ಜನ ಆಕ್ರೋಶ ವರದಿ
ಸುರಪುರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸುರಪುರ ಮಂಡಲ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ‘ಆತ್ಮನಿರ್ಭರ ಭಾರತ ಮತ್ತು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಶ್ರೀ ನರಸಿಂಹ ನಾಯಕ (ರಾಜುಗೌಡ್ರು) ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜುಗೌಡ್ರು ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆ ಹಾಗೂ ದೇಶದ ಆರ್ಥಿಕತೆಗೆ ಜಿಎಸ್‌ಟಿ ವ್ಯವಸ್ಥೆಯ ಕೊಡುಗೆಯ ಕುರಿತು ಕಾರ್ಯಕರ್ತರಿಗೆ ವಿವರವಾದ ಮಾಹಿತಿ ನೀಡಿದರು.
ಪ್ರಮುಖ ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಜಾ ಹನಮಪ್ಪ ನಾಯಕ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ವಿಭೂತಿಹಳ್ಳಿ, ಸುರಪುರ ಮಂಡಲ ಅಧ್ಯಕ್ಷರಾದ ಶ್ರೀ ವೇಣುಮಾದವ್ ನಾಯಕ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೆಲಪ್ಪ ಗುಳಗಿ, ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಭೀಮಾಶಂಕರ ಬಿಲ್ಲವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಿಂಗಣ್ಣ ಐಕೊರು, ಕಾರ್ಯಾಗಾರದ ಜಿಲ್ಲಾ ಸಹ ಸಂಚಾಲಕರು ಮೌನೇಶ್ ಬೆಳಗೇರಾ, ತಾಲೂಕು ಸಂಚಾಲಕರು ಗಂಗಾಧರ ನಾಯಕ ಸೇರಿದಂತೆ ಯಲ್ಲಪ್ಪ ಕುರಕುಂದಿ, ರಾಜಾ ಶ್ರೀ ಮುಕುಂದ ನಾಯಕ, ಎಚ್.ಸಿ ಪಾಟೀಲ್, ವೇಣುಗೋಪಾಲ್ ಜೇವರ್ಗಿ, ಎಸ್ .ಎನ್ ಪಾಟೀಲ್, ಪ್ರಕಾಶ ಸಜ್ಜನ, ಬಲಭೀಮ ನಾಯಕ ಬೈರಿಮಡ್ಡಿ, ನರಸಿಂಹ ಕಾಂತ ಪಂಚಮಗಿರಿ, ಶರಣಯ್ಯ ಮಠಪತಿ, ತಿಪ್ಪರಾಜು ಬಾಚಿಮಟ್ಟಿ, ವಿಜಯ ಕುಮಾರ್ ಮಂಗಿಹಾಳ, ಲಕ್ಷ್ಮಿಕಾಂತ. ದೇವರುಗೋನಾಲ ಹಾಗೂ ಪಕ್ಷದ ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶ್ರೀ ಜಗದೀಶ ಪಾಟೀಲ್ ಸೂಗೂರ ಅವರು ನಿರೂಪಿಸಿದರು.

