2
ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೫ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಕೊಪ್ಪಳದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಲೇಖಕಿಯರಿಗೆ ಮೀಸಲಾಗಿರುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಸಭೆಯ ಚರ್ಚೆಯಲ್ಲಿ ದತ್ತಿ ಪ್ರಶಸ್ತಿ ಪ್ರದಾನ ದಿ.ಲಕ್ಷ್ಮಮ್ಮ ಗಂ. ದೊಡ್ಡ ಪಂಪಣ್ಣ ಗೋನಾಳ ಇವರ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಗೆ ೨೦೨೧ _ನಾರೀ ಪದ್ಯ ಸಾವಿತ್ರಿ ಮುಜಮದಾರ್.
೨೦೨೨_ಯಾವುದೇ ಕೃತಿಗಳು ಬಂದಿಲ್ಲ,೨೦೨೩ಗದ್ದಲ್ದೊಳಗ ಯಾಕ ನಿಂತಿ ಅರುಣಾ ನರೇಂದ್ರ,೨೦೨೪ವಚನ ಹೊಳಹು ರುದ್ರಮ್ಮ ಹಾಸಿನಾಳ ಇವರನ್ನು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ನಮ್ಮ ಸಂಘದ ಸರ್ವಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಲು
ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಹಕಾರ ಸಂಘ ನಿ.ಕೊಪ್ಪಳದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಪ್ರಕಟಣೆ ಮೂಲಕ ಕೋರಿದ್ದಾರೆ.
