Home ಜಿಲ್ಲಾ ಸುದ್ದಿಗಳು ಜಿಲ್ಲಾ ನ್ಯಾಯಾಲಯಗಳು. ಹೈಕೋರ್ಟ್.ಸುಪ್ರೀಂ ಕೋರ್ಟ್ ಮಾನವ ಹಕ್ಕಗಳನ್ನು ರಕ್ಷಣೆ ಮಾಡುತ್ತದೆ – ಎ.ವಿ.ಕಣವಿ

ಜಿಲ್ಲಾ ನ್ಯಾಯಾಲಯಗಳು. ಹೈಕೋರ್ಟ್.ಸುಪ್ರೀಂ ಕೋರ್ಟ್ ಮಾನವ ಹಕ್ಕಗಳನ್ನು ರಕ್ಷಣೆ ಮಾಡುತ್ತದೆ – ಎ.ವಿ.ಕಣವಿ

by Laxmikanth Nayak
0 comments

ಜಿಲ್ಲಾ ನ್ಯಾಯಾಲಯಗಳು. ಹೈಕೋರ್ಟ್.ಸುಪ್ರೀಂ ಕೋರ್ಟ್ ಮಾನವ ಹಕ್ಕಗಳನ್ನು ರಕ್ಷಣೆ ಮಾಡುತ್ತದೆ – ಎ.ವಿ.ಕಣವಿ

    ಕೊಪ್ಪಳ : ಜಿಲ್ಲಾ ನ್ಯಾಯಾಲಯಗಳು. ಹೈಕೋರ್ಟ್.ಸುಪ್ರೀಂ ಕೋರ್ಟ್ ಮಾನವ ಹಕ್ಕಗಳನ್ನು ರಕ್ಷಣೆ ಮಾಡುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಬುಧವಾರ ಭ್ರಾತೃತ್ವ ಸಮಿತಿ. ದರ್ಪಣ ಸಂಸ್ಥೆ ಹಾಗೂ ಕೆ.ವಿ.ವಿ.ಯು. ಕೊಪ್ಪಳ ಇವುಗಳ ಸಹಯೋಗದಲ್ಲಿ 

ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಂದುವರೆದು ಮಾತನಾಡಿ ನಿಮಗೆ ಏನಾದರೂ ತೊಂದರೆಯಾದರೆ ಪ್ರಕರಣ ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು. ಮಾನವ ಹಕ್ಕುಗಳ ಮೂಲ ಉದ್ದೇಶ ಪ್ರತಿಯೊಬ್ಬರಲ್ಲೂ ಸಮಾನತೆ.ಸ್ವಾತಂತ್ರ್ಯ.ಭ್ರಾತೃತ್ವ ಬರಬೇಕು.ನಮ್ಮ ಎಲ್ಲಾ ಕಾನೂನುಗಳು ಇರುವುದು ಸಮಾನತೆ ಆಧಾರದ ಮೇಲೆ ಇದೆ.ಕೆಲವು ಹಕ್ಕುಗಳು ಉಲ್ಲಂಘನೆ ಆದರೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಂದ ಸಹ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಮಾನವ ಹಕ್ಕುಗಳನ್ನು ಅರಿತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ವಿದ್ಯಾರ್ಥಿಗಳ ಹಕ್ಕುಗಳು. ಮಕ್ಕಳ ಹಕ್ಕುಗಳು.ಯುವಕರ ಹಕ್ಕುಗಳು. ಮಹಿಳೆಯರ ಹಕ್ಕುಗಳನ್ನು ತಿಳಿದುಕೊಂಡರೆ ನಿಮಗೆ ಯಾರಿಂದಲೂ ತೊಂದರೆ ಆಗಲು ಸಾಧ್ಯವಿಲ್ಲ.ಅಲ್ಲದೆ ಸಂವಿಧಾನವನ್ನು ದೇಶದ ಪ್ರತಿಯೊಬ್ಬ ನಾಗರಿಕರು ತಿಳಿದುಕೊಂಡು ಅನುಸರಿಸಿದರೆ ಡಾ:ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ನಮ್ಮ ತಾಲೂಕಿನ ಕಿನ್ನಾಳ ಗ್ರಾಮದ ಮಂಜುನಾಥ ದೇವಪ್ಪ ಕಿನ್ನಾಳ ಎಂಬ ವಿದ್ಯಾರ್ಥಿ ವರ್ಷಕ್ಕೆ ಒಂದೇ ಜೊತೆ ಸಮವಸ್ತ್ರ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿದ್ದರಿಂದ ಎರಡು ಜೊತೆ ಸಮವಸ್ತ್ರ ವಿತರಣೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.ಈಗ ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಪೂರೈಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು.ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಅರಿತರೆ ವಂಚಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಪದ್ಮಸಾಲಿ ಮಾನವ ಹಕ್ಕುಗಳ ಕುರಿತು ಕವನ ವಾಚಿಸಿದರು.

ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರಭಾರಿ ಉಪ ಪ್ರಾಂಶುಪಾಲರಾದ ಅಬ್ದುಲ್ ಖಯ್ಯುಮ್ ಪರದೆಘರ್ ಮಾತನಾಡಿದರು.
ಶಿಕ್ಷಕರಾದ ಹುಲುಗಪ್ಪ ಅಡ್ಡಮನಿ. ಎ.ಎ.ನದಾಫ್. ಎಮ್.ಹೆಚ್.ಕುರಿ.ಮಂಜುನಾಥ್ ಸವಡಿ. ಶಿಕ್ಷಕಿಯರಾದ ಸುಜಾತಾ ಮುದಗಲ್. ಭಾಗ್ಯಲಕ್ಷ್ಮಿ. ಫರಹತ್ ಜಹಾನ್.ಶಿವಮ್ಮ.ಶಕುಂತಲಾ ಮುಂತಾದವರು ಉಪಸ್ಥಿತರಿದ್ದರು.

ದರ್ಪಣ ಸಂಸ್ಥೆಯ ಕಾರ್ಯಕರ್ತ ಗಾಳೆಪ್ಪ ಪೂಜಾರ್ ಲೇಬಗೇರಿ ಸ್ವಾಗತಿಸಿದರು.ಶಿಕ್ಷಕ ಗಂಗಾಧರ್ ಹಿರೇಮಠ ನಿರೋಪಿಸಿ ವಂದಿಸಿದರು.

banner

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಅಕ್ರಮ ಮದ್ಯದ ವಿರುದ್ಧ ಅಣಿಬಿಯಲ್ಲಿ ಜಾಗೃತಿ ಜಾಥಾ ರಾಯಚೂರು ಕೃಷಿ ವಿವಿ: ದಲಿತರ ಮೀಸಲಾತಿ ಸಹಿಸದವರಿಂದ ನೇಮಕಾತಿ ತಡೆಗೆ ಸಂಚು; ಜ.17ರ ಪರೀಕ್ಷೆಗೂ ಅಡ್ಡಿ ಸಾಧ್ಯತೆ? - ದಲಿ... ಗ್ರಾಮದ ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣೆ ಮುಖ್ಯ : ಸಿಇಒ ಲವೀಶ್ಒರಡಿಯಾ ದೇವತ್ಕಲ್–ಬಾಚಿಮಟ್ಟಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಓಡಿಸಲು ಮತ್ತು ಸಿಂಧನೂರು ದಿಂದ ಬೆಂಗಳೂರಿಗೆ ಹತ್ತು ತಾಸಿನಲ್ಲಿ ತಲುಪುವುದ... ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ?