ಕೊಪ್ಪಳ : ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್.ಟಿ.ಯು) ನೇತೃತ್ವದಲ್ಲಿ ನಡೆದ ಕಟ್ಟಡ ಕಾರ್ಮಿಕರ ಮತ್ತು ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಜಿಲ್ಲಾ ಸಂಚಾಲಕ ಸಮಿತಿ ಘೋಷಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್.ಟಿ.ಯು)ದ ಜಿಲ್ಲಾ ಸಂಚಾಲಕ ಸಮಿತಿ ರಚಿಸಿ ಘೋಷಿಸಲಾಯಿತು.
ಸಂಚಾಲಕರಾಗಿ ಹಿರಿಯ ಹೋರಾಟಗಾರ ಬಸವರಾಜ್ ಶೀಲವಂತರ್. ಎಸ್.ಎ.ಗಫಾರ್.ತುಕಾರಾಮ ಬಿ.ಪಾತ್ರೋಟಿ. ಪಾನಿಷಾ ಮಕಾಂದಾರ್. ಸಂಶುದ್ದೀನ್ ಮಕಾಂದಾರ್. ಗಾಳೆಪ್ಪ ಮುಂಗೋಲಿ. ಆಸಿಫ್ ಕಿಲ್ಲೇದಾರ್. ಬಸವರಾಜ್ ಮಂಡ್ಯ. ಬಸವರಾಜ್ ವೈ.ಜಿ. ಮುಂತಾದವರನ್ನು ಸಂಚಾಲಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಮುಖಂಡ ಎಸ್.ಎ.ಗಫಾರ್ ಮಾತನಾಡಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ಸೌಲಭ್ಯಗಳಿಗೆ ಅನಾವಶ್ಯಕ ತಾಂತ್ರಿಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.ಕಟ್ಟಡ ಕಾರ್ಮಿಕರು ಕ್ರಿಯಾಶೀಲರಾಗಿ ಸಂಘಟಿತಗೊಂಡು ಗ್ರಾಮ ಮತ್ತು ಬಡಾವಣೆ ಘಟಕಗಳನ್ನು ರಚಿಸಿಕೊಂಡು ಹೋರಾಟಕ್ಕಿಳಿದು ತಮಗಾಗುತ್ತಿರುವ ಸಮಸ್ಯೆಗಳನ್ನು.ಅನ್ಯಾಯ ಸ್ವತ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಹೋರಾಟಗಾರ ಬಸವರಾಜ್ ಶೀಲವಂತರ್ ಮಾತನಾಡಿ ಹೈಕೋರ್ಟ್ ವಕೀಲರಾದ ಎಸ್.ಬಾಲನ್ ಪ್ರಮುಖ ಪಾತ್ರ ವಹಿಸಿದ್ದರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದೆ.ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು. ಬಾಲನ್ ಅವರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಸಂಘಟನೆ ರಚಿಸಿಕೊಂಡು ಹೋರಾಟ ಮಾಡುವ ಮೂಲಕ ಸೌಲಭ್ಯಗಳನ್ನು ಪಡೆಯುವಂತೆ ಕರೆ ನೀಡಿದರು.
ಇನ್ನೊಬ್ಬ ಮುಖಂಡ ತುಕಾರಾಮ ಪಾತ್ರೋಟಿ ಮಾತನಾಡಿ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್.ಟಿ.ಯು.)ದ ನೇತೃತ್ವದಲ್ಲಿ ಇನ್ನೂ ಅನೇಕ ಹಳ್ಳಿಗಳಲ್ಲಿ ಕಟ್ಟಡ ಕಾರ್ಮಿಕರ ಸಂಘದ ಘಟಕಗಳನ್ನು ರಚಿಸಿಕೊಂಡು ಹೆಚ್ಚು ಕಟ್ಟಡ ಕಾರ್ಮಿಕರು ಸೇರಿಸಿಕೊಂಡು ಹೋರಾಟ ಮಾಡೋಣ ಎಂದು ಹೇಳಿದರು.
ಸಭೆಯಲ್ಲಿ ದಾವಲ್ ಸಾಬ್ ಹಾವೇರಿ. ಹನಮಂತ ಎಂ.ಮುಗಳಿ. ಪರಶುರಾಮ್ ಬಿ.ತುಗ್ಲಿ ಗೌಡ್ರು. ಪ್ರಕಾಶ್ ದೇವರಮನಿ. ಶರಣಪ್ಪ ವಾಲ್ಮೀಕಿ. ಮಂಜುನಾಥ್ ಇಟಗಿ. ಸಂತೋಷ್ ಕುಂಬಾರ್. ರಫೀಕ್ ಬಡಿಗೇರ್. ಉಮೇಶ್ ಕುರುಗೋಡ. ಹುಸೇನ್ ಸಾಬ್. ರಾಜಣ್ಣ ಮಡಿವಾಳರ್. ಮೊಮ್ಮದ್ ರಫಿ. ಅಲ್ಲಾಬಕ್ಷಿ ಬಡೆ ಸಾಬ್. ಭ್ರಮಪ್ಪ ನಾಯಕರ್. ಹನುಮಂತ ವಾಲಿಕರ್. ಪೀರ ಸಾಬ್. ಮಲ್ಲೇಶ್ ಎಂ.ಎಸ್. ಮುಂತಾದ ಅನೇಕ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
