ಕೆ.ಆರ್.ಪೇಟೆ. ತೆಂಗಿನ ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿರುವ ಯುವಕನಿಗೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ
ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು ಗ್ರಾಮದ ಲೇಟ್ ಸ್ವಾಮಿಶೆಟ್ಟಿ ಪುತ್ರ ಸಂತೋಷ್ (23) ಕಳೆದ ಎರಡು ತಿಂಗಳ ಹಿಂದೆ ತೆಂಗಿನ ಮರದ ಎಳನೀರು ಕುಯ್ಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರೀ ಬಿದ್ದು ಸೊಂಟ ಹಾಗೂ ಕುತ್ತಿಗೆ ಭಾಗ ಗಂಭೀರ ಗಾಯಗೊಂಡು ಹಾಸಿಗೆ ಹಿಡಿದು ವಿಶ್ರಾಂತಿ ಪಡೆಯುತ್ತಿದ್ದ ಗಾಯಾಳು ಸಂತೋಷ್ ರವರ ನಿವಾಸಕ್ಕೆ ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯದ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಧನ ಸಹಾಯ ನೀಡುವುದರ ಮೂಲಕ ಮಾನವೀಯತೆ ಮೆರೆದರು.
ಬಳಿಕ ಮಾತನಾಡಿದ ಅವರು ಇತ್ತೀಚೆಗೆ ಯುವಕರು ಹೆಚ್ಚು ಎಳನೀರು ವ್ಯಾಪಾರಕ್ಕೆ ಮತ್ತು ಕುಯ್ಯಲು ಹೋಗುತ್ತಿದ್ದಾರೆ ಆದರೆ ತಮ್ಮ ಉತ್ಸಾಹದಲ್ಲಿ ಅನಾಹುತವನ್ನು ಮರೆತು ಆತುರದಲ್ಲಿ ಕೆಲಸ ಮಾಡಲು ಹೋಗಿ ತಮ್ಮ ಕುಟುಂಬಕ್ಕೆ ಆಧಾರವಾಗಿ ಬೇಕಿದ್ದ ಕೆಲ ಯುವಕರು ಕುಟುಂಬದವರೇ ಆಸರೆಯಾಗುವ ಸ್ಥಿತಿಗೆ ತಲುಪುತ್ತಿದ್ದಾರೆ ಯುವಕರು ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಜಾಗೃತೆಯಿಂದ ಮಾಡಬೇಕು ಎಂದು ಸಲಹೆ ನೀಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಸರ್ಕಾರದ ಕಾರ್ಮಿಕ ಯುವಕರಿಗೆ ಪ್ರತ್ಯೇಕ ವಿಶೇಷ ವಿಮೆ ಹಾಗೂ ಉಪಯುಕ್ತ ಯೋಜನೆಗಳನ್ನು ಕೈಗೊಂಡಿದೆ ಅಂತಹ ಜನಸ್ನೇಹಿ ಯೋಜನೆಗಳನ್ನ ಅರ್ಹರಾಗಿ ಸಂಕಷ್ಟದಿಂದ ಪಾರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡೈರಿ ಕಾರ್ಯದರ್ಶಿ ಶಿವಕುಮಾರ್ (ಪಾಪಣ್ಣಿ), ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಗೋವಿಂದರಾಜು,ಹಿರಿಯ ಮುಖಂಡ ನಾಗರಾಜ್ (ಭಾವಿ ಹಟ್ಟಿ), ಮಂಚಶೆಟ್ಟಿ,ಬೈರಶೆಟ್ಟಿ, ಆಟೋ ಬಸವರಾಜ್, ಕುಮ್ಮಿ,ರಾಜಪ್ಪ, ಮಾದೇವ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

