1
ರೈತರಿಗೆ ಗೋವಿನ ಜೋಳದ ಬೆಳೆಗೆ ಔಷಧಿ ನೀಡುವ ಮಾಹಿತಿ ನೀಡಿದ :ಪಾಟೀಲ
*ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸುಲ್ತಾನ ಗೋವಿನ ಜೋಳದ ಬೀಜ ಹಾಗೂ ಔಷಧಿ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ರೈತರಿಗೆ ಮನದಟ್ಟನೆ ಆಗುವ ರೀತಿಯಲ್ಲಿ ಅಧಿಕಾರಿಗಳಾದ ನಿತೀನ ಪಾಟೀಲ ಹಾಗೂ ರಾಮಗೌಡಾ ಪಾಟೀಲ ಮಾಹಿತಿ ನೀಡಿದರು. ಭಾಗವಹಿಸಿದ ರೈತರಿಗೆ ಲಾಟ್ರಿ ಡ್ರಾ ಏರ್ಪಡಿಸಿದ್ದರು. ಮೊದಲನೇ ಬಹುಮಾನ ಪ್ರವೀಣ ನಾಯಿಕ ಅವರಿಗೆ ಊಟದ ಬಾಕ್ಸ್ ಎರಡನೇ ಬಹುಮಾನ ಸಿದರಾಯ ಮಗದುಮ್ಮ ಅವರಿಗೆ ಔಷಧಿ ಬಾಕ್ಸ್ ಲಭಿಸಿದೆ.ಈ ಸಂದರ್ಭದಲ್ಲಿ ರೈತರಾದ ಸಂತೋಷ ನಾಯಿಕ, ಕೆ ಆರ್ ಪಾಟೀಲ, ಭೀಮಗೌಡ ನಾಯಿಕ, ವಿಠ್ಠಲ ಭಂಡಾರೆ, ಮಹಾಂತೇಶ ಕಾಂಬಳೆ,ಲಕ್ಷ್ಮಣ ಅವಳೆ, ನಿತೀನ ಪಾಟೀಲ, ಶ್ರೀಶೈಲ ಮಗದುಮ್ಮ, ಹಣಮಂತ ಗುರವ,ಲಕ್ಷ್ಮಣ ಬಾಡಗಿ,ಸಂತೋಷ ಬಾಡಗಿ ಮುಂತಾದವರು ಉಪಸ್ಥಿತರಿದ್ದರು.
