Home ರಾಜಕೀಯ ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧರಾಗಿ: ಹುಣಸಗಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧರಾಗಿ: ಹುಣಸಗಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

by Laxmikanth Nayak
0 comments

ಸ್ಪರ್ಧಾತ್ಮಕ ಯುಗಕ್ಕೆ ಸಿದ್ಧರಾಗಿ: ಹುಣಸಗಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ

​ಹುಣಸಗಿ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ. ಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭವನ್ನು ಸಹ ಅದ್ದೂರಿಯಾಗಿ ನೆರವೇರಿಸಲಾಯಿತು.

​ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸುರಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ್ ಕುಮಾರ್ ನಾಯಕ್ ಅವರು ಮಾತನಾಡಿ, “ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಸಲಹೆ ನೀಡಿದರು.

​ಇನ್ನೋರ್ವ ಅತಿಥಿಗಳಾಗಿದ್ದ ಸುರಪುರ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಮಹದೇವಪ್ಪ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನವು ಅತ್ಯಂತ ಮುಖ್ಯವಾದ ಹೆಜ್ಜೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

banner

​ಮುಖ್ಯ ಅತಿಥಿಗಳಾಗಿ ಸಾಹೇಬಣ್ಣ ಭಜಂತ್ರಿ (ಪ್ರಾಂಶುಪಾಲರು, ಸ. ಪ. ಪೂ. ಕಾಲೇಜು, ಹುಣಸಗಿ), ಗುರಪ್ಪಗೌಡ ಗುರಡ್ಡಿ (ಸಹ ಶಿಕ್ಷಕರು) ಮತ್ತು ಡಾ. ಎಚ್. ಎಮ್. ಪಾಟೀಲ ಅವರು ಸಮಾರಂಭದಲ್ಲಿ ಮಾತನಾಡಿದರು.

​ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರೀತಾ ರೆಡ್ಡಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಶಶಿಕಲಾ ರಾಠೋಡ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

​ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಗುರಣ್ಣ ರಾರೆಡ್ಡಿ, ವೀರೇಂದ್ರ ಪಾಟೀಲ, ಡಾ. ಸಂತೋಷ್ ರಾಠೋಡ, ಡಾ. ಅಶೋಕ ಕುಲಕರ್ಣಿ, ಡಾ. ಭೀಮಣ್ಣ, ಡಾ. ಹಯ್ಯಳಪ್ಪ, ಡಾ. ಮೌನೇಶ, ಶ್ರೀಮತಿ ಶಶಿಕಲಾ, ಶ್ರೀಮತಿ ಬಸಮ್ಮ, ನಾಗರಾಜ, ಬಸಪ್ಪ, ಮೋಹನ್ ಕುಮಾರ, ಬಸವರಾಜ, ಮೌನೇಶ್ ಸೇರಿದಂತೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

​ಅಂತಿಮ ವರ್ಷದ ವಿದ್ಯಾರ್ಥಿನಿ ಮಲ್ಲಮ್ಮ ಸ್ವಾಗತ ಕೋರಿದರು. ವಿದ್ಯಾರ್ಥಿಗಳಾದ ತ್ರಿವೇಣಿ ರಾಠೋಡ ಮತ್ತು ಸಂಗೀತ ಹಿರೇಮಠ್ ನಿರೂಪಣೆ ನಡೆಸಿಕೊಟ್ಟರು. ಭಾಗ್ಯ ಮತ್ತು ಶ್ರುತಿ ಬಹುಮಾನ ವಿತರಣೆ ಮಾಡಿದರೆ, ಐಶ್ವರ್ಯ ಅರಿಕೆರ್ ಮತ್ತು ಐಶ್ವರ್ಯ ಹುಣಸಗಿ ವಂದನಾರ್ಪಣೆಯನ್ನು ನೆರವೇರಿಸಿದರು.

ವರದಿ: ಡಾ. ಎಚ್. ಎಂ. ಪಾಟೀಲ್ ನಾಗರಾಳ

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ