ಕೊಪ್ಪಳ : ಬೀಡಾಡಿ ನಾಯಿಗಳ ದಾಳಿಗೆ ಕುರಿಗಳ ಬಲಿ ನಿಷ್ಕ್ರಿಯಗೊಂಡಿರುವ ನಗರ ಸಭೆಯೇ ಹೊಣೆ
ಕೊಪ್ಪಳ : ನಗರದಲ್ಲಿ ನಗರ ಸಭೆ ನಿರ್ಲಕ್ಷದಿಂದ ವಿಪರೀತ ಬೀಡಾಡಿ ನಾಯಿಗಳ ಕಾಟದಿಂದ ಕುರಿಗಳು ಬಲಿಯಾಗಿವೆ ಎಂದು ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ಜಾಫರ್ ಕುರಿ ಆರೋಪಿಸಿದರು.
ನಗರದ ದಿಡ್ಡಿಕೇರಿ ಬಡಾವಣೆಯ ಗಂಗಾಪತ್ರಿ ಬಾವಿ ಬಳಿಯ ಗಫೂರ್ ಸಾಬ್ ಕುರಿ ಅವರು ಗ್ಯಾರವಿ ಹಬ್ಬಕ್ಕಾಗಿ ಶುಕ್ರವಾರ ಕುಕಂಪಳ್ಳಿ ಸಂತೆಯಲ್ಲಿ ಹನ್ನೆರಡು ಸಾವಿರ ರೂಪಾಯಿಗಳನ್ನು ಕೊಟ್ಟು ಒಂದು ಟಗರನ್ನು ಖರೀದಿ ಮಾಡಿ ತಂದು ತಮ್ಮ ಮನೆಯ ಮುಂದೆ ಕಟ್ಟಿ ಹಾಕಿದ್ದರು. ಶನಿವಾರ ಬೆಳಗಿನ ಜಾವ ಒಂದೂವರೆ ಗಂಟೆ ಸುಮಾರಿಗೆ ಬೀಡಾಡಿ ನಾಯಿಗಳ ದಂಡು ಕುರಿಯನ್ನು ಕಚ್ಚಾಡುತ್ತಿದ್ದದನ್ನು ನೆರೆಹೊರೆಯವರು ಎದ್ದು ನಾಯಿಗಳನ್ನು ಓಡಿಸಿ.ಕುರಿ ಮಾಲೀಕ ಗಫೂರ್ ಸಾಬ್ ಕುರಿ ಅವರಿಗೆ ಎಬ್ಬಿಸಿ ಕುರಿಗೆ ನಾಯಿಗಳು ಕಡಿದ ವಿಷಯ ತಿಳಿಸಿದರು.ಕುರಿ ಮಾಲೀಕ ಗಫೂರ್ ಸಾಬ್ ಕುರಿ ಅವರು ಕುರಿ ಸತ್ತು ಹೋಗಿದ್ದನ್ನು ನೋಡಿ ಗ್ಯಾರವಿ ಹಬ್ಬಕ್ಕಾಗಿ ಕುರಿ ತಂದಿದ್ದೆ ಎಂದು ಕಣ್ಣೀರಿಟ್ಟರು.
ಕಳೆದ ವಾರ ಗಫೂರ್ ಸಾಬ್ ಕುರಿ ಅವರ ಮನೆ ಬಳಿಯ ಮೈನು ಕುರಿ ಅವರು ತಮ್ಮ ಒಂದು ದೊಡ್ಡ ಹೆಣ್ಣು ಕುರಿ ಎರಡು ಮರಿ ಕುರಿಗಳು ಮಧ್ಯಾಹ್ನ ಹನ್ನೆರಡೂವರೆ ಗಂಟೆ ಸುಮಾರಿಗೆ ಗಂಗಾಪತ್ರಿ ಬಾವಿ ಹತ್ತಿರ ಮೇಯಲು ಬಿಟ್ಟಿದ್ದರು. ಅಲ್ಲೇ ಕುರಿಗಳನ್ನು ಬೀಡಾಡಿ ನಾಯಿಗಳು ಕಡಿದಾಡಿ ಹರಿದು ಹಾಕಿ ಬಲಿತೆಗೆದುಕೊಂಡಿವೆ.
ಮುಖಂಡ ಜಾಫರ್ ಕುರಿ ನಗರ ಸಭೆಯ ಕಿರಿಯ ಅಭಿಯಂತರ ಸೋಮು ಅವರಿಗೆ ಫೋನ್ ಮೂಲಕ ದೂರ ನೀಡಿದರು. ಆಗ ಸೋಮು ನನಗೆ ಬರೋದಿಲ್ಲ ಆರೋಗ್ಯ ನಿರೀಕ್ಷಕ ರಾಘವೇಂದ್ರ ರಾಠೋಡ ಅವರಿಗೆ ಬರುತ್ತೆ ಅಂತ ಅವರ ಮೊಬೈಲ್ ನಂಬರ್ ಕಳುಹಿಸಿದರು. ರಾಘವೇಂದ್ರ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದರೆ ನನಗೆ ಬರೋದಿಲ್ಲ ಆರೋಗ್ಯ ನಿರೀಕ್ಷಕಿ ರಾಜೇಶ್ವರಿ ಮೇಡಮ್ ಇದ್ದಾರೆ ಅವರಿಗೆ ಸಂಪರ್ಕಿಸಿ ಅಂತ ಮೊಬೈಲ್ ನಂಬರ್ ಕಳುಹಿಸಿದರು. ಮೇಡಮ್ ಅವರಿಗೆ ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ. ಇದೆಲ್ಲ ಶನಿವಾರ ಬೆಳ್ಳಿಗೆ ಯಿಂದ ಮಧ್ಯಾಹ್ನದವರೆಗೆ ನಡೆದಿದ್ದು.ನಗರ ಸಭೆ ಅಧಿಕಾರಿಗಳಿಗೆ ಮೊಬೈಲ್ ಮೂಲಕ ದೂರ ನೀಡಿದರೆ ನನಗೆ ಸಂಬಂಧ ಇಲ್ಲ ಅವರಿಗೆ ಇವರಿಗೆ ಹೇಳಿ ಅಂತ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ.ದಿಡ್ಡಿಕೇರಿ ಬಡಾವಣೆಯಲ್ಲಿ ಬೀಡಾಡಿ ನಾಯಿಗಳ ಹಾವಳಿ ಮಿತಿಮೀರಿದ್ದು ನಗರ ಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

