ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯ ಶ್ಲಾಘನೀಯ- ಡಾ.ಜೆ.ವಿ.ಪುರುಷೋತ್ತಮ
ಗುರುಮಿಠಕಲ್ :ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಮತ್ತು ನಾಡಿನ ಸಾಂಸ್ಕೃತಿಕತೆ ಬಗ್ಗೆ ಪರಿಚಯ ಮಾಡಿಸುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಚಕೋರ ವೇದಿಕೆಯ ಕಾರ್ಯಕ್ರಮ ಶ್ಲಾಘನೀಯ ಎಂದು ಗುರುಮಿಠಕಲ್ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ವಿ.ಪುರುಷೋತ್ತಮ ಅವರು ಇಂದು ತಮ್ಮ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾದಗಿರಿ ಜಿಲ್ಲೆಯ ಅಂದ್ರ ಗಡಿಭಾಗದ ಗುರುಮಿಠಕಲ್ ತಾಲೂಕಿನ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಇಂದು ಗಡಿಭಾಗದಲ್ಲಿ “ಕನ್ನಡದ ಕಂಪು ಹರಡುವ ಕುರಿತು” ರಾಜ್ಯೋತ್ಸವದ ಅಂಗವಾಗಿ ಚಕೋರ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಅವರು ಅಧ್ಯಕ್ಷತೆ ವಹಿಸಿದ್ದರು.ವಿಶೇಷ ಉಪನ್ಯಾಸವನ್ನು ಶ್ರೀ ಲಕ್ಷ್ಮಯ್ಯ ಕಲಾಲ್ ವಿಶ್ರಾಂತ ಪಿಯೂ ಕಾಲೇಜಿನ ಪ್ರಾಂಶುಪಾಲರು ನೀಡಿದರು. ಆಶಯನುಡಿಯನ್ನು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಆಡಿದರು. ಮುಖ್ಯ ಅತಿಥಿಯಾಗಿ ಗುರುಮಿಠಕಲ್ ತಾಲೂಕಿನ ಕಸಾಪ ಅಧ್ಯಕ್ಷರಾದ ಶ್ರೀ ಬಸರೆಡ್ಡಿ ಪಾಟೀಲರು ಭಾಗವಹಿಸಿದ್ದರು. ಡಾ.ಬಾಬುರಾಯ ದೊರೆ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.
ನೂರಾರು ವಿದ್ಯಾರ್ಥಿಗಳಿಗೆ ಚಕೋರ ಕಾರ್ಯಕ್ರಮದ ಉದ್ದೇಶ ಹಾಗೂ ನಾಡು ನುಡಿ ಸಾಂಸ್ಕೃತಿಕ ಹಿರಿಮೆ ಗರಿಮೆ ಪರಿಚಯಿಸಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಮಾತನಾಡಿದ ಪ್ರತಿಯೊಬ್ಬರ ಮಾತಿನ ಆಶಯ ಇದೆ ಆಗಿತ್ತು.

