ಬಾಬುರಾವ್ ಚಿಂಚನಸೂರ ಅವರಿಗೆ ಶಾಸಕ ಶರಣಗೌಡ ಕಂದಕೂರ ಅಗೌರವ
ಸೈದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ಸೆಪ್ಟೆಂಬರ್ 15 ರಂದು ಗುರುಮಠಕಲ್ ಪಟ್ಟಣದಲ್ಲಿ ಪ್ರತಿಭಟನೆ
ಬಾಬುರಾವ್ ಚಿಂಚನಸೂರು ಅವರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಏಕವಚನದಲ್ಲಿ ನಿಂದಿಸಿದ ಅವರ ನಡೆಯನ್ನು ಖಂಡಿಸಿ ಸೆಪ್ಟೆಂಬರ್ 15 ರಂದು ಸೋಮವಾರ ಗುರುಮಠಕಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೈದಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿರಂಜನರೆಡ್ಡಿ ಶೆಟ್ಟಿಹಳ್ಳಿ ಅವರು ತಿಳಿಸಿದರು.
ಈ ಕುರಿತು ಸೈದಾಪೂರ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಇತ್ತಿಚಿಗೆ ಗುರುಮಠಕಲ್ ಪಟ್ಟಣದಲ್ಲಿ ಜರುಗಿದ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಸಪ್ತ ಖಾತೆಗಳ ಮಾಜಿ ಸಚಿವ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧಕ್ಷರಾದ ಶ್ರೀ ಬಾಬುರಾವ ಚಿಂಚನಸೂರು ರವರು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಹಿನ್ನಲೆಯಲ್ಲಿ ಶಿಷ್ಟಚಾರದಂತೆ ಅವರು ಈ ಸಮಾರಂಭಕ್ಕೆ ಆಗಮಿಸಿದ್ದಾರೆ.
ವೇಳೆ ಬಾಬುರಾವ್ ಚಿಂಚನಸೂರು ಅವರು ಬರುವ ಮುಂಚೆಯೇ ಶಾಸಕ ಶರಣಗೌಡ ಕಂದಕೂರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಮತ್ತು ಅವರನ್ನು ಏಕ ವಚನದಲ್ಲಿಯೇ ನಿಂದಿಸಿ ಅವಮಾನಿಸಿದ್ದಾರೆ.
ಬಾಬುರಾವ್ ಚಿಂಚನಸೂರ ಅವರು ವೇದಿಕೆಯಲ್ಲಿ ಭಾಷಣ ಮಾಡುವಾಗ ಈ ಭಾಗವನ್ನು ಅಭಿವೃದ್ಧಿಪಡಿಸಿದ ಸೋಲಿಲ್ಲದ ಸರದಾರ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ, ಈ ವೇಳೆ ಶಾಸಕರು ತಮ್ಮ ಹಿಂಬಾಲಕರನ್ನು ಕರೆಸಿದ್ದು, ಭಾಷಣ ವೇಳೆ ಘೋಷಣೆ ಕೂಗುತ್ತಾ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ.
ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರು ಪೂರ್ವ ನಿಯೋಜಿತವಾಗಿ ತಮ್ಮ ಹಿಂಬಾಲಕರನ್ನು ಶಾಸಕರು ಕರೆಯಿಸಿ ಹಿರಿಯರಿಗೆ ಅವಮಾನಿಸಿದ್ದಾರೆ.
ಗುರುಮಠಲ್ ಶಾಸಕರ ಈ ನಡೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಾಬುರಾವ್ ಚಿಂಚನಸೂರ ಅವರ ಅಭಿಮಾನಿಗಳು ಸೇರಿ ಸೆಪ್ಟೆಂಬರ್ 15 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಗುರುಮಠಕಲ್ ಪಟ್ಟಣದ ಸಿಹಿನೀರು ಬಾವಿಯಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಸಧ್ಯಸರಾದ ಚಂದ್ರಶೇಖರ ವಾರದ, ಹಿಂದುಳಿದ ವರ್ಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವಪ್ಪ ರಾಚನಹಳ್ಳಿ, ಬನ್ನಪ್ಪ ಹುಲಿಬೆಟ್ಟ, ಸುದರ್ಶನ ಪಾಟೀಲ್ ಜೈಗ್ರಾಮ, ರಮೇಶ್ ಭೀಮನಹಳ್ಳಿ, ಅಲ್ಪಸಂಖ್ಯಾತರ ಘಟಕ ಬ್ಲಾಕ್ ಅಧ್ಯಕ್ಷರು ಮೈಮುದ್ದಿನ್, ಫೇರೋಜ ಕಡೇಚೂರು, ಬಸಲಿಂಗಪ್ಪ ನೀಲಹಳ್ಳಿ , ಸುರೇಶ್ ನೀಲಹಳ್ಳಿ, ವಿಜಯ ಬೆಳಗುಂದಿ, ಮಂಜುನಾಥ, ಶರಣು ಕಲಾಲ್, ವೆಂಕಟೇಶ್ ನಾಯಕ, ಸಿದ್ದು ನಾಯಕ, ಪುಂಡಲಿಕ ಇನ್ನಿತರರು ಇದ್ದರು

