Home ಅಂತರಾಷ್ಟ್ರೀಯ ಸುದ್ದಿ ಜನ ಆಕ್ರೋಶ ವಿಶೇಷ ವರದಿ: ದೇವದುರ್ಗದ ರಸ್ತೆ ಗುಂಡಿಗಳು ‘ಐತಿಹಾಸಿಕ ಸ್ಮಾರಕಗಳು’! – ಅಭಿವೃದ್ಧಿ ಶೂನ್ಯಕ್ಕೆ ಜನರ ತೀವ್ರ ಆಕ್ರೋಶ

ಜನ ಆಕ್ರೋಶ ವಿಶೇಷ ವರದಿ: ದೇವದುರ್ಗದ ರಸ್ತೆ ಗುಂಡಿಗಳು ‘ಐತಿಹಾಸಿಕ ಸ್ಮಾರಕಗಳು’! – ಅಭಿವೃದ್ಧಿ ಶೂನ್ಯಕ್ಕೆ ಜನರ ತೀವ್ರ ಆಕ್ರೋಶ

by Laxmikanth Nayak
0 comments

ಜನ ಆಕ್ರೋಶ

ದೇವದುರ್ಗ: ಸತತ ಆಡಳಿತ ವೈಫಲ್ಯ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ಕುಸಿದಿರುವ ಮೂಲಸೌಕರ್ಯಕ್ಕೆ ದೇವದುರ್ಗ ತಾಲ್ಲೂಕು ಸಾಕ್ಷಿಯಾಗಿದೆ. ತಾಲ್ಲೂಕಿನ ದೇವದುರ್ಗ-ಶಹಾಪುರ ಹೆದ್ದಾರಿಯ (ಹೂವಿನಹೆಡಗಿ ಗ್ರಾಮದಿಂದ ದೇವದುರ್ಗದವರೆಗೆ ಆರು ಕಿಲೋಮೀಟರ್) ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ಭಯಾನಕ ಗುಂಡಿಗಳನ್ನು ನೋಡಿದ ಜನರು ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. ಈ ಗುಂಡಿಗಳನ್ನು “ಬೆಲೆ ಕಟ್ಟಲಾಗದ ಐತಿಹಾಸಿಕ ಸ್ಮಾರಕಗಳು” ಎಂದು ವ್ಯಂಗ್ಯವಾಡಿ, ಆಕ್ರೋಶಭರಿತರಾಗಿರುವ ಸಾರ್ವಜನಿಕರ ಅಳಲು ಇಲ್ಲಿದೆ.

ರಸ್ತೆ ಗುಂಡಿಗಳು ‘ಕಳಶಪ್ರಾಯ’: ಜನರ ವ್ಯಂಗ್ಯಭರಿತ ಮಾತುಗಳು

ರಸ್ತೆಯ ದುಸ್ಥಿತಿಯ ಬಗ್ಗೆ ಮಾತನಾಡಿದ ಸ್ಥಳೀಯರ ಮಾತುಗಳು, ಆಳವಾದ ನೋವು ಮತ್ತು ತೀವ್ರ ವ್ಯಂಗ್ಯದಿಂದ ಕೂಡಿದ್ದವು:

banner
  • “ಮೊದಲು ಅವು ಸಣ್ಣವಿದ್ದವು, ನಾವೂ ಹೊಂದಿಕೊಂಡಿದ್ದೇವು. ಸರ್ಕಾರ ನಮ್ಮ ಸೊಂಟದ ದೃಢತೆ ಪರೀಕ್ಷಿಸಲು ಮಾಡಿದ ವ್ಯವಸ್ಥೆ ಅಂದುಕೊಂಡಿದ್ದೇವು.”
  • “ನಮಗೆ ಸಾರಿಗೆ ವ್ಯವಸ್ಥೆಯಾಗಿ ವಿಮಾನ ಒದಗಿಸುವ ಶಿವನಗೌಡ ನಾಯಕರ ಕಲ್ಪನೆಗೆ ಶರಣಾಗಿದ್ದೇವು. ರಸ್ತೆಗಳ ಮಧ್ಯೆ ನಳನಳಿಸುವ ಮೊಳಕಾಲು ಉದ್ದದ ಆ ಗುಂಡಿಗಳು ನಮ್ಮ ತಾಲ್ಲೂಕಿನ ಕಳಶಪ್ರಾಯಗಳು ಎಂದು ಭಾವಿಸಿದ್ದೇವು.”
  • “ಅವು ಇರುವುದರಿಂದಲೇ ನಮಗೆ ಇಡೀ ಪ್ರಪಂಚದಲ್ಲಿಯೇ ಅತಿ ಹಿಂದುಳಿದ ತಾಲ್ಲೂಕು ಎನ್ನುವ ಗೌರವಕ್ಕೆ ಪಾತ್ರವಾಗಿದೆ ಎನ್ನುವ ಹೆಮ್ಮೆ ನಮಗಿತ್ತು. ಇವುಗಳನ್ನು ನಾವು ಐತಿಹಾಸಿಕ ಸ್ಮಾರಕಗಳು ಎಂದು ನಂಬಿದ್ದೇವೆ, ಅವುಗಳ ಪ್ರೇಕ್ಷಣೀಯತೆಗೆ ಮಾರು ಹೋಗಿದ್ದೇವು.”
  • “ಈ ಗುಂಡಿಯ ಕಾರಣಕ್ಕೆ ಬೈಕ್ ಅಪಘಾತಕ್ಕೆ ಒಳಗಾದ ಎಷ್ಟೋ ಜನ ಕೈಕಾಲು ಮುರಿದುಕೊಂಡು ಶ್ರಮದಾಯಕ ಜೀವನ ಪದ್ಧತಿಯಿಂದ ವಿಮುಕ್ತರಾಗಿದ್ದಾರೆ. ಇದರ ಶ್ರೇಯಸ್ಸು ಈ ಆಡಳಿತಗಾರರಿಗೆ ಸೇರಬೇಕು,” ಎಂದು ಹೇಳುತ್ತಾ ವ್ಯಂಗ್ಯವಾಗಿ ಕೃತಜ್ಞತೆ ಸಲ್ಲಿಸಿದರು.

“ಶಾಸಕರು ಅಭಿವೃದ್ಧಿ, ಜನರಿಗೆ ಶೂನ್ಯ”: ದಶಕಗಳ ಆಕ್ರೋಶ

ತಾಲ್ಲೂಕು ಎಸ್ಸಿ ಮೀಸಲು ಕ್ಷೇತ್ರವಾಗಿದ್ದ ಆರಂಭಿಕ ದಿನಗಳಿಂದಲೂ ದೇವದುರ್ಗದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಸಾರ್ವಜನಿಕರೊಬ್ಬರು ನೋವು ತೋಡಿಕೊಂಡರು.

  • “ಶಾಸಕರು, ರಾಜಕಾರಣಿಗಳು ತಮ್ಮ ಮಟ್ಟಿಗೆ ಸಾಕಷ್ಟು ಆಸ್ತಿ ಅಭಿವೃದ್ಧಿ ಸಾಧಿಸುತ್ತಿದ್ದಾರೆಯೇ ವಿನಃ ಜನರ ಜೀವನಮಟ್ಟದಲ್ಲಿ ಯಾವ ಸುಧಾರಣೆಯೂ ಇಲ್ಲ.”
  • “ಜನಗಳನ್ನು ಭಾವನಾತ್ಮಕವಾಗಿ ಸೆಳೆದು ಮತ ಪಡೆಯುವ ಇಲ್ಲಿನ ರಾಜಕಾರಣಿಗಳು, ನಂತರ ಜನರ ಹಿತ ಚಿಂತನೆಯನ್ನು ಮರೆತು ಬಿಡುತ್ತಾರೆ. ಮಹಾ ದ್ರೋಹ, ವಂಚನೆ ಮಾಡುತ್ತಾರೆ. ತಲೆಮಾರುಗಳು ಕೂತು ತಿಂದರೂ ಸವೆಯದಷ್ಟು ಆಸ್ತಿ ಮಾಡುತ್ತಾರೆ.”
  • “ಇಂದು ದೇವದುರ್ಗ ತಾಲ್ಲೂಕಿನ ಪ್ರತಿ ಗ್ರಾಮೀಣ ಪ್ರದೇಶವನ್ನೂ ಪರಿಶೀಲಿಸಿ ನೋಡಿ. ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ಬಾರದ ಸ್ಥಿತಿಯಲ್ಲಿ ರಸ್ತೆ ಮಾರ್ಗಗಳಿವೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಚರಂಡಿಗಳಿಲ್ಲ, ರಸ್ತೆಗಳಿಲ್ಲ.”
    ಚುನಾವಣಾ ಆಕಾಂಕ್ಷಿಯಾಗಿ ಓಡಾಡಿದ್ದ “ಕರೆಮ್ಮನವರ” ಬಗ್ಗೆ ಪ್ರಸ್ತಾಪಿಸಿದ ಮತ್ತೊಬ್ಬರು, “ಅಭಿವೃದ್ಧಿ ಪಡಿಸುವುದೇ ಗುರಿ ಎಂದಳು. ನಂಬಿದಿವಿ, ಹಣಕೊಟ್ಟು ಓಟು ಕೊಟ್ಟೆವು. ನಂತರದ ಅಭಿವೃದ್ಧಿ ನಿಮ್ಮ ಕಣ್ಣ ಮುಂದಿದೆ. ಕರೆಮ್ಮನವರ ಜೊತೆ ಜೊತೆಗೆ ಈ ಗುಂಡಿಗಳೂ ಅಭಿವೃದ್ಧಿಯಾಗಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಮಗೆ ದೇವರೆ ಗತಿ, ದೇವರೂ ನಿಷ್ಕ್ರಿಯ”: ಜನತೆಯ ಹತಾಶೆ

ಕೊನೆಯದಾಗಿ ಸಾರ್ವಜನಿಕರು ತೋಡಿಕೊಂಡ ಅಳಲು ಅತ್ಯಂತ ಶೋಚನೀಯವಾಗಿತ್ತು:

“ನಮಗೆ ಸರ್ಕಾರ ಎಂದರೆ ಏನು ಎನ್ನುವುದು ಗೊತ್ತಿಲ್ಲ. ಇದನ್ನು ಯಾರಿಗೆ ಹೇಳಬೇಕು ಎನ್ನುವುದು ಗೊತ್ತಿಲ್ಲ. ಯಾರ ಬದುಕಿಗೆ ಯಾರು ಹೊಣೆಗಾರರು ಎಂದುಕೊಳ್ಳುತ್ತಾ ಇದು ನಮ್ಮ ಹಣೆಬರಹ ಎಂದು ಜೀವಿಸುತ್ತಿದ್ದೇವೆ. ಅಕ್ಕರಿಕಿ ಯಲ್ಲಪ್ಪನಿಂದ ಹಿಡಿದು ಕರೆಮ್ಮನವರೆಗೆ ಎಲ್ಲರನ್ನೂ ನೋಡಿದ್ದಾಯ್ತು. ನಮಗೆ ಈಗ ದೇವರೆ ಗತಿ ಎಂದು ನಂಬಿದ್ದೇವೆ. ಆದರೆ ಕಲಿಯುಗದಲ್ಲಿ ದೇವರೂ ನಿಷ್ಕ್ರಿಯನಾಗಿರುವಂತೆ ಕಂಡು ಬರುತ್ತಿದೆ.”

ದೇವದುರ್ಗದಲ್ಲಿ ಆಡಳಿತ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೂಲ ಉದ್ದೇಶ ಸಂಪೂರ್ಣ ನಿಷ್ಕ್ರಿಯವಾಗಿರುವಂತಿದೆ. ಜನರ ಈ ಅಳಲು ಮತ್ತು ಹತಾಶೆಯ ಹಿನ್ನೆಲೆಯಲ್ಲಿ “ಅಸಲು ಸರ್ಕಾರ ಎಂದರೆ ಏನು ಎನ್ನುವುದು ಜನರ ಪ್ರಶ್ನೆ. ಇದಕ್ಕೆ ಉತ್ತರಿಸುವವರು ಯಾರು?” ಎಂಬುದು ಇಲ್ಲಿನ ಆಡಳಿತಗಾರರನ್ನು ಕಾಡಬೇಕಾದ ದೊಡ್ಡ ಪ್ರಶ್ನೆಯಾಗಿದೆ.

ಜನ ಆಕ್ರೋಶ ವರದಿಗಾರ, ದೇವದುರ್ಗ.

filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 43;

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ