Home ರಾಜಕೀಯ ಕಲಾವಿದರು ಜಾಗೃತರಾಗಬೇಕು, ಪ್ರಶಸ್ತಿ ಲೂಟಿಕೋರರ ಬಂಡವಾಳ ಬಯಲು ಮಾಡಬೇಕು

ಕಲಾವಿದರು ಜಾಗೃತರಾಗಬೇಕು, ಪ್ರಶಸ್ತಿ ಲೂಟಿಕೋರರ ಬಂಡವಾಳ ಬಯಲು ಮಾಡಬೇಕು

by Laxmikanth Nayak
1 comment

ಕಲೆ ಎನ್ನುವುದು ಹೃದಯದಿಂದ ಹುಟ್ಟುತ್ತದೆ, ಕಲೆ ಕರಗತ ಮಾಡಿಕೊಳ್ಳಲು ಬಹಳ ಶ್ರದ್ಧೆ ಭಕ್ತಿಯಿಂದ ತನ್ನನ್ನು ತಾನು ಕಲೆಗೆ ಅರ್ಪಿಸಿಕೊಂಡಾಗ ಕಲೆ ಎನ್ನುವುದು ಒಲಿಯುತ್ತದೆ, ಈ ನಮ್ಮ ನಾಡಿನಲ್ಲಿ ವಿವಿಧ ಪ್ರಕಾರದ ಕಲೆಗಳು ಇವೆ, ಇವತ್ತು ನಾವು ಕಾಣುವ ನೋಡುವ ಐತಿಹಾಸಿಕ ಸ್ಮಾರಕಗಳು, ಶಿಲಾ ಶಾಸನಗಳು, ಕುರುಹುಗಳು, ರಾಜ್ಯ ಮಹಾರಾಜರ ಚರಿತ್ರೆ ಇತಿಹಾಸದ ಗತ ವೈಭವ ನಮ್ಮ ಮುಂದೆ ಇರಲು ಕಲಾವಿದರ ಕೊಡುಗೆ ಕಾರಣ, ಕಲಾವಿದ ಅಳಿದರು ಆತನ ಕಲೆ ಉಳಿಯುತ್ತದೆ ಎನ್ನುವುದಕ್ಕೆ ಇವೆ ಪ್ರತ್ಯಕ್ಷ ಸಾಕ್ಷಿಗಳು,

ಆದರೆ ಇಂದಿನ ನವ ಯುಗದಲ್ಲಿ, ನಿಜವಾದ ಪ್ರತಿಭಾವಂತ, ದಶಕಗಳಿಂದ ಕಲೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡವರು ಎಷ್ಟೋ ಕಲಾವಿದರು ಅಕಾಡೆಮಿಗಳಲ್ಲಿ ಸಧ್ಯಸರಾಗುತ್ತಿಲ್ಲ, ಅಧ್ಯಕ್ಷರಾಗುತ್ತಿಲ್ಲ, ಹಾಗೂ ಅಕಾಡೆಮಿಗಳ ಪ್ರಶಸ್ತಿಗಳು ಮರಿಜಿಕೆಯಾಗಿವೆ,ಹಾಗೂ ಶಿಭಿರಗಳಿಂದಲೂ ವಂಚಿತರಾಗಿದ್ದಾರೆ, ಕಾರಣ ಹಲವಾರು,

ಈಗಿನ ಅಕಾಡೆಮಿಗಳು ರಾಜಕಾರಣಿಗಳ ಬೆಂಬಲಿಗರ ಅಕಾಡೆಮಿಗಳಾಗಿ, ಲಾಭಿಯಿಂದ ಸಧ್ಯಸರು ಅಧ್ಯಕ್ಷರು ಆಗುತ್ತಾರೆ, ಪ್ರಶಸ್ತಿಗಳು ಪಡೆಯಲು ಲಾಭಿ ಹಾಗೂ ಹಣದಿಂದ ಪಡೆಯಬೇಕು ಎಂದು ನಾಡಿನ ಕಲಾವಿದರಿಗೆ ತಿಳಿದ ವಿಷಯ, ಇದಕ್ಕೆ ಕಾರಣ ನಾವು ಕಲಾವಿದರೆ, ಇದು ಬದಲಾಗಬೇಕು ಎಂದರೆ ಅದಕ್ಕೂ ನಾವೇ ಕಾರಣವಾಗಬೇಕು,

ಅದಕ್ಕಾಗಿ ನಾವೇನು ಮಾಡಬೇಕು, ಈ ಅಕಾಡೆಮಿಗಳಿಗೆ ಪಾರದರ್ಶಕವಾಗಿ ಸಧ್ಯಸರನ್ನು ಕಲಾವಿದರ ಮತದಾನದಿಂದ ಆಯ್ಕೆ ಮಾಡಿ ಕಳುಹಿಸುವಂತೆ ನಾವು ಸರ್ಕಾರಕ್ಕೆ ಆಗ್ರಹಿಸಬೇಕು, ನಮ್ಮಗೆ ಕಲಾವಿದರ ಅಕಾಡೆಮಿಗಳನ್ನು ಕಲಾವಿದರಿಗಾಗಿ ಸ್ಥಾಪನೆ ಮಾಡಿ, ನಮ್ಮಗೆ ರಾಜಕಾರಣಿಗಳು ಬೆಂಬಲಿಗರ ಅಕಾಡೆಮಿಗಳು ರಾಜಕಾರಣಿಗಳ ಬೆಂಬಲಿಗರಿಗೆ ಇರಲಿ,

banner

ಪಾರದರ್ಶಕವಾಗಿ ಅಕಾಡೆಮಿಗಳಲ್ಲಿ ಪ್ರತಿಭಾವಂತ ಕಲಾವಿದರು ಆಯ್ಕೆ ಆದರೆ ಆಗ ಆ ಕಲಾವಿದರು ನಿಜವಾದ ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡುತ್ತಾರೆ, ಏಕೆಂದರೆ ದಶಕಗಳಿಂದ ಕಲಾವೃತಿಯಲ್ಲಿ ತೊಡಗಿರುವ ಎಷ್ಟೂ ಕಲಾವಿದರು ಅಕಾಡೆಮಿಯ ಸಧ್ಯಸರು ಆಗಬೇಕು ಅಧ್ಯಕ್ಷರು ಆಗಬೇಕು ಎನ್ನುವ ಮಹಾದಾಶಯ ಹೊಂದಿರುತ್ತಾರೆ, ಆದರೆ ಅವರು ಕಲೆಯಲ್ಲಿ ಶ್ರಿಮಂತರಾಗಿರುತ್ತಾರೆ, ಹಣದಲ್ಲಿ ಲಾಭಿಯಲ್ಲಿ ಇರಲ್ಲ, ಇದೆ ಕಾರಣವು ಪ್ರಶಸ್ತಿಗಳು ಸಹ ಲಭಿಸುತ್ತಿರಲ್ಲ,

ಇದಕ್ಕಾಗಿ ಎಲ್ಲಾ ಪ್ರಕಾರದ ಕಲಾವಿದರು ಸರ್ಕಾರಕ್ಕೆ ನಮ್ಮ ಧ್ವನಿ ಮುಟ್ಟಿಸಬೇಕು ಏನಂತ ನಮ್ಮಗೆ ರಾಜಕಾರಣಿಗಳು ಬೆಂಬಲಿಗರ ಅಕಾಡೆಮಿಗಳು ಬೇಕಾಗಿಲ್ಲ, ನಮ್ಮಗೆ ಕಲಾವಿದರ ಅಕಾಡೆಮಿಗಳು ಬೇಕು,

(ಲಲಿತಕಲಾ, ಶಿಲ್ಪಕಲಾ, ಜಾನಪದ, ಸಂಗೀತ-ನೃತ್ಯ, ನಾಟಕ, ಇತ್ಯಾದಿ)

ಕಲಾವಿದರು ಜಾಗೃತರಾಗಿ
ಧನ್ಯವಾದಗಳು

ಕಲಾವಿದ -ಅಯ್ಯನಗೌಡ ಮಾಲಿಪಾಟೀಲ, ರಾಯಚೂರು
9449764694

You may also like

1 comment

234win November 13, 2025 - 2:09 pm

Smart bankroll management is key, especially with diverse options! Seeing platforms like 234Win prioritize quick PHP transactions via GCash & PayMaya is a huge plus. Check out 234win download apk for seamless gaming – fast registration is appealing!

Reply

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ