ಸಾಲು ಮರದ ತಿಮ್ಮಕ್ಕ ನೆನಪಿನಲ್ಲಿ: ವಡಗೇರಾ ಡಿಡಿಯು ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ
ವಡಗೇರಾ, ನ.15: ಪರಿಸರ ಸಂರಕ್ಷಕ ದಿ. ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ವಡಗೇರಾ ಡಿಡಿಯು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ನಿರ್ವಹಣಾ ಮಂಡಳಿಯು ಆಯೋಜಿಸಿತ್ತು.
ಪರಿಸರ ಜಾಗೃತಿಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮೊದಲು ತಿಮ್ಮಕ್ಕ ಅವರ ಪರಿಸರ ಪ್ರೀತಿಯನ್ನು ಸ್ಮರಿಸಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಶ್ರೀ ಜಸ್ಟಿನ್ ಕೆ.ಎಸ್. ಅವರು ಮಾತನಾಡಿ, ತಿಮ್ಮಕ್ಕ ಅವರ ಪರಿಸರ ಸೇವೆ ಮತ್ತು ಅವರು ಕೈಗೊಂಡ ಸಮಾಜಮುಖಿ ಕಾರ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಸಹ ಶಿಕ್ಷಕರಾದ ಶ್ರೀ ನಮಾನಂದ ಅವರು ವಿದ್ಯಾರ್ಥಿಗಳಿಗೆ ತಿಮ್ಮಕ್ಕ ಅವರ ಹೋರಾಟ, ಸಾಧನೆ ಹಾಗೂ ಪರಿಸರ ಸಂರಕ್ಷಣೆಗೆ ಅವರ ಕೊಡುಗೆಗಳ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಂಡಪ್ಪ ಸರ್, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪರಿಸರ ಜಾಗೃತಿ ಮೂಡಿಸಿದರು.

