ಯಾದಗಿರಿ:ನ:24: 2024-25ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜಿಲ್ಲಾ ವಲಯ ಆರ್.ಎ.ಪಿ/ಆರ್.ಐ.ಪಿ ಯೋಜನೆಯಡಿ ಕರ್ನಾಟಕ, ಅಂದ್ರಪ್ರದೇಶ ಮತ್ತು ತಮೀಳುನಾಡು ರಾಜ್ಯಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ದಿನಾಂಕ:24.11.2025 ರಂದು 66 ಜನ ನೇಕಾರರು 10 ದಿನಗಳ ಅಧ್ಯಯನ ಪ್ರವಾಸಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೂಲಕ ಪ್ರಯಾಣ ಬೆಳೆಸಿದರು.
ಶ್ರೀ ಲವೀಶ್ ಓರಡಿಯಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ನೇಕಾರರನ್ನು ಅಧ್ಯಯನ ಪ್ರವಾಸಕ್ಕೆ ಬೀಳಕೊಟ್ಟರು.
ವಿದ್ಯಾವಿಕಾಸ ಯೋಜನೆಯಡಿ ಶಾಲಾ ಸಮವಸ್ತç ಬಟ್ಟೆ ನೇಯುವ ಮತ್ತು ಕಾಟನ ಸೀರೆ ನೇಯುವ ಈ ನೇಕಾರರು ಕರ್ನಾಟಕ, ಅಂದ್ರಪ್ರದೇಶ ಮತ್ತು ತಮೀಳುನಾಡು ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ.
ನಾರಾಯಣಪೇಟ್ ಸಹಕಾರ ಸಂಘ ಕಾಟನ ಸೀರೆ, ಹೈದ್ರಾಬಾದ್‌ನ ನೇಕಾರ ಸೇವಾ ಕೇಂದ್ರ, ಪೋಚಂಪಲ್ಲಿ ಸಿಲ್ಕ್ (ಇಕ್ಲಟ್) ಸೀರೆ, ಕೋಯಲಗೂಡಂ ಕಾಟನ್ ಡ್ರೆಸ್ ಮಟೇರಿಯಲ್, ವೆಂಕಟಗಿರಿ ಕೈಮಗ್ಗ ತಂತ್ರಜ್ಷಾನ ಸಂಸ್ಥೆ ಮತ್ತು ಪಟ್ಟು ಸೀರೆ, ಕಾಂಚಿಪುರಂ ಅಣ್ಣಾ ಸೀರೆ, ಚನೈ ಟೆಕ್ಸ್ ಶೋರೂಮ್, ಕುಂಬಕೋಣ ತಿರುಭೂವನಂ ಸಿಲ್ಕ್ ಸೀರೆ, ಪಾಂಡಿಚೇರಿ ಸಿಲ್ಕ್ ಸೀರೆ, ತಂಜಾವೂರು ಸಿಲ್ಕ್ ಸೀರೆ, ಮಧುರೈ ಮೀನಾಕ್ಷಿ ಕಾಟನ್ ಸೀರೆ, ಕರೂರು ಬೆಡ್ ಶೀಟ್ & ಟಾವೇಲ್ಸ್, ಚೆನ್ನಮೈಲೈ ಸಹಕಾರ ಸಂಘಗಳಿಗೆ ಭೇಟಿ, ಇರೂಡೆ ಬೆಡ್ ಶೀಟ್ & ಜಮಖಾನಿ, ಭವಾನಿ ಸಹಕಾರ ಸಂಘಗಳಿಗೆ ಭೇಟಿ, ಸೇಲಂ ನೇಕಾರರ ಸೇವಾ ಕಂದ್ರ, ಬೆಂಗಳೂರು ಸಿಲ್ಕ್ ಬೋರ್ಡ್ ಬೋರ್ಡ್ ಮತ್ತು ಇತರ ಸ್ಥಳೀಯ ಸಹಕಾರ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡುವರು ಎಂದು ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಜಿ.ಪಂ. ಯಾದಗಿರಿ ಅವರು ತಿಳಿಸಿದ್ದಾರೆ.
ಈ ತರಹದ ಅಧ್ಯಯನ ಪ್ರವಾಸಗಳಿಂದ ರಾಜ್ಯದಲ್ಲಿ ತಯಾರಿಸಲಾಗುತ್ತಿರುವ ವಿವಿಧ ವಿನ್ಯಾಸಗಳ ಮತ್ತು ಮಾದರಿಯ ನೇಯುವ ಬಟ್ಟೆಗಳ ಕುರಿತು ನೇಕಾರರಿಗೆ ತಿಳುವಳಿಕೆ ಮೂಡಿಸುವ ಮೂಲಕ ಅವರಲ್ಲಿ ಕೌಶಲ್ಯಾಭಿವೃದ್ದಿ ಹೆಚ್ಚಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸಹಕಾರಿ ಆಗುವುದಲ್ಲದೇ, ವಿನ್ಯಾಸಗಳ ಬದಲಾವಣೆಗೆ ಹಾಗೂ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ನೇಕಾರರು ನೇಯ್ಗೆಯಲ್ಲಿ ಬದಲಾವಣೇ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಶ್ರೀ ಹೈದರ್ ಖಾನ, ಜವಳಿ ಇಲಾಖೆ ಸಿಬ್ಬಂದಿಯವರಾದ ಜವಳಿ ತನಿಖಾಧಿಕಾರಿ ಶ್ರೀ ರಮೇಶ್ ಓಂಕಾರ (ಪ್ರಭಾರ) ಉಪಸ್ಥಿತರಿದ್ದರು.
