ಕಲ್ಯಾಣ ಪರ್ವ ಉತ್ಸವ, ಕಾರ್ಯಾಲಯ ಉದ್ಘಾಟನೆ
ವರದಿ – ಸಂಗಮೇಶ ಎನ್ ಜವಾದಿ
ಬೀದರ: ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು, ಮಾತಾಜಿ ರವರ ನಿಸ್ವಾರ್ಥ ಸೇವೆಯ ಕಾರಣದಿಂದ ಬಸವ ತತ್ವ ನಾಡಿನ ಉದ್ದಕ್ಕೂ ಪಸರಿಸಲು ಸಾಧ್ಯವಾಯಿತು ಎಂದು ಬಸವ ಸೇವಾ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಗಂಗಾಂಬಿಕ ಪಾಟೀಲ ನುಡಿದರು.
ನಗರದ ಶಿವಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಕಲ್ಯಾಣ ಪರ್ವ ಉತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಸವಕಲ್ಯಾಣದಲ್ಲಿ 108 ಅಡಿ ಬಸವಣ್ಣನವರ ಮೂರ್ತಿ ಸರ್ವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಇದಕ್ಕೆ ಅನೇಕ ಸಂಕಟಗಳು ಬಂದರೂ, ಅವುಗಳನ್ನು ನಿವಾಸಿ, ಇವತ್ತು ಅಂತರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಮಾಡಿದ ಕೀರ್ತ ಮಾತಾಜಿ ಅವರಿಗೆ ಸಲ್ಲುತ್ತದೆ ಎಂದರು.
ಬರುವ ಅಕ್ಟೋಬರ್ ತಿಂಗಳ 10,11,12 ರಂದು ನಡೆಯುವ ಕಲ್ಯಾಣ ಪರ್ವಕ್ಕೆ ಸರ್ವರೂ ಆಗಮಿಸಿ, ಉತ್ಸವ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ ಈ ವರ್ಷ ಉತ್ಸವವೂ ಅತ್ಯಂತ ಅರ್ಥಪೂರ್ಣವಾಗಿ ಆಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಕಂಟೆಪ್ಪಾ ಗಂದಿಗುಡಿ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ ಉತ್ಸವ ಕುರಿತು ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ ಬಸವ ಧರ್ಮ ಪೀಠದ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಲಿಂಗಾನಂದ ಅಪ್ಪಾಜಿ, ಮಾತಾಜಿ ರವರು ಹಾಕಿ ಕೊಟ್ಟ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತಿದ್ದೇವೆ.
ಕಲ್ಯಾಣ ಪರ್ವ ಉತ್ಸವವು ಸರ್ವ ರೀತಿಯಲ್ಲೂ ಯಶಸ್ವಿಯಾಗಬೇಕು. ದೇಶದ ತುಂಬೆಲ್ಲ ಬಸವ ತತ್ವ ಬೆಳಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಾವಣ್ಯ ಮಾತಾಜಿ ,
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ
ಸೋಮಶೇಖರ್ ಪಾಟೀಲ ಗಾದಗಿ ಪ್ರಮುಖರಾದ ಕುಶಾಲರಾವ ಪಾಟೀಲ ಖಾಜಾಪೂರ್,
ಸಿದ್ದಯ್ಯಾ ಕವಡಿಮಠ, ರವಿ ಪಾಪಡೆ, ಸಿದ್ದು ಶೆಟ್ಟಗಾರ್, ಶಾಂತಾದೇವಿ ಬಿರಾದಾರ್,ಯೊಗೇಶ ಶ್ರೀಗೆರೆ, ಶ್ರೀಕಾಂತ ಭೋರಾಳೆ,ನಾಗಯ್ಯ ಸ್ವಾಮಿ ಮುಧೊಳ,ಸಂಗಮೇಶ ಎನ್ ಜವಾದಿ, ರಾಜಶೇಖರ ದೇವಣಿ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜೇಂದ್ರ ಜೊನ್ನೆಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸುರೇಶಕುಮಾರ್ ಸ್ವಾಮಿ ನಿರೂಪಿಸಿ, ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ

