10
ಕೊಪ್ಪಳ : ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಮತ್ತು ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಆಡಳಿತ ಭವನದ ಮುಂದೆ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣೆ ವಿಭಾಗದ ತಹಶೀಲ್ದಾರ್ ರವಿ ಕುಮಾರ್ ವಸ್ತ್ರದ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಮಿಕರ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆ ಕೇಂದ್ರ ಸರ್ಕಾರ ಹಿಂಪಡೆಯಲು ರಾಜ್ಯ ಸರ್ಕಾರ ಆಗ್ರಹಿಸಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸುತ್ತದೆ.ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನವೀಕರಣ ಕಾಲಾವಧಿ ಒಂದು ವರ್ಷಕ್ಕೆ ತಂದಿದ್ದು.ಸರ್ಕಾರದಲ್ಲಿ ಸೇವೆ ಸಲ್ಲಿಸುವ ನೌಕರರು ಸರ್ಕಾರಕ್ಕೆ ಸಕಾಲಕ್ಕೆ ತಮ್ಮ ದಾಖಲೆಗಳನ್ನು ಒದಗಿಸಲು ವಿಳಂಬ ಆಗುತ್ತದೆ.ಅಲ್ಲದೆ ಚುನಾಯಿತ ಪ್ರತಿನಿಧಿಗಳು ನಿಗದಿತ ಸಮಯದಲ್ಲಿ ದಾಖಲೆ ಮತ್ತು ಲೆಕ್ಕ ಪತ್ರ ನೀಡಿಲ್ಲವೆಂದು ಪತ್ರಿಕೆಗಳಲ್ಲಿ ಬಂದಿರುವುದು ಎಲ್ಲರಿಗೂ ಗೊತ್ತು. ಇವರು ವಿದ್ಯಾವಂತ ಪದವಿಧರರು ಆಗಿದ್ದು. ಕಟ್ಟಡ ಕಾರ್ಮಿಕರು ಅವಿದ್ಯಾವಂತರು. ಅರೆಬರೆ ಓದಿದವರು.ಪದವಿ ಪಡೆದವರೂ ಸಹ ತಮ್ಮ ವೃತ್ತಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಸದಾ ತಲ್ಲಿನರಾಗಿರುತ್ತಾರೆ.ಹೀಗಾಗಿ ನೈಜ ಕಟ್ಟಡ ಕಾರ್ಮಿಕರು ಅನೇಕ ಸೌಲಭ್ಯಗಳಿಂದ ಮತ್ತು ನವೀಕರಣದಿಂದ ವಂಚಿತರಾಗುತ್ತಿದ್ದಾರೆ.ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಲು ಅವಕಾಶ ಕಲ್ಪಿಸಬೇಕು.ಕಟ್ಟಡ ಕಾರ್ಮಿಕರು ಹಾಕಿದ ಅರ್ಜಿಗಳು ಕಳೆದ ಎರಡ್ಮೂರು ವರ್ಷಗಳಿಂದ ಇನ್ನೂವರೆಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ ಶಿಪ್ ಹಣ ಬಂದಿಲ್ಲ. ಇವುಗಳ ಬಗ್ಗೆ ತಕ್ಷಣ ಕ್ರಮ ಕೈಗೊಂಡು ತೀವ್ರದಲ್ಲಿ ಹಣ ಜಮಾ ಆಗುವಂತೆ ನೋಡಿಕೊಳ್ಳಬೇಕು.ಕಟ್ಟಡ ಕಾರ್ಮಿಕರ ನಿವೃತ್ತಿ ವೇತನ ಬಂದಿಲ್ಲ. ಕಟ್ಟಡ ಕಾರ್ಮಿಕರ ಮಂಡಳಿಯಿಂದ ಗುರುತಿಸಿರುವ ಕೊಪ್ಪಳದ ಕೆ.ಎಸ್. ಆಸ್ಪತ್ರೆಯಲ್ಲಿ ಅಪಘಾತವಾದ ಕಟ್ಟಡ ಕಾರ್ಮಿಕರಿಗೆ ಸೇರಿಸಲು ಹೋದಾಗ ಮೊದಲು ಠೇವಣಿ ಇಡಲು ಹೇಳುತ್ತಾರೆ. ಮೊದಲು ಒಳ ರೋಗಿಯಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡಿ ಮಂಡಳಿಯಿಂದ ಬರುವ ಹಣ ಪಡೆಯುವಂತೆ ಸುತ್ತೋಲೆ ಹೊರಡಿಸಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿರುವ ನಕಲಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳನ್ನು ತಕ್ಷಣ ರದ್ದುಪಡಿಸಿ ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ.(ಐ.ಎಫ್.ಟಿ.ಯು.) ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಬಸವರಾಜ್ ಶೀಲವಂತರ್.ಸಂಚಾಲಕ ಎಸ್.ಎ.ಗಫಾರ್. ಪಾನಿಷಾ ಮಕಾಂದಾರ್. ಸಂಶುದ್ದೀನ್ ಮಕಾಂದಾರ್. ಗಾಳೆಪ್ಪ ಪೂಜಾರ ಲೆಬಗೇರಿ. ಮಖಬೂಲ್ ರಾಯಚೂರು. ಶಿವಪ್ಪ ಹಡಪದ್. ರಿಯಾಜ್ ಮಕಾಂದಾರ್.ಆದಿತ್ಯ ಟಿ. ಪಾತ್ರೋಟಿ.ಪ್ರಕಾಶ್ ದೇವರ ಮನಿ ಮುಂತಾದವರು ಭಾಗವಹಿಸಿದ್ದರು.
