ಯಾದಗಿರಿ: ಬಿಹಾರ ಶಾಸಕಾಂಗ ಚುನಾವಣೆಯ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದರು.
ಶುಕ್ರವಾರ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಸವಂತಪುರ ಗ್ರಾಮದಲ್ಲಿ ಎನ್‌ಡಿಎ ಗೆಲುವಿನ ಹಿನ್ನೆಲೆಯಲ್ಲಿ ನೂರಾರು ರೈತರೊಂದಿಗೆ ತಮ್ಮ ಜನ್ಮದಿನವನ್ನು ಸಂಯುಕ್ತವಾಗಿ ಆಚರಿಸಿದ ಮಾಗನೂರ ಅವರು, ದೇಶಾದ್ಯಂತ ಇಂದು ಬಿಜೆಪಿ ಪರ ಅಲೆ ಎದ್ದಿದೆ ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ದೃಢಪಡಿಸಿದೆ ಎಂದು ಹೇಳಿದರು.
ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ‘ವೋಟ್ ಚೋರಿ’ ಎಂಬ ಸ್ಲೋಗನ್‌ನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಖಮಾಡಿದರೂ, ಮತದಾರರು ಅದನ್ನು ತಳ್ಳಿ ಹಾಕಿದ್ದಾರೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಮೇಲೆ ನಿಷ್ಪಕ್ಷಪಾತ ಕಾರಣವಿಲ್ಲದೆ ಆರೋಪ ಮಾಡುವ ಮೂಲಕ ಕೋಟ್ಯಾಂತರ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಲಾಗಿದೆ. ಜನತೆ ಅದಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಗನೂರ ಟೀಕಿಸಿದರು.
ಮುಂದಿನ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಹಾರ ಫಲಿತಾಂಶ ದಿಕ್ಕು ತೋರುತ್ತಿದ್ದು, ರಾಷ್ಟ್ರವ್ಯಾಪಿಯಾಗಿ ಬಿಜೆಪಿ ಮತ್ತಷ್ಟು ಬಲವಾದ ಪಕ್ಷವಾಗಿ ಹೊರಹೊಮ್ಮುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಮರಕಲ್, ಮಲ್ಲಿಕಾರ್ಜುನ ಕಂದಕೂರ, ವೀರೇಶ, ನಾಗರಾಜ ಬೀರಾದಾರ, ಶಿವಪ್ಪ, ಭೀಮನಗೌಡ ದಳಪತಿ, ರಾಯಗೌಡ ಐಕುರ, ಮೌನೇಶ ಹಾಗೂ ನೂರಾರು ರೈತರು ಹಾಜರಿದ್ದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಗನೂರ ಹರ್ಷ: ರೈತರೊಂದಿಗೆ ಜನ್ಮದಿನ ಹಾಗೂ ವಿಜಯೋತ್ಸವ
3
