದಾರೆ.ಇಂತಹ ಮಹಾನೀಯರನ್ನು ನಾವು ಅನುಸರಿಸಬೇಕು ಎಂದು ಕೋರಿದರು.
ಹಟಗಾರ ಪೇಟೆಯ ಮುಸ್ಲಿಮ್ ಪಂಚ ಕಮಿಟಿಯ ಹಿರಿಯ ಮುಖಂಡ ಖಾಸಿಮ್ ಸಾಬ್ ಲೇಬಗೇರಿ ಮಾತನಾಡಿ ಪ್ರವಾದಿ ಮೊಹಮ್ಮದ್(ಸ.ಅ.) ಸಾರಿದಂತಹ ಶಾಂತಿ ಸಂದೇಶಗಳನ್ನು ಮುಸ್ಲಿಮರು ಪಾಲಿಸಿಕೊಂಡು ಬೇರೆ ಧರ್ಮ ಕೂಡ ಸಹಿಷ್ಣತೆಯಿಂದ ಜೊತೆಗೆ ಕರೆದುಕೊಂಡು ನಾವೆಲ್ಲರೂ ಅಣ್ಣ ತಮ್ಮರಾಗಿ ಈ ದೇಶವನ್ನು ಮುನ್ನಡೆಸಿಕೊಂಡು ಹೊಂಟಿದ್ದೇವೆ.ಇಲ್ಲದೆ ಹೋದರೆ ಈ ದೇಶಕ್ಕೆ ಅನಾಹುತ ಕಾದಿದೆ. ಕೋಮುವಾದಿಗಳ ಬಗ್ಗೆ ಎಚ್ಚರ ವಹಿಸಬೇಕು.ಹಬ್ಬಗಳು ಬಂದರೆ ಯಾಕೆ ಬರುತ್ತವೆ ಎಂಬ ಭಯ ಕಾಡುತ್ತದೆ. ಆದರೂ ನಮ್ಮ ಕೊಪ್ಪಳ ನೂರಕ್ಕೆ ನೂರು ಬಹಳ ಉತ್ತಮ.ನಾವೆಲ್ಲರೂ ಒಂದಾಗಿ ಭ್ರಾತೃತ್ವದಿಂದ ಬಾಳೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ.ಅಹಿಂದ ಮುಖಂಡ ಕರೀಮ್ ಪಾಷಾ ಗಚ್ಚಿನ ಮನಿ.ಗಾಳೆಪ್ಪ ಮುಂಗೋಲಿ.ಗವಿ ಹಲಗಿ. ಗೌಸ್ ನೀಲಿ.ಸುಂಕಪ್ಪ ಮೀಸಿ ಮುಂತಾದವರು ಮಾತನಾಡಿದರು.
ಖಾಜಾ.ಕಿರಾಣಿ ವ್ಯಾಪಾರಿ ಖಾಸೀಮ್ ನೀಲಿ. ಮಹೆಬೂಬ್ ಡಬಲ್ ರೋಟಿ. ಮುಂತಾದವರು ಉಪಸ್ಥಿತರಿದ್ದರು.

