ವಿಶಾಖಪಟ್ಟಣದಲ್ಲಿ ಸಿಐಐ ಪಾಲುದಾರಿಕೆ ಶೃಂಗಸಭೆ ಆರಂಭ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮುಖ್ಯ ಅತಿಥಿ
ನವದೆಹಲಿ, ನವೆಂಬರ್ 13:ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ 30ನೇ ಪಾಲುದಾರಿಕೆ ಶೃಂಗಸಭೆ 2025 ನವೆಂಬರ್ 14 ಮತ್ತು 15 ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಈ ಎರಡು ದಿನಗಳ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಉಪರಾಷ್ಟ್ರಪತಿ ಕಚೇರಿಯ ಪ್ರಕಟಣೆಯ ಪ್ರಕಾರ, ಈ ಶೃಂಗಸಭೆಯನ್ನು ಸಿಐಐ ಸಂಸ್ಥೆಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಹಾಗೂ ಆಂಧ್ರಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಆಯೋಜಿಸಿದೆ.
“ತಂತ್ರಜ್ಞಾನ, ವಿಶ್ವಾಸ ಮತ್ತು ವ್ಯಾಪಾರ, ಹೊಸ ಭೌಗೋಳಿಕ-ಆರ್ಥಿಕ ಕ್ರಮವನ್ನು ನ್ಯಾವಿಗೇಟ್ ಮಾಡುವುದು” ಎಂಬ ಧ್ಯೇಯದೊಂದಿಗೆ ಶೃಂಗಸಭೆಯು ನಡೆಯಲಿದೆ. ಈ ಸಮಾವೇಶದಲ್ಲಿ ಜಾಗತಿಕ ಪಾಲುದಾರರು, ಚಿಂತಕರು, ನೀತಿ ನಿರೂಪಕರು ಮತ್ತು ಉದ್ಯಮದ ಮುಖಂಡರು ಭಾಗವಹಿಸಲಿದ್ದಾರೆ.
ಶೃಂಗಸಭೆಯಲ್ಲಿ ಒಟ್ಟು 45 ಅಧಿವೇಶನಗಳನ್ನು ಆಯೋಜಿಸಲಾಗಿದೆ. ಇದರಲ್ಲಿ 72 ಅಂತರರಾಷ್ಟ್ರೀಯ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. ಸುಮಾರು 45 ದೇಶಗಳಿಂದ 300 ವಿದೇಶಿ ಪ್ರತಿನಿಧಿಗಳು ಸೇರಿದಂತೆ ಒಟ್ಟು 2,500 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

