Home ಜಿಲ್ಲಾ ಸುದ್ದಿಗಳು ಕೃಷ್ಣಾ-ಭೀಮಾ ಸಂಗಮ ಗಡ್ಡೆಯಲ್ಲಿ… 18, 19ಹಾಗೂ 20 ರಂದು ಜಿತಾಮಿತ್ರ ತೀರ್ಥರ ಆರಾಧನೆ ಪ್ರತಿವರ್ಷ… ವೈಭವದಲ್ಲಿ

ಕೃಷ್ಣಾ-ಭೀಮಾ ಸಂಗಮ ಗಡ್ಡೆಯಲ್ಲಿ… 18, 19ಹಾಗೂ 20 ರಂದು ಜಿತಾಮಿತ್ರ ತೀರ್ಥರ ಆರಾಧನೆ ಪ್ರತಿವರ್ಷ… ವೈಭವದಲ್ಲಿ

by Laxmikanth Nayak
0 comments

ಶಹಾಪುರ,17– ತಾಲೂಕಿನ ಕೊನೆಯ ಅಂಚಿನ ಗ್ರಾಮವಾದ ಶಿವಪುರದ ಸಮೀಪ ಕೃಷ್ಣಾ-ಭೀಮಾ ಸಂಗಮದ ಜಿತಾಮಿತ್ರರ ನಡುಗಡ್ಡೆಯಲ್ಲಿ, ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರತೀರ್ಥರ ಆರಾಧನಾ ಮಹೋತ್ಸವವು ಪ್ರತಿವರ್ಷ ಎಳ್ಳಾ ಅಮಾವಾಸ್ಯೆ ಮುಂಚಿನ ದಿನ ಪೂರ್ವಾರಾಧನೆ, ಎಳ್ಳಾಮವಾಸ್ಯೆ ಮಧ್ಯಾರಾಧನೆ ಹಾಗೂ ಪ್ರತಿಪದೆಯಂದು ಉತ್ತರಾರಾಧನೆ ಡಿಸೆಂಬರ 18, 19 ಹಾಗೂ 20 ರವರೆಗೆ ನಡೆಯಲಿದೆ
ಶಿವಪುರದ ಶಾನುಭೋಗರ ಮನೆತನದಲ್ಲಿ ಜನಿಸಿದ ಜಿತಾಮಿತ್ರರ ಪೂರ್ವಾಶ್ರಮದ ಹೆಸರು ಅನಂತಪ್ಪ. ಗ್ರಾಮೀಣ ಪ್ರದೇಶದಲ್ಲಿ ಬೇಸಾಯ ಹಾಗೂ ದನ ಕರುಗಳನ್ನು ಮೇಯಿಸುತ್ತಾ ಕಾಲ ಕಳೆಯುತ್ತಿದ್ದರು. ಉಪನಯನವಾಗಿದ್ದರೂ ದೇವತಾ ಕಾರ್ಯಗಳತ್ತ ಗಮನವಿರಲಿಲ್ಲ. ಧಾರ್ಮಿಕ ಕಾರ್ಯಕ್ರಮಗಳ ಗೋಜಿಗೆ ಹೋಗುತ್ತಿರಲಿಲ್ಲ.
ಚಿಕ್ಕಂದಿನಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಅನಂತಪ್ಪ, ಅಕ್ಕನ ಮನೆಯಲ್ಲಿ ಬೆಳೆದು ದೊಡ್ಡವನಾದ. ಒಮ್ಮೆ ವೈಷ್ಣವ ಪೀಠಾಧಿಪತಿಗಳಾದ ವಿಭುದೇಂದ್ರ ತೀರ್ಥರು ಆಗಮಿಸಿದಾಗ, ಅನಂತಪ್ಪ ಶ್ರದ್ಧಾ ಭಕ್ತಿಯಿಂದ ಮುದ್ರೆಗಳನ್ನು ಒತ್ತಿಕೊಂಡು ಶ್ರೀಗಳ ದರ್ಶನಕ್ಕೆ ನಿಂತ. ಈ ಸಂದರ್ಭದಲ್ಲಿ ಕೊರಳಲ್ಲಿನ ಜನಿವಾರ ಮಾಯವಾಗಿತ್ತು. ಇದನ್ನು ಗಮನಿಸಿದ ಗುರುಗಳು ಅನಂತಪ್ಪನಿಗೆ ಜನಿವಾರದ ಮಹತ್ವ ತಿಳಿಸಿ, ಮತ್ತೊಂದು ಜನಿವಾರ ನೀಡಿ, ಇದನ್ನು ಹಾಗೂ ಧರಿಸು, ಹಾಗೂ ನಿತ್ಯ ಸಂಧ್ಯಾವAದನೆ ಮಾಡಿ ಸಾಲಿಗ್ರಾಮಕ್ಕೆ ಅಭಿಷೇಕ, ನೈವೇದ್ಯ ಮಾಡಿ ಉಣಿಸಬೇಕು ಎಂದು ಹೇಳಿದರು.
ಗುರುಗಳ ಮಾತನ್ನು ತಪ್ಪದೇ ಪಾಲಿಸಿದ ಅನಂತಪ್ಪನು, ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯದಲ್ಲಿ ತೊಡಗಿ, ಸಾಲಿಗ್ರಾಮಕ್ಕೆ ನೈವೇದ್ಯ ಉಣ್ಣಲು ಹೇಳಿದರು. ಇಲ್ಲದಿದ್ದರೆ ತಲೆ ಒಡೆದುಕೊಳ್ಳುತ್ತೇನೆ ಎಂದು ಉದ್ಗಾರ ತೆಗೆದ. ಆಗ ಸಾಲಿಗ್ರಾಮ ರೂಪಿ ಭಗವಂತ ಬಾಯಿ ತೆರೆದು ನಿತ್ಯ ಉಣ್ಣಲು ಪ್ರಾರಂಭಿಸಿದ. ಇದರಿಂದ ಅನಂತಪ್ಪನಲ್ಲಿಯ ಮೂಢಭಕ್ತಿಯು ಭಗವಂತನೆಡೆಗೆ ಅಚಲವಾಗಿ ಸಾಗಿತ್ತು.
ಮತ್ತೊಮ್ಮೆ ಆಗಮಿಸಿದ ವಿಭುದೇಂದ್ರ ತೀರ್ಥರು, ಅನಂತಪ್ಪ ಸಾಲಿಗ್ರಾಮಕ್ಕೆ ಉಣಿಸುತ್ತಿರುವುದನ್ನು ಕಂಡು ಅಚ್ಚರಿ ಪಟ್ಟರು. ಶ್ರೀಗಳು ಪ್ರಸನ್ನ ಚಿತ್ತರಾಗಿ ಅನಂತಪ್ಪನಿಗೆ ಜಿತಾಮಿತ್ರ ತೀರ್ಥರು ಎಂದು ನಾಮಕರಣ ಮಾಡಿದರು. ಗುರುಗಳ ಅನುಗ್ರಹ ಪಡೆದ ಜಿತಾಮಿತ್ರರು ಸಕಲ ಶಾಸ್ತç ಪ್ರವೀಣರಾಗಿ ಹಲವಾರು ಶಿಷ್ಯರಿಗೆ ನದಿಯ ದಡದ ಮೇಲೆ ಪಾಠ ಪ್ರವಚನ ಮಾಡುತ್ತಿದ್ದರು. ಹೀಗೆ ಪಾಠ ಪ್ರವಚನ ಮಾಡುತ್ತಿದ್ದಾಗ ಪರಮೇಶ್ವರನು ಜಂಗಮ ವೇಷಧಾರಿಯಾಗಿ ಬಂದು ಪಾಠ ಕೇಳುತ್ತಿದ್ದರು ಎಂಬ ಪ್ರತೀತಿ ಇದೆ. ಜಿತಾಮಿತ್ರರ ಗುರುಗಳು ವೃಂದಾವನಸ್ಥರಾದ ನಂತರ ಅವರ ಸಮಾರಾಧನೆಯನ್ನು ವೈಭವದಿಂದ ಆಚರಿಸುತ್ತಿದ್ದರು.
ಶಿವಪುರವೆಂಬ ನಿರ್ಜರ ಪ್ರದೇಶ ಸಂಗಮದ ನಡುಗಡ್ಡೆಯಲ್ಲಿ ಯಥಾ ಪ್ರಕಾರ ಪ್ರವಚನ ಮಾಡುತ್ತಿರುವ ಸಂದರ್ಭದಲ್ಲಿ ರಭಸದಿಂದ ಹರಿದ ಕೃಷ್ಣಾ ನದಿ ಉಕ್ಕೇರಿ ಬಂದಾಗ ಶಿಷ್ಯರೆಲ್ಲ ದಿಕ್ಕಾ ಪಾಲಾಗಿ ಓಡಿದರು. ಆದರೆ ಜಿತಾಮಿತ್ರರು ಮಾತ್ರ ಧ್ಯಾನಾಸಕ್ತರಾಗಿ ಏಳು ದಿನಗಳವರೆಗೆ ಕುಳಿತಿದ್ದು, ನದಿಯ ಅರ್ಭಟ ಕಡಿಮೆಯಾದ ಮೇಲೆ ಶಿಷ್ಯ ಸಮೂಹ ನೋಡಿದಾಗ ಅಚ್ಚರಿಯಾಗಿ ಹೋದರು. ಜಿತಾಮಿತ್ರರು ಧ್ಯಾನಾಸಕ್ತರಾಗಿಯೇ ಕುಳಿತಿದ್ದರು. ಅವರ ತಪಸ್ಸಿನ ಪ್ರಭಾವದ ಮಹಿಮೆ ಎಲ್ಲರಿಗೂ ಅರ್ಥವಾಯಿತು. ಸಾಕ್ಷಾತ್ ರುದ್ರದೇವರ ಅಂತ:ಕರುಣೆ ಇವರ ಮೇಲಿತ್ತು.
ಮತ್ತೊಮ್ಮೆ ಧ್ಯಾನಾಸಕ್ತರಾಗಿ ಕುಳಿತ ಸಂದರ್ಭದಲ್ಲಿ ಪ್ರವಾಹ ಉಕ್ಕೇರಿ ಬಂತು. ಪ್ರವಾಹ ಇಳಿದರೂ ಅವರು ಮಾತ್ರ ಕಾಣಲಿಲ್ಲ. ಬದಲಿಗೆ ನದಿಯ ಮಧ್ಯದಲ್ಲಿ ಮಣ್ಣಿನ ಗುಡ್ಡೆಯೊಂದು ಹಾಗೂ ಆ ಸ್ಥಳದಲ್ಲಿ ಗೋನದ ವೃಕ್ಷ ಬೆಳೆದು ನಿಂತಿದೆ. ಸಮಸ್ತ ಭಕ್ತ ಸಮೂಹ ಜಿತಾಮಿತ್ರ ತೀರ್ಥರ ಸನ್ನಿಧಾನದಲ್ಲಿ ಇಂದಿಗೂ ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ.
ನಂತರ ಸ್ವಪ್ನದಲ್ಲಿ ಗುರುಗಳ ಅಶರೀರವಾಣಿ ನುಡಿಯಂತೆ ಭೂಮಿಯ ಮೇಲೆ ನಮ್ಮ ಅವತಾರ ಮುಗಿದಿದೆ. ಇಂದಿನಿAದ ಎರಡು ವರ್ಷದ ನಂತರ ಸ್ಥಳದಲ್ಲಿ ಗೋನದವೃಕ್ಷ ಕಾಣಿಸುತ್ತದೆ. ಆ ವೃಕ್ಷದ ರೂಪದಲ್ಲಿ ನಾವಿರುತ್ತೇವೆ. ಎಂದು ನುಡಿದಂತೆ ಗೋನದ ವೃಕ್ಷ ಎರಡು ನದಿಯ ಮಧ್ಯದಲ್ಲಿ ಬೆಳೆದು ನಿಂತಿದೆ.
ಸಮಸ್ತ ಭಕ್ತ ಸಮೂಹ “ ಶ್ರೀ ಜಿತಾಮಿತ್ರತೀರ್ಥರು” ಸನ್ನಿಧಾನದಲ್ಲಿ ಇಂದಿಗೂ ಶ್ರದ್ದೆಯಿಂದ ಪೂಜೆಗೈಯುತ್ತಾರೆ. ಮಂತ್ರಾಲಯದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮಿಗಳು ನಡುಗಡ್ಡೆಯಲ್ಲಿರುವ ಜಿತಾಮಿತ್ರತೀರ್ಥರ ಪವಿತ್ರ ಸ್ಥಳವು ಪ್ರವಾಹಕ್ಕೆ ಯಾವುದೇ ರೀತಿ ತೊಂದರೆಯಾಗಬಾರದೆAದು ಸರ್ವರ ಸಹಕಾರದಿಂದ ಕಂಪೌಡ್ ಗೋಡೆ ನಿರ್ಮಿಸಿ ಸೂಕ್ತ ರಕ್ಷಣೆ ಒದಗಿಸಿದ್ದಾರೆ. ಆರಾಧನೆಗಾಗಿ ಮಂತ್ರಾಲಯ ಮಠದಿಂದ ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಶ್ರೀ ಜಿತಾಮಿತ್ರತೀರ್ಥರು ರುದ್ರಾಂಶ ಸಂಭೂತರಾಗಿ ಬೇಡಿದ ಇಷ್ಟಾರ್ಥಗಳನ್ನು ಇಂದಿನವರೆಗೂ ಭಕ್ತರಿಗೆ ದಯಪಾಲಿಸುತ್ತಿದ್ದಾರೆ. ಅವರಿಂದ ಅನೇಕರು ಇಷ್ಟಾರ್ಥಗಳನ್ನು ಪಡೆದ ಉಧಾಹರಣೆಗಳು ಕಾಣಸಿಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಜಿತಾಮಿತ್ರರ ಆರಾಧನೆಗಾಗಿ ಭಕ್ತರ ಮಹಾಪೂರವೇ ಹರಿದು ಬರಲಿದೆ.
ವರದಿ : ಕೆ. ಕೆ. ಕುಲಕರ್ಣಿ ಪತ್ರಕರ್ತ ಯಾದಗಿರಿ

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ