Home ರಾಜಕೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮೇಟಿ ಸೂಚನೆಬೂತ್ ಮಟ್ಟದಲ್ಲಿ ನಿಗಾವಹಿಸುವುದು ಅಗತ್ಯ

ಕಾಂಗ್ರೆಸ್ ಕಾರ್ಯಕರ್ತರಿಗೆ ಮೇಟಿ ಸೂಚನೆಬೂತ್ ಮಟ್ಟದಲ್ಲಿ ನಿಗಾವಹಿಸುವುದು ಅಗತ್ಯ

by Laxmikanth Nayak
0 comments

ಯಾದಗಿರಿ: ಚುನಾವಣೆ ಆಯೋಗುವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಎಚ್ಚರಿಕೆ ವಹಿಸುವುದು ತುಂಬ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಹೇಳಿದರು.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶೇಷವಾಗಿ ಹಿಂದುಳಿದ ವರ್ಗದವರು, ದಲಿತರು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಕೆಲವೊಂದು ರಾಜ್ಯಗಳಲ್ಲಿ ನಡೆದಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ತುಂಬ ಅಗತ್ಯವಿದೆ. ನಿರ್ಲಕ್ಷö್ಯತನ ವಹಿಸಿದರೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಹೇಳಿದರು.


ಮತದಾರರ ಪಟ್ಟಿಯಲ್ಲಿ ಇರುವ ಮತದಾರರು ಆಯಾ ವಿಳಾಸದಲ್ಲಿ ಇದ್ದಾರೆಯೇ, ಮೃತಪಟ್ಟಿದ್ದಾರೆಯೇ, ಅವರ ವೈವಾಹಿಕ ಮತ್ತು ಕೌಟುಂಬಿಕ ವಿವರಗಳು ಬದಲಾಗಿವೆಯೇ ಎಂಬುದನ್ನು ಪರಿಶೀಲಿಸುವ ಹಾಗೂ ಸರಿಪಡಿಸುವ ಬೃಹತ್ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದರು.


ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿವೆ. ಹೀಗಾಗಿಯೇ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಯಿಂದ ಯಾವುದೇ ಹೆಸರುಗಳು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

banner

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ