ವೆಂಕಟೇಶ ಡಿ.ಎಲ್. ಪಾಂಡವಪುರ
ಸತ್ಯವು ಯಾವಾಗಲೂ ಕಹಿಯಾಗಿರುತ್ತದೆ. ಆದರೆ ಆ ಸತ್ಯವನ್ನು ಹೇಳಿದಾಗ ಕೆಲವರಿಗೆ ಅದು ಹಾಸ್ಯಾಸ್ಪದ ಎನಿಸಿಕೊಳ್ಳುತ್ತದೆ.
ಉದಾಹರಣೆಗೆ ಬಿಪಿ ಬಂದ ವ್ಯಕ್ತಿಗಳು ಅಂದರೆ ಬಿಪಿ ಹೆಚ್ಚು ಇರುವ ವ್ಯಕ್ತಿಗಳು ಜೀವಮಾನವಿಡಿ ಮಾತ್ರೆಗಳನ್ನು ನುಂಗಬೇಕು ಅಂತ ಹೇಳಿದರೆ ಕೆಲವು ವ್ಯಕ್ತಿಗಳಿಗೆ ಸಕ್ಕರೆ ಹಾಕಿದ ಹಾಲು ಕುಡಿದಷ್ಟು ತುಂಬಾ ಸಂತೋಷವಾಗುತ್ತದೆ. ಬಿಪಿಯ ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಮುಂದೆ ಕ್ಯುನಿಲ್ಲಬೇಕು ಅಂತ ಹೇಳಿದರೆ ಮತ್ತು ಕೆಲವರಿಗೆ ತುಂಬಾ ಸಂತೋಷವಾಗುತ್ತದೆ. ತಮ್ಮ ರೋಗಕ್ಕೆ ಲಕ್ಷಾಂತರ ರೂಪಾಯಿಗಳ ಚಿಕಿತ್ಸೆ ಪಡೆಯುವುದು ಅತ್ಯಂತ ಆಧುನಿಕ ಮತ್ತು ವೈಜ್ಞಾನಿಕ ಎಂದು ಅನೇಕರು ಭಾವಿಸುತ್ತಾರೆ.
ಆದರೆ ಬಿಪಿ ಎನ್ನುವುದು ಅನೇಕರಲ್ಲಿ ಅವರ ದುರಾಸೆಯಿಂದ ಉಂಟಾದ ಒಂದು ಆರೋಗ್ಯ ಸಮಸ್ಯೆ ಎಂದು ಹೇಳಿದರೆ ಹಾಗೆ ಹೇಳಿದ ವ್ಯಕ್ತಿಗಳನ್ನು ಮೇಲಿಂದ ಕೆಳಕ್ಕೆ ತಿರಸ್ಕಾರಾತ್ಮಕವಾಗಿ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ.
ಹೌದು ಅನೇಕರಲ್ಲಿ ಕಂಡುಬರುವ ರಕ್ತದ ಅಧಿಕ ಒತ್ತಡ ಸಮಸ್ಯೆಯ ಮೂಲ ಕಾರಣ ಅವರ ದುರಾಸೆ ಆಗಿರುತ್ತದೆ. ಅವರಿಗೆ ದುರಾಸೆಯ ಕಾರಣದಿಂದಲೇ ಬಿಪಿ ಬಂದಿರುತ್ತದೆ.
ಕುಡುಕರಿಗೆ ಹೇಗೆ ಅವರ ಕುಡುಕುತನವೇ ಯಕೃತ್ತಿನ ನಾರುಗಟ್ಟುವಿಕೆಗೆ ಕಾರಣವಾಗುತ್ತದೆಯೋ ಹಾಗೆಯೇ ಅನೇಕರ ದುರಾಸೆ ಬಡುಕತನದ ತಿನ್ನು ಬಾಕತನವೇ ಅವರ ಅಧಿಕಾರ ಒತ್ತಡಕ್ಕೆ ಕಾರಣವಾಗಿರುತ್ತದೆ.
ಇದು ಹೇಗೆಂದು ನೋಡೋಣ.
ನಮಗೆ ಪ್ರಕೃತಿಯಲ್ಲಿ ದೊರೆಯುವ ಆಹಾರಗಳಲ್ಲಿ ಒಗ್ಗರಣೆಯ ಕೃತಕ ಪರಿಮಳವು ಕಂಡು ಬರುವುದಿಲ್ಲ. ಅಷ್ಟೇ ಅಲ್ಲ ಅಡುಗೆ ಮನೆಯಲ್ಲಿ ಕಂಡುಬರುವ ವಿವಿಧ ಬಗೆಯ ರುಚಿಗಳು ಸಹ ನಮಗೆ ದೊರೆಯುವ ಪ್ರಾಕೃತಿಕ ಆಹಾರಗಳಲ್ಲಿ ಕಂಡು ಬರುವುದಿಲ್ಲ. ಪ್ರಾಕೃತಿಕ ಆಹಾರಗಳಲ್ಲಿ ಸಾಮಾನ್ಯವಾಗಿ ವಿವಿಧ ಬಗೆಯ ಆಕರ್ಷಕ ರುಚಿಗಳ ಸೆಳೆತವಿರುವುದಿಲ್ಲ.
ಈಗ ಇಂತಹ ಕೃತಕ ರುಚಿಯ ಸೃಷ್ಟಿಯ ಮೂಲಕ ಆಹಾರದ ಸೇವನೆಯ ಪ್ರಮಾಣವನ್ನು ಹೇಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಒಬ್ಬ ಕೃಷಿ ತಜ್ಞರು ಒಂದು ಸಲಹೆಯನ್ನು ಕೊಟ್ಟರು. ಅದೇನೆಂದರೆ ಒಣ ಹುಲ್ಲಿಗೆ ಯೂರಿಯಾ ಕರಗಿಸಿದ ನೀರನ್ನು ಚುಮುಕಿಸಿದರೆ ಹಸುಗಳು ಆ ಹುಲ್ಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತವೆ ಎಂಬುದೇ ಆಗಿತ್ತು. ಅಂದರೆ ಆಹಾರದ ರುಚಿಯನ್ನು ಕೃತಕವಾದ ಮಾನವ ನಿರ್ಮಿತ ಉಪಾಯಗಳ ಮುಖಾಂತರ ಹೆಚ್ಚಿಸಿ ಅವುಗಳ ಸೇವನೆಯನ್ನು ಹೆಚ್ಚಿಸುವ ಈ ನಾಗರೀಕ ವಿಧಾನಗಳೇ ಮಾನವನ ಅನೇಕ ರೋಗಗಳ ಮೂಲವಾಗಿದೆ ಎಂದರೆ ತಪ್ಪಾಗಲಾರದು.
ಕೃತಕ ರುಚಿಗಳ ಸೃಷ್ಟಿಗಾಗಿ ಅನ್ನವನ್ನು ಸೀಯಿಸುವುದು, ದೋಸೆಯನ್ನು ಕರಕಲು ಗೊಳಿಸುವುದು ಇಂತಹ ಅನೇಕ ಅಡುಗೆಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಹಾಗೆಂದು ಈ ಕ್ರಮಗಳು ಸಂಪೂರ್ಣವಾಗಿ ತಪ್ಪೆಂದು ಹೇಳಲು ಸಾಧ್ಯವಿಲ್ಲ.
ಆದರೆ ಈ ಕೃತಕ ಕ್ರಮಗಳ ಅನುಸರಣೆಯಿಂದ ಮನುಷ್ಯನಿಗೆ ದುರಾಸೆ ಭರಿತ ಚಟ ಉಂಟಾಗುತ್ತದೆ.
ಆಲ್ಕೋಹಾಲಿನ ಸೆಳೆತವು ಹೇಗೋ ಹಾಗೆ ತಿನ್ನುವ ಚಟವು ಸಹ ಮನುಷ್ಯನಿಗೆ ತುಂಬಾ ದೊಡ್ಡ ಕೆಟ್ಟ ಚಟವಾಗಿ ಪರಿಣಮಿಸಿಬಿಟ್ಟಿದೆ. ಹಾಗೆ ನೋಡಿದರೆ ಪ್ರಪಂಚದಲ್ಲಿ ಆಲ್ಕೋಹಾಲಿನ ಸೇವನೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ವ್ಯಕ್ತಿಗಳ ಸಂಖ್ಯೆಗಿಂತಲೂ ತಿನ್ನುವ ಚಟದಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ವ್ಯಕ್ತಿಗಳ ಸಂಖ್ಯೆ ತುಂಬಾ ಜಾಸ್ತಿ ಇದೆ ಎಂದು ಹೇಳಿದರೆ ತಪ್ಪಾಗಲಾರದು.
ಇಲ್ಲಿ ಒಂದು ವೈಜ್ಞಾನಿಕವಾದ ವಿಷಯವನ್ನು ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಅತಿಯಾದ ಕುಡುಕುತನ ಮಾನವನ ಲಿವರ್ ಅನ್ನು ಹೇಗೆ ಹಾಳು ಮಾಡುತ್ತದೆಯೋ ಹಾಗೆಯೇ ಅವನ ಅತಿಯಾದ ತಿನ್ನೋಬಾಕತನವೂ ಕೂಡ ಅವನ ಲಿವರ್ ಅನ್ನು ಅಷ್ಟೇ ಕೆಟ್ಟದಾಗಿ ಹಾಳು ಮಾಡುತ್ತದೆ. ಎರಡು ದುಶ್ಚಟಗಳು ಸಹ fatty liver disease ಗೆ ಕಾರಣವಾಗುತ್ತದೆ.
ಅತಿಯಾದ ತಿನ್ನು ಬಾಕತನ ಅಧಿಕ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಜಠರೋಧರ ಮಾರ್ಗದಲ್ಲಿ ಉರಿಯೂತವನ್ನು ಉಂಟು ಮಾಡುವ ಆಹಾರಗಳ ಸೇವನೆಯೂ ಅಧಿಕ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ. ಅಂದರೆ ಹೊಟ್ಟೆಯಲ್ಲಿ ಉಂಟಾಗುವ ಉರಿಯುತವು ಅಧಿಕಾರದ ಒತ್ತಡಕ್ಕೆ ಕಾರಣವಾಗುತ್ತದೆ.
ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಒಂದು ವಿಷಯವಿದೆ. ಯಾವ ಆಹಾರವು ನಮಗೆ ತುಂಬಾ ಇಷ್ಟ ಅನಿಸುತ್ತದೆಯೋ ಅಂತಹ ಆಹಾರವನ್ನು ಸೇವಿಸಬೇಕಾದಾಗ ನಮಗೆ ಅದರ ಮೇಲೆ ನಿಯಂತ್ರಣ ಎನ್ನುವುದೇ ಇರುವುದಿಲ್ಲ. ಅಂತಹ ಆಹಾರಗಳನ್ನು ಸೇವಿಸುವಾಗ ಯಾವುದೋ ಒಂದು ಹಂತದಲ್ಲಿ ಕರುಳಿನಿಂದ ಹೊಟ್ಟೆ ತುಂಬಿರುವ ಬಗ್ಗೆ ಸಂಕೇತಗಳು ರವಾನೆ ಆಗುತ್ತಿರುತ್ತವೆ. ಆದರೆ ನಾವು ಈ ಕರುಳು ರವಾನಿಸುವ ಸಂತೃಪ್ತತೆಯ ಸಂಕೇತಗಳನ್ನು ಗುರುತಿಸುವ ಗೋಜಿಗೇ ಹೋಗದೆ ತಿನ್ನುವ ಕ್ರಿಯೆಯನ್ನು ಮುಂದುವರಿಸುತ್ತಿರುತ್ತೇವೆ. ಇದು ಮನುಷ್ಯನ ಸಾವಿರಾರು ರೋಗಗಳ ಮೂಲಕ್ಕೆ ಕಾರಣವಾಗಿರುತ್ತದೆ.
ಯಾವಾಗ ವ್ಯಕ್ತಿಯು ಈ ರೀತಿ ಕರುಳಿನ ಸಂಕೇತಗಳನ್ನು ನಿರ್ಲಕ್ಷಿಸಿ ಅತಿಯಾದ ಆಹಾರ ಸೇವನೆಯನ್ನು ಮಾಡುತ್ತಾನೆ ಆಗ ಅವನ ಕರುಳಿನಲ್ಲಿ ಅತಿಯಾದ ಉಬ್ಬುವಿಕೆ ಉಂಟಾಗುತ್ತದೆ. ಇದು ಅಂತರೋದರ ಒತ್ತಡವನ್ನು ಅಂದರೆ ಹೊಟ್ಟೆಯ ಒಳಗಿನ ಒತ್ತಡವನ್ನು ಅತಿಯಾಗಿ ಹೆಚ್ಚಿಸುತ್ತದೆ. ಇದರಿಂದ ಏನಾಗುತ್ತದೆಂದರೆ ಕರುಳಿನಲ್ಲಿ ಅತಿಯಾದ ಬಿಗಿತದ ಪರಿಸ್ಥಿತಿ ಉಂಟಾಗುತ್ತದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆ ಮಂದವಾಗಿ ಹೊಟ್ಟೆಯಲ್ಲಿ ಆಹಾರ ಕೊಳೆಯತೊಡಗಿ ಅಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾ ಗಳ ಉದ್ಭವವಾಗುತ್ತವೆ. ಇದರಿಂದ ಕರುಳಿನ ಉರಿತ ಉಂಟಾಗುತ್ತದೆ. ಹೊಟ್ಟೆಯ ಬಿಗಿತ ಮತ್ತು ಕರುಳಿನ ಉರಿಯುತ ಇವುಗಳೆರಡರ ಕಾರಣದಿಂದಾಗಿ ಹೃದಯವು ಆ ಭಾಗಕ್ಕೆ ಬಹಳ ಶ್ರಮದಿಂದ ರಕ್ತವನ್ನು ಪಂಪಿಸಬೇಕಾಗಿ ಬರುತ್ತದೆ. ಇದರಿಂದ ರಕ್ತದ ಒತ್ತಡದಲ್ಲಿ ಏರಿಕೆಯಾಗುತ್ತದೆ.
ಇದರಿಂದ ನಮಗೆ ತಿಳಿಯುವ ಸಂಗತಿ ಏನೆಂದರೆ ಆಹಾರದ ವಿಷಯದಲ್ಲಿ ಕರುಳಿಗೆ ಏನು ಬೇಕೋ ಆ ಆಹಾರಗಳನ್ನು ಕರುಳಿಗೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಕರುಳಿಗೆ ಯಾವಾಗ ಬೇಕು ಆ ಸಂದರ್ಭದಲ್ಲಿ ಸೇವನೆ ಮಾಡುವುದರಿಂದ ರಕ್ತದ ಒತ್ತಡವನ್ನು ಸರಿಪಡಿಸಿಕೊಳ್ಳಬಹುದು.
ಜೊತೆಗೆ ಇಲ್ಲಿ ತಿಳಿಯಬೇಕಾದ ಇನ್ನೊಂದು ವಿಷಯವಿದೆ. ಮಾನವನ ಹೊಟ್ಟೆಯಲ್ಲಿ ಸಾವಿರಾರು ಬಗೆಯ ಉಪಕಾರಿ ಬ್ಯಾಕ್ಟೀರಿಯಗಳ ದಂಡೇ ಇದೆ. ಇವುಗಳು ಮಾಡುವ ಅನೇಕ ಕೆಲಸಗಳಲ್ಲಿ ಒಂದು ಎಂದರೆ ವಿಟಮಿನ್ ಬಿ 12ರ ಉತ್ಪಾದನೆ. ಇಂತಹ ಸಾವಿರಾರು ಬಗೆಯ ಅವಶ್ಯಕತೆಗಳನ್ನು ಈ ಬ್ಯಾಕ್ಟೀರಿಯಾ ಗಳು ಮಾಡುತ್ತಿರುತ್ತವೆ. ಆದುದರಿಂದ ನಾವು ಈ ಬ್ಯಾಕ್ಟೀರಿಯಾ ಗಳಿಗೆ ಬೇಕಾದ ಆಹಾರವನ್ನು ತಿನ್ನಬೇಕೆ ಹೊರತು ನಮ್ಮ ನಾಲಿಗೆಯ ರುಚಿಗೆ ಬೇಕಾದ ಆಹಾರಗಳನ್ನು ಅಲ್ಲ. ಹಸುಗಳು ಹುಲ್ಲನ್ನು ಹೇಗೆ ತಿನ್ನುತ್ತವೆಯೋ ಹಾಗೆಯೇ ಮಾನವನ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ಹುಲ್ಲಿನಂತಹ ಆಹಾರವನ್ನು ಅಂದರೆ ನಾರುಭರಿತ ಆಹಾರವನ್ನು ಸೇವಿಸುತ್ತದೆ. ಅಂದರೆ ಯಾವ ನಾರಿನ ಅಂಶವನ್ನು ಮಾನವನ ಕರುಳು ಅರಗಿಸಿಕೊಳ್ಳಲಾರದು ಅಂತಹ ವಚನವಾಗದ ನಾರಿನ ಅಂಶಗಳೇ ಮಾನವನ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಗಳ ಆಹಾರಗಳಾಗಿವೆ. ಸಕ್ಕರೆಯಲ್ಲಿ ನಾರಿನಾಂಶವಿಲ್ಲ. ಇಂತಹ ನಾರಿನ ಅಂಶವಿಲ್ಲದ ಆಹಾರವನ್ನು ಸೇವಿಸಿದಾಗ ಸಕ್ಕರೆಯನ್ನು ತಿಂದು ಬದುಕುವ ಬ್ಯಾಕ್ಟೀರಿಯಾಗಳ ಸಂತತಿಯು ವೃದ್ಧಿಸುತ್ತದೆ. ನಾಡಿನ ಅಂಶವನ್ನು ತಿಂದು ಬದುಕುವ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂತತಿಯು ಕ್ಷೀಣಿಸುತ್ತದೆ. ಇದರಿಂದ ಕರುಳಿನ ಉರಿಯುತ ಉಂಟಾಗಿ ಕರುಳು ತೂತು ಬೀಳುತ್ತದೆ. ಹೀಗೆ ಕರುಳು ತೂತು ಬೀಳುವ ಸಂಘಟನೆಯಿಂದ ಮನುಷ್ಯನಿಗೆ ಥೈರಾಯಿಡ್ ರೋಗಗಳು, ಮಧುಮೇಹ, ಮಲ್ಟಿಪಲ್ ಸ್ಕ್ಲೇರೋಸಿಸ್, ಹೀಗೆ ನೂರಾರು ಬಗೆಯ ರೋಗಗಳು ಬರುತ್ತವೆ.
ಅಂತಹ ನೂರಾರು ಬಗೆಯ ರೋಗಗಳೊಟನೆ ಬರುವ ಒಂದು ಉಚಿತ ಕೊಡುಗೆ ಅಧಿಕ ರಕ್ತದ ಒತ್ತಡ. ಅಂದರೆ ಒಂದು ಕೊಂಡರೆ ಮತ್ತೊಂದು ಫ್ರೀ ಅನ್ನುತ್ತಾರಲ್ಲ ಹಾಗೆ.
ಇಂತಹ ಮಾತುಗಳನ್ನೆಲ್ಲ ಯಾರು ಇಷ್ಟಪಡುವುದಿಲ್ಲ. ಕುಡಿಯುವುದರಿಂದ ಲಿವರ್ ಹಾಳಾಗುತ್ತದೆ ಎಂಬ ಸತ್ಯ ಸಂಗತಿಯನ್ನು ಕುಡುಕರೆದರು ಮಾತನಾಡಿದರೆ ನಮ್ಮ ಜನಪ್ರಿಯತೆ ಹಾಳಾಗುತ್ತದೆ. ಹಾಗೆಯೇ ಅಧಿಕ ತಿನ್ನು ಬಾಕತನದಿಂದ ರಕ್ತದ ಅಧಿಕ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ ಎನ್ನುವುದು ಸಹ ಯಾರಿಗೂ ಪಥ್ಯವಾಗುವುದಿಲ್ಲ.
ಸಮುದಾಯಗಳನ್ನು ಮೆಚ್ಚಿಸುವುದಕ್ಕಾಗಿ ಸುಳ್ಳು ಹೇಳುವುದಿಲ್ಲ.

