Home ಅಂತರಾಷ್ಟ್ರೀಯ ಸುದ್ದಿ ಟಣಕನಕಲ್ಲನಲ್ಲಿ ಎಸ್.ಸಿ.ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ

ಟಣಕನಕಲ್ಲನಲ್ಲಿ ಎಸ್.ಸಿ.ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ

by Laxmikanth Nayak
0 comments

ಕೊಪ್ಪಳ : ಟಣಕನಕಲ್ಲ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘಟನಾ ಕಾರ್ಯಗಳ ಒಕ್ಕೂಟದಿಂದ ಓಜಿನಹಳ್ಳಿ ಗ್ರಾಮ ಪಂಚಾಯತ್ ಆದಯ್ಯ ಸ್ವಾಮಿ ಹಾಗೂ ಅಧ್ಯಕ್ಷ ಹುಚ್ಚಪ್ಪ ಯಮನಪ್ಪ ಭೋವಿ ಅವರಿಗೆ ಮನವಿ ಸಲ್ಲಿಸಲಾಯಿತು.

   ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಕನಕಲ್ಲ ಗ್ರಾಮದ ಎಸ್‌.ಸಿ. ಕಾಲೋನಿಯಲ್ಲಿ ಮಹಿಳೆಯರಿಗೆ ಯಾವುದೇ ಸಾರ್ವಜನಿಕ ಶೌಚಾಲಯ ಇರುವುದಿಲ್ಲ.ಇದರಿಂದ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗಲು ತುಂಬಾ ತೊಂದರೆ ಆಗುತ್ತಿದೆ.ಕೂಡಲೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಕೊಡಬೇಕು.ಅಲ್ಲದೆ ಸಾರ್ವಜನಿಕ ಕುಡಿಯುವ ನೀರಿನ ನಳ ಇರುವುದಿಲ್ಲ. ಕೊಡಲೇ ಅಧಿಕಾರಿಗಳು ಕುಡಿಯುವ ನೀರಿಗಾಗಿ ಸಾರ್ವಜನಿಕ ಸ್ಥಳದಲ್ಲಿ ನಳದ ವ್ಯವಸ್ಥೆಯನ್ನು ಮಾಡಿಕೊಡಬೇಕು.ಅಲ್ಲದೆ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿಯಲ್ಲಿ ಯಾವುದೇ ದಲಿತ ಮಹಿಳೆಯರು ಇರುವುದಿಲ್ಲ. ಕೂಡಲೇ ಅಡಿಗೆ ಮಾಡುವ ಸಿಬ್ಬಂದಿಯಲ್ಲಿ ದಲಿತ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕ ಸಮಾನತೆ ಸಾಧಿಸಬೇಕು.ಮುಂತಾದ ನಮ್ಮ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘಟನಾ ಕಾರ್ಯಗಳ ಒಕ್ಕೂಟದ ತಾಲೂಕಾ ಸಂಯೋಜಕ ಸುಂಕಪ್ಪ ಮೀಸಿ. ಟಣಕನಕಲ್ಲ ಗ್ರಾಮಸ್ಥರಾದ ಯಮನೂರಪ್ಪ ಕುಂಜಾಲಿ.ಮಾರುತಿ ಕುಂಜಾಲಿ.ಹನುಮವ್ವ ಕುಂಜಾಲಿ.ಯಮನವ್ವ ಕುಂಜಾಲಿ.ಹನುಮಪ್ಪ ಕುಂಜಾಲಿ.ಪರಶುರಾಮ್ ಕುಂಜಾಲಿ.ದುರಗವ್ವ ಕುಂಜಾಲಿ.ಈರವ್ವ ಕುಂಜಾಲಿ.ಸುರೇಶ ಕುಂಜಾಲಿ.ಗಾಳೆವ್ವ ಕುಂಜಾಲಿ ಮುಂತಾದವರು ಮನವಿ ಸಲ್ಲಿಸುವಾಗ ಉಪಸ್ಥರಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ