ಯಾದಗಿರಿ: ಗ್ರಾಮ ಪಂಚಾಯಿತಿಗಳ ಆದಾಯದ ಮೂಲ ಕರ ಸಂಗ್ರಹಿಸಲು ಜಿಲ್ಲೆಯ ಪಂಚಾಯತಯಿಂದ ಗ್ರಾಮ ಪಂಚಾಯಿತಿಗಳಲ್ಲಿ
ಹಮ್ಮಿಕೊಂಡ ಒಂದು ದಿನದ ಕರ ವಸೂಲಿ ವಿಶೇಷ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತಿಯಿಂದ 2 ಲಕ್ಷ ತೆರಿಗೆ ಸಂಗ್ರಹವಾಗುಬೇಕು
ಎಂದು ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಯಾದಗಿರಿ ಅಧಿಕಾರಿಯಾದ ಶ್ರೀ ಸಿ.ಬಿ ದೇವರಮನಿ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದ್ದ ಹಿನ್ನಲೆಯಲ್ಲಿ
ನಿರ್ದೇಶನದಂತೆ ನ.27 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡ 2 ಕೋಟಿ ಕರ ಸಂಗ್ರಹ ಒಂದು ದಿನದ ವಿಶೇಷ ಅಭಿಯಾನದ ಅಂಗವಾಗಿ
ಯಾದಗಿರಿ ತಾಲೂಕಿನ ರಾಮುಸಮದ್ರ, ಬಳಿಚಕ್ರ, ಅರಿಕೇರಾ ಕೆ, ಹಾಗೂ ಗುರುಮಿಠಕಲ್ ತಾಲ್ಲೂಕಿನ ಪಸಪುಲ್, ಕಂದಕೂರ ,
ಯಲ್ವೇರಿ, ಕಾಳೆಬೆಳಗುಂದಿ ಗ್ರಾಮ ಪಂಚಾಯಿತಿಗಳಲ್ಲಿ ಭೇಟಿ ನೀಡಿ, ಬಾಕಿ ಇರುವ ಹಾಗೂ ಪ್ರಸಕ್ತ ಸಾಲಿನ ಕರ ವಸೂಲಿ ಮಾಡಲು
ಗ್ರಾಮದ ಪ್ರತಿ ಮನೆ-ಮನೆಗೆ ಭೇಟಿ ನೀಡಿ, ನಿಗಧಿತ ಕರ ವಸೂಲಿ ಮಾಡವಂತ ಸೂಚಿಸಿದ್ದರು.
ಜಿಲ್ಲೆಯ ಪ್ರತಿ ತಾಲೂಕಿಗೆ ಜಿಲ್ಲಾ ಪಂಚಾಯಿತಿ ನೀಡಿದ 2 ಕೋಟಿ ಕರ ಸಂಗ್ರಹಿಸುವ ನಿಗದಿತ ಗುರಿ ಹಾಗೂ ನಿರ್ದೇಶನದಂತೆ ನವೆಂಬರ್
27 ರಂದ 2 ಕೋಟಿ ಕರ ಸಂಗ್ರಹಿಸುವ ಒಂದು ದಿನದ ವಿಶೇಷ ಅಭಿಯಾನದ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿ, ಕರ
ವಸೂಲಿಗಾರರು, ಜಿಲ್ಲಾ ಐಇಸಿ ಸಂಯೋಜಕರು, ಎನ್‌ಆರ್‌ಎಲ್‌ಎಮ್ ಮಹಿಳಾ ಸ್ವಸಹಾಯ ಸಂಘದ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ
ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿ ಮನೆ-ಮನೆಗೆ ಭೇಟಿ ನೀಡಿ ಕರ ವಸೂಲಿ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ
ಮೂಡಿಸಿ, ಕರ ಪಾವತಿಸುವಂತೆ ಮನವೂಲಿಸಿ ತೆರಿಗೆ ಸಂಗ್ರಹಿಸಲಾಯಿತು.
ಗ್ರಾಮ ಪಂಚಾಯಿತಿಗಳು ಅನುಷ್ಟಾನ ಮಾಡುವ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಗಳ ನಿರ್ವಹಣೆಗೆ ಸರಕಾರ ನೀಡುವ
ಅನುದಾನದತ್ತ ನೋಡುವುದು ಕಡಿಮೆಯಾಗಬೇಕು. ಗ್ರಾಮ ಪಂಚಾಯಿತಿಗಳ ಆದಾಯದ ಮೂಲ ಕರ ಸಂಗ್ರಹ ಮಾಡಲು
ಮುಂದಾಗಬೇಕು. ತೆರಿಗೆ ಸಂಗ್ರಹದಲ್ಲಿ ಗುರಿ ಮಿರಿದ ಸಾಧನೆ ಮಾಡಲು ಕರ ವಸೂಲಿಗೆ ಪ್ರಥಮ ಆದ್ಯತೆ ನೀಡುಬೇಕು ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾದೇವ ಬಬಲಗಿ ಮತ್ತು ಗುರುಮಿಠಕಲ್
ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಐಇಸಿ
ಸಂಯೋಜಕರಾದ ಪರಶುರಾಮ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಚಾಯತಿ ಸದಸ್ಯರು ಉಪಸ್ಥಿತರಿದ್ದರು.

