Home ಜಿಲ್ಲಾ ಸುದ್ದಿಗಳು ಶ್ರಮ ಸಂಸ್ಕೃತಿಯ ಪ್ರತಿಪಾದಕರು ನಾಡೋಜ ಬರಗೂರು: ಡಾ. ಹೊನ್ಕಲ್

ಶ್ರಮ ಸಂಸ್ಕೃತಿಯ ಪ್ರತಿಪಾದಕರು ನಾಡೋಜ ಬರಗೂರು: ಡಾ. ಹೊನ್ಕಲ್

by Laxmikanth Nayak
0 comments
ಶ್ರಮ ಸಂಸ್ಕೃತಿಯ ಪ್ರತಿಪಾದಕರು ನಾಡೋಜ ಬರಗೂರು: ಡಾ. ಹೊನ್ಕಲ್

ಗುರುಮಿಠಕಲ್ ಕಾಲೇಜಿನಲ್ಲಿ ‘ಸ್ವಪ್ನಮಂಟಪ’ ಚಿತ್ರ ಪ್ರದರ್ಶನ; ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಕಾರ್ಯಕ್ಕೆ ಶ್ಲಾಘನೆ

ಗುರುಮಿಠಕಲ್ (ಯಾದಗಿರಿ ಜಿಲ್ಲೆ): ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಶ್ರಮ ಸಂಸ್ಕೃತಿಯ ಪ್ರತಿಪಾದಕರು. ಈ ಕಾರಣಕ್ಕಾಗಿಯೇ ಅವರು “ಬೆವರೇ ನಮ್ಮ ದೇವರು” ಎಂದು ಸಾರಿದ್ದಾರೆ ಎಂದು ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಬರಗೂರು ರಾಮಚಂದ್ರಪ್ಪ ಅವರೇ ನಿರ್ದೇಶಿಸಿದ ಸ್ವಪ್ನಮಂಟಪ” ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶಯ ನುಡಿ ಆಡುತ್ತಾ ಅವರು ಮಾತನಾಡಿದರು.

“ಕೋಗಿಲೆಗಿಂತ ಹಂಚಿಕೊಂಡು ತಿನ್ನುವ ಕಾಗೆ ನಮಗೆ ಮುಖ್ಯ. ಶ್ರೀಗಂಧದ ಮರವನ್ನು ನಾವು ಕಂಡಿಲ್ಲ. ನಮ್ಮ ಸುತ್ತಲೂ ಇರುವ ಜಾಲಿಯೇ ನಮ್ಮ ಸಾಹಿತ್ಯ ರಚನೆಗೆ ಪ್ರತಿಮೆಯಾಗಬೇಕು ಎಂದು ಪ್ರತಿಪಾದಿಸುವ ಈ ನಾಡು ಕಂಡ ಶ್ರೇಷ್ಠ ಲೇಖಕರಲ್ಲಿ ಬರಗೂರರು ಒಬ್ಬರು” ಎಂದು ಡಾ. ಹೊನ್ಕಲ್ ಬರಗೂರರ ಚಿಂತನೆಯನ್ನು ಪರಿಚಯಿಸಿದರು.

ಗಡಿನಾಡಿನಲ್ಲಿ ಕನ್ನಡದ ಗೀತೆ

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಅವರು ಮಾತನಾಡಿ, ಆಂಧ್ರದ ಗಡಿನಾಡು ಆದ ನಮ್ಮ ಗುರುಮಿಠಕಲ್ ಪದವಿ ವಿದ್ಯಾರ್ಥಿಗಳಿಗೆ ಚಾರಿತ್ರಿಕ ಹಾಗೂ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿದ ‘ಸ್ವಪ್ನಮಂಟಪ’ ಚಿತ್ರವನ್ನು ತೋರಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಸಾರ್ಥಕ ಕೆಲಸ ಮಾಡಿದ ನಾಡೋಜ ಬರಗೂರು ಹಾಗೂ ಡಾ. ಹೊನ್ಕಲ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

banner

ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ, ವಿಶ್ರಾಂತ ಪ್ರಾಂಶುಪಾಲ ಲಕ್ಷ್ಮಯ್ಯ ಕಲಾಲ್, ಮತ್ತು ಡಾ. ಬಾಬುರಾಯ ದೊರೆ ಮುಂತಾದವರು ಉಪಸ್ಥಿತರಿದ್ದರು. ಡಾ. ಮರೆಪ್ಪ ನಾಟೇಕಾರ ಅವರು ಕಾರ್ಯಕ್ರಮ ನಿರ್ವಹಿಸಿ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ