ಯಾದಗಿರಿ: ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾಸಿಕ ₹2000ಗಳ ನಿಧಿ ಮೂರು ತಿಂಗಳಾದರೂ ಖಾತೆಗಳಲ್ಲಿ ಜಮಾ ಆಗಿಲ್ಲ ಎಂದು ಬಿಜೆಪಿ ಯುವ ಮುಖಂಡ ಸಲ್ಲು ದಂಡಿನ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಮುಖ್ಯಮಂತ್ರಿ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳುವುದಾದರೂ, ಚುನಾವಣೆ ಸಮಯದಲ್ಲಿ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ವರ್ಗಾವಣೆಯಾಗಲಿದೆ ಎಂದು ಘೋಷಿಸಿದ್ದರು. ಆದರೆ ಈಗ ಅದರಿಂದ ದೂರವಾಗಿದೆ ಎಂದು ಆರೋಪಿಸಿದರು.
ಹಣದ ವಿಳಂಬದಿಂದಾಗಿ ಮನೆ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಹೊಡೆತ ಬಿದ್ದು, ಹಲವಾರು ಮಹಿಳೆಯರು ಬ್ಯಾಂಕ್‌ಗೆ ಹೋಗಿ ಸಹ ಹಣ ಪಡೆಯದೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರ ಕೂಡಲೇ ಬಾಕಿ ಇರುವ ಕಂತುಗಳನ್ನು ತಕ್ಷಣ ಮಹಿಳೆಯರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಮಹಿಳೆಯರೊಂದಿಗೆ ಭಿದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

