12
ಯಾದಗಿರಿ: ತಮ್ಮ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ಶ್ರೀ ಹೊನ್ನಯ್ಯ ಹೆಚ್ ಕವತಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸಂಘಟನೆಯ ರಾಜ್ಯಾಧ್ಯಕ್ಷರಾದ ನಿಂಗರಾಜಗೌಡ ಅವರು, ಶ್ರೀಯುತ ಹೊನ್ನಯ್ಯ ಹೆಚ್ ಕವತಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನೇಮಕಾತಿ ಘೋಷಣೆ ಮಾಡಿದರು ಮತ್ತು ಆದೇಶ ಹೊರಡಿಸಿದರು.
ನೇಮಕಾತಿ ಪತ್ರದಲ್ಲಿ ಶ್ರೀಯುತರಾದ ಹೊನ್ನಯ್ಯ ಹೆಚ್ ಕವತಿ ಅವರು ಸಂಘಟನೆಯನ್ನು ಬಲಪಡಿಸಿ ಉತ್ತಮ ಸಾಮಾಜಿಕ ಸೇವೆ ನೀಡಲಿ ಎಂದು ಶುಭ ಹಾರೈಸಲಾಗಿದೆ.
ಶ್ರೀಯುತರು ಯಾದಗಿರಿ ಜಿಲ್ಲಾಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರ ಬಂಧು ಮಿತ್ರರರು ಮತ್ತು ಸಂಘಟನೆಯ ಪದಾಧಿಕಾರಿಗಳು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

