ಗೋಗಿಪೇಠ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಸಾರ್ವಜನಿಕರು
ಜನ ಆಕ್ರೋಶ ಸುದ್ದಿಜಾಲ
ಶಹಪುರ ತಾಲೂಕಿನ ಗೋಗಿಪೇಠ ಗ್ರಾಮದಲ್ಲಿ ಸಾರ್ವಜಕರು, ವಿದ್ಯಾರ್ಥಿಗಳು, ಮಕ್ಕಳು ಓಡಾಡಲು ಭಯ ಪಡುವಂತಾಗಿದೆ. ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳಿಯರು ಅನೇಕ ಬಾರಿ ಮೌಖಿಕವಾಗಿ ಗ್ರಾಮ ಪಂಚಾಯಿತಿಗೆ ತಿಳಿಸಿದರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಪತ್ರಿಕೆ ಹೇಳಿಕೆ ಮೂಲಕ ಆರೋಪ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಗ್ರಾಮದ ಮುಖ್ಯರಸ್ತೆ, ಬಸ ನಿಲ್ದಾಣ,ನೇಕಾರ ಕಾಲನಿ, ಬನಶಂಕರಿ ರಸ್ತೆ,ಬಸವೇಶ್ವರ ನಗರ,
ಯಾದವ ನಗರ, ರಾಮನದೊಡ್ಡಿ, ಸಗರ ಕಾಲೊನಿ, ಟಿಪ್ಪು ಸುಲ್ತಾನ ನಗರ,ಗ್ರಾಮದ ಅಗಸಿ,ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರ ಸೇರಿ ವಿವಿಧ ಸ್ಥಳಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಎಲ್ಲೆಂದರಲ್ಲಿ ಓಡಾಡುತ್ತಿವೆ ಮತ್ತು ರಸ್ತೆಯಲ್ಲಿ ನಡೆದು ಹೋಗುವ ಸಾರ್ವಜನಿಕರು, ಮಕ್ಕಳ ಮೇಲೂ ಎರಗುತ್ತಿವೆ. ಅಲ್ಲದೆ, ರಸ್ತೆಯಲ್ಲಿ ಬೈಕಿಗೆ ಅಡ್ಡ ಬರುತ್ತಿರುವುದರಿಂದ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ.
ಗ್ರಾಮ ಪಂಚಾಯಿತಿಯವರು ಇದರ ಕಡೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ ಕೂಡಲೇ ಗ್ರಾ,ಪಂ,ನವರು ನಾಯಿಗಳನ್ನು ಹಿಡಿದು ದೂರ ಪ್ರದೇಶದಲ್ಲಿ ಬಿಟ್ಟು ಬರಬೇಕು ಎಂದು ಗ್ರಾಮದ ನಾಗರಿಕರು ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದಿನ ಯಾವುದಾದರೂ ಅನಾಹುತ ಆಗದ ರೀತಿಯಲ್ಲಿ ಕೂಡಲೇ ಬೀದಿನಾಯಿಗಳನ್ನು ಹಿಡಿದು ಬೇರೆ ದೂರದ ಪ್ರದೇಶಕ್ಕೆ ಬಿಟ್ಟು ಬರಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

