ಕೊಪ್ಪಳ : ಮುಂದೆ ಎಂ.ಎಸ್. ಪಿ.ಎಲ್.ಬಲ್ದೋಟ ಕಾರ್ಖಾನೆ ವಿಸ್ತರಣೆಯಾದರೆ ಇಪ್ಪತ್ತೇಳು ಹೊಗೆ ಕೊಳವೆಗಳು ಬರುತ್ತವೆ ಎಚ್ಚರ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮ ಪ್ರಭು ಬೆಟ್ಟದೂರು ಆಕ್ರೋಶದಿಂದ ನುಡಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆಪ್ಟೆಂಬರ್ 18 ರಿಂದ 24 ರವರಿಗೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡ ಪರಿಸರ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಮಳೆಯಲ್ಲೇ ಚಾಲನೆ ನೀಡಿ ಮಾತನಾಡಿದ ಅಲ್ಲಮ ಪ್ರಭು ಬೆಟ್ಟದೂರು ಮುಂದುವರೆದು ಮಾತನಾಡಿ ನಾವು ಯಾರು ಉಸಿರಾಳುತ್ತೇವೆ ಅವರೆಲ್ಲ ಎಚ್ಚರಗೊಳ್ಳಬೇಕಾದ ಕಾಲ ಬಂದಿದೆ. ಎಂ ಎಸ್ ಪಿ ಎಲ್ ವಿಸ್ತರಣೆ ಜೊತೆಗೆ ಸುಮಿ ಎನ್ನುವಂತಹ ಜಪಾನಿನ ಇನ್ನೊಂದು ಕಂಪನಿಯೂ ಕೂಡ ಬರಲಿದೆ. ಇದರ ಹೊಗೆ ಬೂದಿಯಿಂದ ಇನ್ನಷ್ಟು ಪರಿಸರ ಹಾಳಾಗಲಿದೆ. ಗಿಣಿಗೇರಾ ಅಲ್ಲ ನಗರ ಬಗನಾಳ ಕಾಸನಕಂಡಿ ಈಗಾಗಲೇ ಹೊಗೆ ಬೂದಿಯಿಂದ ಹಾಳಾಗಿವೆ. ಅಲ್ಲಿಯ ಜನರಿಗೆ ಟಿ.ಬಿ. ಕ್ಯಾನ್ಸರ್ ಬಂದಿದೆ.ಗವಿ ಶ್ರೀ ನಗರ.ಕಾಳಿದಾಸ ನಗರ.ಜಿಲ್ಲಾ ಕಚೇರಿಗೂ ಹೊಗೆ ಬರುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಹಳ್ಳಿಗಳು ಬಾಧಿತ ವಾಗಿವೆ. ಉದ್ಯಮ ಮಂತ್ರಿ ಎಂ.ಬಿ.ಪಾಟೀಲ್ ಜಪಾನಿನ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕೊಪ್ಪಳ ಪುರಾತನ ವಾದಂತಹ ನಗರ. ಇದಕ್ಕೆ ದೊಡ್ಡ ಹಿತಿಹಾಸವಿದೆ. ತಿರುಳ್ಗನ್ನಡ ನಾಡು ಅಂತ ಕರೆದಂತಹ ಇತಿಹಾಸವಿದೆ. ಕೊಪ್ಪಳದಲ್ಲಿ ಅಶೋಕನ ಎರಡು ಶಾಸನ ಇರುವುದು ನಿಮಗೆಲ್ಲ ಗೊತ್ತಿದೆ. ಪ್ರಾಚೀನವಾದ ಐತಿಹಾಸಿಕ ಕೊಪ್ಪಳ ಇದು ಇಪ್ಪತ್ತೇಳು ಹೊಗೆ ಕೊಳವೆಗಳು ಬಂದರೆ ತೋರಣಗಲ್ಲ ಹರಿಹರ ದಂತಾಗುತ್ತದೆ. ಉಸಿರಾಡತಕ್ಕಂತಹ ಜನರೇ ನಿಮಗೆ ಒಳ್ಳೆಯ ಗಾಳಿ ಸಿಗುವುದಿಲ್ಲ. ಕೊಪ್ಪಳಕ್ಕೆ ಇಂಥ ಸ್ಥಿತಿ ಬರಬಾರದೆಂದರೆ ಯಾರೆಲ್ಲಾ ಉಸಿರಾಡುತ್ತಿದ್ದರು ನಾವೆಲ್ಲರೂ ಈ ಹೋರಾಟದಲ್ಲಿ ತೊಳಗಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ ಯಾವುದೇ ಕಾರಣಕ್ಕೂ ಎಮ್.ಎಸ್.ಪಿ.ಎಲ್. ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಬರಬಾರದು ಎಂದು ನಿರಂತರ ಹೋರಾಟ ಮಾಡುತ್ತಿದ್ದೇವೆ. ಕಾರ್ಖಾನೆಗಳು ಹೊರ ಸೂಸುವ ಮಾಲಿನ್ಯದಿಂದ ಹೋಗೆ ಮತ್ತು ಧೂಳಿನಿಂದ ಸುಮಾರು ಇಪ್ಪತ್ತೈದು ರಿಂದ ಮೂವತ್ತು ಹಳ್ಳಿಗಳ ರೈತರು ಬದುಕಲಿಕ್ಕೆ ಆಗ್ತಾ ಇಲ್ಲ. ಆ ಭಾಗದ ಗ್ರಾಮಗಳ ರೈತರ ಪ್ರತಿ ಕುಟುಂಬದಲ್ಲಿ ಒಂದಿಲ್ಲ ಒಂದು ರೋಗರುಜಿನಗಳು ಆವರಿಸಿವೆ. ಸಾವುಗಳು ಸಂಭವಿಸುತ್ತಿವೆ. ಎಂ.ಎಸ್.ಪಿ.ಎಲ್.ಬಲ್ಡೋಟ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳು ಸ್ಥಾಪನೆಯಾದರೆ ಕೊಪ್ಪಳ ಭಾಗ್ಯನಗರದ ಲಕ್ಷಾಂತರ ಜನರು. ಸಾವಿರಾರು ಕುಟುಂಬಗಳಿಗೆ ಕಂಠಕವಾಗುತ್ತದೆ. ಈಗಾಗಲೇ ಶಾಸಕರಿಗೆ ಸಂಸದರಿಗೆ ಸಚಿವರಿಗೆ ಮನವಿ ಮಾಡಿದ್ದೇವೆ ಯಾವುದೇ ಕಾರಣಕ್ಕೂ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳು ಬೇಡ ಎಂದು ಹೇಳಿದ್ದೇವೆ ಎಂದು ನುಡಿದರು.
ಗವಿಶ್ರೀ ನಗರದಲ್ಲಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ ಬೆಳಿಗ್ಗೆ ನೋಡಿದರೆ ಈಗಿರುವ ಬೃಹತ್ ಕಾರ್ಖಾನೆಗಳಿಂದ ನಮ್ಮ ಗವಿ ಶ್ರೀ ನಗರದ ಮನೆಗಳೆಲ್ಲ ಹೊಗೆ ಧೂಳು ಆಕ್ರಮಿಸಿಕೊಂಡಿರುತ್ತದೆ. ಮತ್ತೆ ಬೃಹತ್ ಕಾರ್ಖಾನೆ ಬರುತ್ತಿದೆ. ಆವಾಗ ನಮ್ಮ ಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ.ಕೊಪ್ಪಳ ತಿರುಳುಗನ್ನಡ ನಾಡು ಹೋಗಿ ಹೊಗೆ ಉಗುಳುವ ನಗರವಾಗಲಿದೆ. ನಾವೆಲ್ಲರೂ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಹಿಂದ ಮುಖಂಡ ಕರೀಮ್ ಪಾಷಾ ಎಂ.ಗಚ್ಚಿನ ಮನಿ ಮಾತನಾಡಿ ಎಮ್.ಎಸ್.ಪಿ.ಎಲ್. ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರುದ್ದ ಕೆಲವಷ್ಟೇ ಜನರಿದ್ದಾರೆ ಎಂದು ತಿಳಿದಿರಬಹುದು, ಹೋರಾಟಕ್ಕೆ ಇನ್ನೂ ನೂರಾರು.ಸಾವಿರಾರು.ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ. ನಾವು ಒಟ್ಟಾದರೆ ಮಾತ್ರ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಾರೆ ಎಂದು ಹೇಳಿದರು.
ಇನ್ನೊಬ್ಬ ಮುಖಂಡ ಕೆ.ಬಿ.ಗೋನಾಳ ಮಾತನಾಡಿ ಇಲ್ಲಿಯ ಜನರು ರೋಗಗ್ರಸ್ಥರಾಗುತ್ತಿದ್ದಾರೆ. ಇಲ್ಲಿರ್ತಕ್ಕಂತ ಮಕ್ಕಳು ಗರ್ಭಿಣಿಯರಿಗೆ ಕುಪ್ಪಸದ ರೋಗ ಎದುರಾಗುತ್ತಿದೆ. ಆ ಕಾರಣಕ್ಕಾಗಿ ನಾವು ಕೊಪ್ಪಳ ನಗರದ.ಭಾಗ್ಯನಗರದ ಸುತ್ತಮುತ್ತಲಿನ ಒಂದುವರೆ ಲಕ್ಷ ಜನರ ಭವಿಷ್ಯ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಫೆಬ್ರುವರಿಯಲ್ಲಿ ಸರ್ಕಾರ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ ಸಂದರ್ಭದಲ್ಲಿ ಜಾಗೃತದರಾದಂತಹ ನಾವೆಲ್ಲರೂ ಎಂ.ಎಸ್.ಪಿ.ಎಲ್.ಬಲ್ದೋಟದ ಒಂದು ಕೊಳವೆಯಿಂದ ಇಷ್ಟೊಂದು ಹಾಳು ಮಾಡಿರಬೇಕಾದರೆ 54 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೋಡಿದ್ದರೆ ಖಂಡಿತವಾಗಿ ಧೂಳಲ್ಲ ಸ್ಮಶಾನವಲ್ಲ ಸಂಪೂರ್ಣ ಸರ್ವನಾಶದ ಅಂಚಿಗೆ ತಲುಪುತ್ತದೆ. ಕೊಪ್ಪಳ ಭಾಗ್ಯನಗರದ ಸುತ್ತಮುತ್ತಲಿನ ಜನರು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಎಸ್.ಎ.ಗಫಾರ್ ಮಾತನಾಡಿ ಕೊಪ್ಪಳ ಭಾಗ್ಯನಗರ ಅವಳಿ ನಗರದ ಜನರು ಜಾಗೃತರಾಗಿರಬೇಕು. ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ಮಾಡುತ್ತಿದ್ದಾರೆ ಅವೆಲ್ಲವೂ ಸ್ಥಗಿತಗೊಳ್ಳಬೇಕು. ಇಲ್ಲದಿದ್ದರೆ ಕೊಪ್ಪಳ ಭಾಗ್ಯನಗರದ ಜನರ ಮತ್ತು ಜಾನುವಾರುಗಳ ಆರೋಗ್ಯ ಹಾಳಾಗಿ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಒಂದಾಗಿ ಕಾರ್ಖಾನೆಗಳ ವಿಸ್ತರಣೆ ವಿರುದ್ಧ ನಡೆಯುವ ಆಂದೋಲನಕ್ಕೆ ಎಲ್ಲರೂ ಬೆಂಬಲ ಕೊಟ್ಟು.ಮುಂದೆ ಬರುವ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಟಕ್ಕೆ ಮುನ್ನುಗೋಣ ಎಂದು ಹೇಳಿದರು.
ಗವಿಶ್ರೀ ನಗರ. ಬಸವೇಶ್ವರ ವೃತ್ತ. ಅಶೋಕ ವೃತ್ತದಲ್ಲಿ ಹಿರಿಯ ಮುಖಂಡ ಡಿ.ಹೆಚ್. ಪೂಜಾರ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮುಂತಾದವರು ಮಾತನಾಡಿದರು.ಗುಡದಪ್ಪ ಭಂಗಿ. ಯಮನೂರಪ್ಪ ಹಾಲಳ್ಳಿ ಬಸಾಪುರ. ಹಂಚಳಪ್ಪ ಇಟಗಿ ಮುಂತಾದವರು ಭಾಗವಹಿಸಿದ್ದರು.

