ಕೊಪ್ಪಳ : ಬಿಷಪ್‌ಗಳ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೊಸ ಜಿಲ್ಲಾ ಬಿಷಪ್‌ಗಳನ್ನು ಹಾಗೂ ಆಯ್ದ ತಾಲೂಕುಗಳಿಗೆ ಸಹಾಯಕ ಬಿಷಪ್‌ಗಳನ್ನು ನೇಮಿಸಿರುವುದನ್ನು ಹರ್ಷದಿಂದ ಪ್ರಕಟಿಸುತ್ತದೆ.
ಹೊಸದಾಗಿ ನೇಮಕಗೊಂಡ ಬಿಷಪ್‌ಗಳ ಪವಿತ್ರ ದೀಕ್ಷೆ ಮತ್ತು ಸನ್ಮಾನ ಕಾರ್ಯಕ್ರಮವು ಬೆಂಗಳೂರಿನಲ್ಲಿ ಹಡ್ಸನ್ ಸ್ಮಾರಕ ಸಮುದಾಯ ಭವನದಲ್ಲಿ ಮೆಟ್ರೊಪಾಲಿಟನ್ ಆರ್ಚ್ ಬಿಷಪ್ ರೆ। ಡಾ॥ ಅಮೋಸ್ ಸಿಂಗ್ ಅವರ ಪ್ರಧಾನ ಸೇವಾಕಾರ್ಯದಲ್ಲಿ ಭವ್ಯವಾಗಿ ನೆರವೇರಿಸಲಾಯಿತು.ದೀಕ್ಷಾ ಕಾರ್ಯಕ್ರಮದ ನಿರೂಪಣೆಯನ್ನು ಕ್ಯಾಮ್‌ಸ್ ಕ್ರುಸೇಡ್ ಮೈಸೂರು ನಿರ್ದೇಶಕರಾದ ಸಹೊ॥ ಸ್ಯಾಮ್ ವರ್ಗೀಸ್ ನಿರ್ವಹಿಸಿದ್ದರು,ಟೆಬರ್ನಾಕಳ್ ಚರ್ಚು ರೆ| ಸಾಮುವೆಲ್ ವರ್ಗೀಸ್,ಅಸೆಂಬ್ಲಿಸ್ ಆಫ್ ಗಾಡ್ ರೆ! ಜಾರ್ಜ್ ಕುಟ್ಟಿ ದೀಕ್ಷಾ ಕಾರ್ಯಕ್ರಮದಲ್ಲಿ ಸಹಾಯಕ ಸೇವೆಯನ್ನು ನೆರವೇರಿಸಿದರು, ಈ ದಿನ ಪಂಜಾಬ್, ಒರಿಸ್ಸಾ, ಕರ್ನಾಟಕ ಹಾಗೂ ತಮೀಳುನಾಡು ಆರ್ಚ್ ಬಿಷಪ್ಸಗಳನ್ನು ನೇಮಿಸಲಾಯಿತು.
ದೀಕ್ಷೆಯ ನಂತರ, ಕರ್ನಾಟಕದ ಆರ್ಚ್ ಬಿಷಪ್ ರೆ|| ಡಾ|| ವಿನೋದ್ ಎಂ. ಚಾಕೋ ಅವರ ಅಧ್ಯಕ್ಷತೆಯಲ್ಲಿ ಪವಿತ್ರ ಸಿನಡ್ ಸಭೆ ನಡೆಯಿತು. ಈ ಸಭೆಯಲ್ಲಿ ಮಹಾಸಭೆಯ ಪ್ರಮುಖ ನಿರ್ಣಯಗಳನ್ನು ಪ್ರಾರ್ಥನೆಯ ಮನೋಭಾವದಲ್ಲಿ ಚರ್ಚಿಸಿ ಏಕಮತದಿಂದ ಅಂಗೀಕರಿಸಲಾಯಿತು.
ಈ ಐತಿಹಾಸಿಕ ಸಂದರ್ಭವು ಕರ್ನಾಟಕದಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭೆಯ ಧೈಯ ಮತ್ತು ಆಧ್ಯಾತ್ಮಿಕ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಕಾರಣವಾಗಿದೆ.
ತದನಂತರ ನಡೆದ ಪತ್ರಿಕಾ ಗೊಷ್ಠಿಯಲ್ಲಿ ಮೈಸೂರು ಜಿಲ್ಲಾ ಬಿಷಪ್ ಆಗಿ ಆಯ್ಕೆಯಾಗಿರುವ ರೆ। ಸುನಿಲ್ ವಿ ಜೇಕಬ್ ರವರು ಮತ್ತು ಆರ್ಚ್ ಬಿಷಪ್ ರೆವ್. ವಿನೋದ್ ಚಾಕೋ, ಮಾತಾನಾಡಿ ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾ ( ಎಲ್ಲಾ ಪ್ರೊಟೆಸ್ಟಂಟ್ ಚರ್ಚುಗಳ ಡಯಾಸಿಸ್) ಡಿಎಪಿಸಿ ಎಲ್ಲಾ ಪ್ರೊಟೆಸ್ಟೆಂಟ್ ಸಭೆಗಳ ಪರವಾಗಿ ಧ್ವನಿ ಎತ್ತುವ ಭರವಸೆಯನ್ನು ನೀಡಿದರು.
ಎಲ್ಲಾ ಪ್ರೊಟೆಸ್ಟಂಟ್ ಚರ್ಚ್‌ಗಳ ಡಯಾಸಿಸ್ (DAPC) ಕೊಪ್ಪಳ ಜಿಲ್ಲಾ ಬಿಷಪ್ ಮತ್ತು ಸಹಾಯಕ ಬಿಷಪ್‌ಗಳ ನೇಮಕಾತಿ.
ಕೊಪ್ಪಳ ಜಿಲ್ಲಾ ಬಿಷಪ್ ಎಸ್ ಕೆ ಜೋಸ್,ಕೊಪ್ಪಳ ತಾಲೂಕಾ ಸಹಾಯಕ ಬಿಷಪ್ ದಾನಿಯಾಲ್, ಕುಷ್ಟಗಿ ತಾಲೂಕಾ ಸಹಾಯಕ ಬಿಷಪ್ ಶರಣಪ್ಪ, ಯಲಬುರ್ಗಾ ತಾಲೂಕಾ ಸಹಾಯಕ ಬಿಷಪ್ ಚಂದ್ರಹಾಸ್, ಕುಕನೂರು ತಾಲೂಕಾ ಸಹಾಯಕ ಬಿಷಪ್ ಚಾರ್ಲ್ಸ್, ಗಂಗಾವತಿ ತಾಲೂಕಾ ಸಹಾಯಕ ಬಿಷಪ್ ಮಾಬುಸಾಬ್, ಕಾರಟಗಿ ತಾಲೂಕಾ ಸಹಾಯಕ ಬಿಷಪ್ ಸತ್ಯನಾರಾಯಣ ಮುಂತಾದವರನ್ನು ನೇಮಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.
ಚರ್ಚ್‌ನ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಪೂರೈಸಲು ಅವರ ಅಧಿಕಾರ ವ್ಯಾಪ್ತಿಗೆ ಬಿಷಪ್‌ನ ಕಚೇರಿಗೆ ಇನ್ನು ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ರೆ|| ಡಾ|| ವಿನೊದ್ ಎಮ್ ಚಾಕೊ ಆರ್ಚಬಿಷಪ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಗೆ ನೇಮಕಗೊಂಡಿರುವ ಪದಾಧಿಕಾರಿಗಳಿಗೆ ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕೌನ್ಸಿಲ್ ಕಾರ್ಯದರ್ಶಿ ಬಿಷಪ್ ಮೋಸಸ್ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

