ಜನ ಆಕ್ರೋಶ ವಿಡಿಯೋ ವೈರಲ್ ಫಲಶೃತಿ
ಯಾದಗಿರಿ : ನವೆಂಬರ್ 28, : ಶಹಾಪೂರ ತಾಲೂಕಿನ ಬೇವಿನಹಳ್ಳಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ.ಮಂಜುನಾಥ ಅವರು ಹೇಳಿದರು.
ಶಹಾಪೂರ ತಾಲೂಕಿನ ಬೇವಿನಹಳ್ಳಿ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿ ಸಾರಿಗೆ ವಾಹನ ಚಾಲನೆ ನೀಡಿ ಅವರು ಮಾತನಾಡಿದರು.
ಶಹಾಪೂರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಮುಖ್ಯ ರಸ್ತೆದಿಂದ ಸುಮಾರು 1.6 ಕಿ.ಮೀ ಅಂತರದಲ್ಲಿ ರಸ್ತೆ ಸರಿಯಿಲ್ಲದ ಹಿನ್ನೆಲೆ ಗ್ರಾಮದಲ್ಲಿ ಬಸ್ ತಿರುಗಿಸಲು ಸ್ಥಳಾವಕಾಶ ವಿಲ್ಲದೇ ಇರುವುದರಿಂದ ಬೇವಿನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿರುವುದಿಲ್ಲ. ಪ್ರಸ್ತುತ ಈ ಗ್ರಾಮದ ಮಾರ್ಗ ಸರ್ವೇ ಮಾಡಿ ಪರಿಶೀಲಿಸಿ 2025ರ ನವೆಂಬರ್ 27 ರಿಂದ ಜಾರಿಗೆ ಬರುವಂತೆ ಬೇವಿನಹಳ್ಳಿ ಗ್ರಾಮದ ಶಾಲಾ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೇವಿನಹಳ್ಳಿ ಗ್ರಾಮದಿಂದ ದೋರನಹಳ್ಳಿಗೆ ಹೋಗಲು ಬೆಳಿಗ್ಗೆ 8.30 ಗಂಟೆಗೆ ಹಾಗೂ ದೋರನಹಳ್ಳಿದಿಂದ ಬೇವಿನಹಳ್ಳಿ ಗ್ರಾಮದ ಮುಖಾಂತರ ಶಹಾಪೂರಗೆ ಹೋಗಲು ಸಂಜೆ 5 ಗಂಟೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಈ ಬಸ್ ಸಂಚಾರದ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಿಬ್ಬಂದಿ ನಾಗರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

