ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ಘಟಕದ ತ್ರೈಮಾಸಿಕ ಸಭೆ ಯಶಸ್ವಿಯಾಗಿ ನೆರವೇರಿತು
ಸುರಪುರ: ಇಂದು ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ – ಸುರಪುರ ತಾಲೂಕು ಘಟಕದ ವತಿಯಿಂದ ತ್ರೈಮಾಸಿಕ ಸಭೆ ಯಶಸ್ವಿಯಾಗಿ ಆಯೋಜಿಸಲಾಯಿತು.
ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ಅವರು,
“ಸಂಘಟನೆಯ ನೀತಿ–ಸಿದ್ದಾಂತಗಳಿಗೆ ಬದ್ಧರಾಗಿ ಸಂಘಟನೆಯ ಒಗ್ಗಟ್ಟಿಗೆ ಪ್ರತಿಯೊಬ್ಬ ಸದಸ್ಯರೂ ಶ್ರಮಿಸಬೇಕು. ಕನ್ನಡ ತಾಯಿ ಭುವನೇಶ್ವರಿಯ ಸೇವೆಯಲ್ಲಿ ತಲ್ಲೀನರಾಗುವ ಮೂಲಕ ಸಂಘಟನೆಯನ್ನು ಬಲಪಡಿಸೋಣ,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಆಟೋ ಚಾಲಕರ ಘಟಕದ ಅಧ್ಯಕ್ಷರಾಗಿ ಹನುಮಂತ ಶುಕ್ಲಾ (ಸತ್ಯಂಪೇಟೆ) ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಂದಿನ ನವೆಂಬರ್ ೧ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.
ರಾಜ್ಯಾಧ್ಯಕ್ಷರಾದ ಶ್ರೀಯುತ ಕೆ.ಸಿ. ರಾಜಪ್ಪ (ಟೈಗರ್) ಅಣ್ಣನವರ ಬಿಡುವಿನ ದಿನಾಂಕವನ್ನು ಪಡೆದು ನಂತರ ವಿಶೇಷ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು.
ಅಲ್ಲದೆ ನವೆಂಬರ್ ೧ರಂದು ಕನ್ನಡ ತಾಯಿ ಭುವನೇಶ್ವರಿಯ ಪೂಜೆಯ ನಂತರ ಕನ್ನಡ ಧ್ವಜಾರೋಹಣ ಮಾಡಿ ರಾಜ್ಯೋತ್ಸವವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕ ಕಾರ್ಯಾಧ್ಯಕ್ಷ ಶಿವರಾಜ್ ವಗ್ಗರ್,ಕಾರ್ಯದರ್ಶಿ ಕೃಷ್ಣ ಹಾವಿನ ಕುಂಬರಪೇಟೆ,ಸಹ ಖಜಾಂಚಿ ಮುಕ್ತಿಯರ್,ಸಹ ಸಂಚಾಲಕ ರಘು ಗೋಗಿಕರ್, ಅಟೋ ಚಾ ಘ ಹನುಮಂತ ರತ್ತಾಳ , ನಗರ ಘಟಕ ಅಧ್ಯಕ್ಷ ಶಿವುಕುಮಾರ ಗಾಜಲದಿನ್ನಿ,ಹಣಮಂತ ಶುಕ್ಲ,ವೀರೇಶ್ , ಮುರುಳಿ ಅಂಬುರೆ , ಮಂಜು.ಸಿದ್ದು ಮಡಿವಾಳ, ಸಂತೋಷ ಸತ್ಯಂಪೇಟೆ,ಆಂಜನೇಯ, ಮಾಳಪ್ಪ ರಜದ್ , ಯುವ ಘಟಕ ಅಧ್ಯಕ್ಷ ರವಿ ನಾಯಕ, ಕಾರ್ಮಿಕ ಘಟಕ ಅಧ್ಯಕ್ಷ ರಮೇಶ ಓಕಳಿ , ರೈತ ಘಟಕ ಅಧ್ಯಕ್ಷ ಧನರಾಜ ರಾಥೋಡ್, ಅಯ್ಯಪ್ಪ, ಮಲ್ಲಪ್ಪ, ಗುರುಪಾದ, ಮಲ್ಲಪ್ಪ ಟರ್ಕಿ, ಗೋಣೆಪ್ಪ ನಂಬಾ, ಹುಸೇನ್, ಗೋಪಾಲ್, ಹಣಮಂತ, ಕಿಟ್ಟಪ್ಪ, ನಾಗು ಕರೆಗಾರ,ಗೋಣೆಪ್ಪ, ದೀವಳಗುಡ್ಡ ವಾರ್ಡಿನ ಅಧ್ಯಕ್ಷರು ಶ್ರೀ ಶೈಲ ಕುರೆರ್, ರವಿ ಟರ್ಕೆರ್,ರಂಗಪ್ಪ ವೆಂಕಟಾಪುರ್ ಗೂಡ್ಸ್ ಚಾ ಘ ಅಧ್ಯಕ್ಷ, ಡಿಆರ್ ಬಸವರಾಜ,ಕಾಂತಪ್ಪ ನಾಗರಾಳ,ಖಾನ್ ಶಿಮೊದಲ,ವಿಶ್ವ ಟರ್ಕೆರ್ ದೀವಳಗುಡ್ಡ,, ನಾಗು ನಂಬಾ , ನಾಗು ಬಂಗಾರಿ,ಮೌನೇಶ್, ಮಹಾಂತೇಶ, ಗೌಸ್, ಚನ್ನಪ್ಪ, ನಿಂಗಪ್ಪ ಇನ್ನು ಅನೇಕ ನಮ್ಮ ಸಂಘಟನಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು


1 comment
Live dealer games really feel like being at a casino, don’t they? It’s amazing how platforms like bigbunny download blend tradition with tech – a truly cultural experience! The registration process sounds uniquely thoughtful too. ✨