ಕನ್ನಡ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿ: ವಿಶ್ವನಾಥ ನಾಯಕ
ಯಾದಗಿರಿ: ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆ ಕೇವಲ ಕನ್ನಡ ಪರ ಹೋರಾಟಗಾರರ ಕೆಲಸವಷ್ಟೇ
ಅಲ್ಲ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಹೇಳಿದರು.
ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸಂಘಟನೆಗೆ ನೂತನವಾಗಿ ಸೇರ್ಪಡೆಯಾದವರಿಗೆ ಸ್ವಾಗತ, ಜವಬ್ದಾರಿ ವಹಿಸಿ ನೇಮಕಾತಿ ಆದೇಶಪತ್ರಗಳು ವಿತರಣೆ ಮಾಡಿ ಮಾತನಾಡಿ, ನಾಡು ನುಡಿ ನೆಲ ಜಲ ರಕ್ಷಣೆಗೆ ಹೋರಾಟಮಾಡುವ ಮನೋಭಾವ ಹೊಂದಿರಬೇಕು.
ರೈತರು, ಬಡವರಿಗೆ ಅನ್ಯಾಯವಾದಾಗ ಅವರ ಪರವಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ಇರಬೇಕು, ಜನರಿಗೆ ನ್ಯಾಯ ಕೊಡಿಸಲು ನಿರಂತರ ಹೋರಾಟ ಮಾಡಬೇಕು ಎಂದು ಅವರು ನುಡಿದರು.
ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಂಘಟನೆ ಸೇರಿ ಕೆಲಸ ಮಾಡಬೇಕು, ದುರುದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು ಎಂದ ಅವರು, ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಇವುಗಳ ಪರಿಹಾರಕ್ಕಾಗಿ ಸಂಘಟನೆ ಮಾಡುವುದರ ಜೊತೆಗೆ ಹೋರಾಟ ರೂಪಿಸುವಲ್ಲಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭೀಮಾಶಂಕರ ಪೂಜಾರಿ ಇವರಿಗೆ ಜಿಲ್ಲಾ ಕಾರ್ಯದರ್ಶಿ ಎಂದು ನೇಮಕ ಮಾಡಿ ಆದೇಶಪತ್ರ ನೀಡಲಾಯಿತು. ಇದೇ ವೇಳೆ ಇವರ ಸಂಗಡಿಗರಿಗೆ ಸಂಘಟನೆಯಲ್ಲಿ ಶಾಲು ತೊಡಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ರಾಜಕುಮಾರ ಸಾಹುಕಾರ ಖಾನಾಪೂರ, ಶಿವರಾಜ ಗುತ್ತೇದಾರ, ನಾಗರಾಜ ರಾಮಸಮುದ್ರ,, ರಂಗನಾಥ ನಾಯಕ, ನವಾಜ ಖಾದ್ರಿ, ರಂಗನಾಥ ಐಕೂರ, ಭೀಮಣ್ಣ ಬುದಿನಾಳ ವಡಗೇರಿ, ಮಲ್ಲು ಪೂಜಾರಿ, ದೇವಪ್ಪ ಜೋಳದಡಿಗಿ, ಮಲ್ಲಣ್ಣ ಸಾಹುಕಾರ, ಮುತ್ತಣ್ಣ, ಮಲ್ಲು ಎಂ., ಬೀರಲಿಂಗಪ್ಪ ಪೂಜಾರಿ ಸೇರಿದಂತೆ ಹಲವರು ಇದ್ದರು.

