8
ಕೊಪ್ಪಳ : ಕಟ್ಟಡ ಕಾರ್ಮಿಕರ ಸೇಫ್ಟಿ ಟೂಲ್ ಕಿಟ್ ವಿತರಣೆಗೆ ನಿಗದಿತ ಕೊನೆಗೊಂಡ ಅವಧಿ ವಿಸ್ತರಣೆಗೆ ಆಗ್ರಹಿಸಿ ಜಿಲ್ಲಾ ಆಡಳಿತ ಭವನದ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಸುಧಾ ಸಿ.ಗರಗ ಅವರ ಅನುಪಸ್ಥಿತಿಯಲ್ಲಿ ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಮಂಜುಳಾ ವಿಶ್ವನಾಥ್ ಅವರಿಗೆ ಶುಕ್ರವಾರ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ(ಐ.ಎಫ್.ಟಿ.ಯು.)ಯ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಿದೆ.
ಮನವಿಯಲ್ಲಿ ತಾವು ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಟೂಲ್ ಕಿಟ್ ವಿತರಣೆಗೆ ನಿಗದಿ ಪಡಿಸಿದ ಕೊನೆ ದಿನಾಂಕ 18 ನವೆಂಬರ್ 2025 ರೊಳಗೆ ಕಟ್ಟಡ ಕಾರ್ಮಿಕರು ತಾಂತ್ರಿಕ ಸಮಸ್ಯೆಗಳಿಂದ ಯಾರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.ಅಲ್ಲದೆ ತಾವು ಹೊರಡಿಸಿದ ಪ್ರಕಟಣೆಯಲ್ಲಿ ಆನ್ಲೈನ್ ಆಫ್ಲೈನ್ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಬಗ್ಗೆ ಸ್ಪಷ್ಟಪಡಿಸದೆ ಅರ್ಜಿಗಳನ್ನು ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ.ತಮಗೂ ತಿಳಿದಂತೆ ಸರ್ಕಾರಿ ನೌಕರರು ಸರ್ಕಾರಕ್ಕೆ ಸಕಾಲಕ್ಕೆ ದಾಖಲೆ ಸಲ್ಲಿಸಲು ನಿಗದಿತ ಅವಧಿಯಲ್ಲಿ ಹೆಚ್ಚು ಕಡಿಮೆ ಯಾಗುತ್ತದೆ. ಚುನಾಯಿತ ಪ್ರತಿನಿಧಿಗಳು ವಿದ್ಯಾವಂತರಾಗಿದ್ದು ಕೂಡ ಸಕಾಲಕ್ಕೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ಲೋಕಾಯುಕ್ತರಿಂದ ಮಾಧ್ಯಮಗಳಲ್ಲಿ ಬಂದಿರೋದು ಎಲ್ಲರಿಗೂ ಗೊತ್ತು. ನಮ್ಮ ಕಟ್ಟಡ ಕಾರ್ಮಿಕರು ಅನಕ್ಷರಸ್ಥರು. ಅರೆಬರೆ ಶಿಕ್ಷಣವಂತರು ಅಲ್ಲದೆ ಕೆಲವೊಬ್ಬರು ಪದವಿಗಳನ್ನು ಪಡೆದರು ಸಹ ನಿತ್ಯದ ವೃತ್ತಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಸದಾ ತಲ್ಲಿನರಾಗಿರುವ ಕಾರ್ಮಿಕರಿಗೆ ಆನ್ಲೈನ್ ಆಫ್ಲೈನ್ ಎಂಬ ತಾಂತ್ರಿಕ ಸಮಸ್ಯೆಗಳಿಂದ ಸೌಲಭ್ಯಗಳನ್ನು ಪಡೆಯದೆ ವಂಚಿತರಾಗುತ್ತಿದ್ದಾರೆ.
ತಾವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಗುರುತಿನ ಚೀಟಿ ಝರಾಕ್ಸ್ ಪ್ರತಿ. (ಲೇಬರ್ ಕಾರ್ಡ್)ಆಧಾರ ಕಾರ್ಡ ಝರಾಕ್ಸ್ ಪ್ರತಿ.ತಾವು ಈ ಹಿಂದೆ ಯಾವುದೆ ಕಿಟ್ ಪಡೆದುಕೊಂಡಿಲ್ಲವೆಂದು ಸ್ವಯಂ ಘೋಷಣೆ ಪತ್ರ ನೀಡಬೇಕು.ಜೇಷ್ಟತೆಯ ಆಧಾರದ ಮೇಲೆ ಕಿಟ್ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದೀರಿ. ಅದರಂತೆ ಅರ್ಜಿ ಸಲ್ಲಿಸಲು ತಮ್ಮಲ್ಲಿ ಬಂದರೆ ತಾವು ಆನ್ಲೈನ್ ಗುರುತಿನ ಚೀಟಿ ಕೇಳುವುದು ತಪ್ಪಾಗುತ್ತದೆ. ಮಂಡಳಿಯಿಂದ ಅಂತಹ ಸುತ್ತೋಲೆ ಇದ್ದರೂ ಸಹ ತಾವು ಸಣ್ಣಪುಟ್ಟ ವ್ಯತ್ಯಾಸಗಳನ್ನು ಮನ್ನಿಸಿ. ಕಿಟ್ ಗಳಿಗೆ ಆಹ್ವಾನಿಸಿದ ಅರ್ಜಿಯನ್ನು ಕೊನೆಯ ದಿನಾಂಕವನ್ನು ಇನ್ನು 15 ದಿನಗಳ ವರೆಗೆ ವಿಸ್ತರಿಸಿ ಕಟ್ಟಡ ಕಾರ್ಮಿಕರಿಗೆ ಬಂದಂತಹ ವಿವಿಧ ಕಿಟ್ಟುಗಳನ್ನು ವಿತರಿಸಲು ಕೋರುತ್ತೇವೆ ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್.ಟಿ.ಯು.)ಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ತುಕಾರಾಮ ಪಾತ್ರೋಟಿ.ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ. ಕಾರ್ಮಿಕ ಮುಖಂಡ ಮಖಬೂಲ್ ರಾಯಚೂರು. ಆದಿತ್ಯ ಟಿ.ಪಾತ್ರೋಟಿ ಮುಂತಾದವರು ಉಪಸ್ಥಿತರಿದ್ದರು.
