ಜನ ಆಕ್ರೋಶ ಸುದ್ದಿಜಾಲ ಸುರಪುರ:ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕು ಘಟಕದ ವತಿಯಿಂದ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ನವೆಂಬರ್ 25 ರಂದು ಸುರಪುರದ ರಂಗಂಪೇಟೆ ದೊಡ್ಡ ಬಜಾರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯೋತ್ಸವದ ಪ್ರಯುಕ್ತ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು, ಸಂಸ್ಥಾನ ಹಿರೇಮಠ ದೇವಾಪುರ ಬಬಲಾದ (ಖ.) (ಕಲಬುರಗಿ) ರವರು ಹಾಗೂ ಪರಮ ಪೂಜ್ಯ ಶ್ರೀ ಷ.ಬ್ರ. ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶ್ರೀಗಿರಿ ಸಂಸ್ಥಾನ ಮಠ ಲಕ್ಷ್ಮೀಪುರ, ಬಿಜಾಸಪುರ ರವರ ಸಾನಿಧ್ಯದಲ್ಲಿ ಕಾರ್ಯಕ್ರಮದ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಜಲ್ಲಪ್ಪನೋರ್ ಅವರ ಆದೇಶದ ಮೇರೆಗೆ ಜಿಲ್ಲಾ ಕಾರ್ಯಾಧ್ಯಕ್ಷರಾದ ಶರಣು ಬೈರಿಮರಡಿ ಹಾಗೂ ತಾಲೂಕು ಅಧ್ಯಕ್ಷರಾದ ಮಲ್ಲಪ್ಪ ನಾಯಕ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಾರ್ಯಾಧ್ಯಕ್ಷರಾದ ಶಿವರಾಜ ವಗ್ಗರ್ ಅವರು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಕಲಾವಿದರಿಂದ ರಸಮಂಜರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಬಿತ್ತಿಪತ್ರ ಬಿಡುಗಡೆ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಕೃಷ್ಣಾ ಹಾವಿನ ಕುಂಬಾರಪೇಟ, ಕಾರ್ಯದರ್ಶಿ ಹಣಮಂತ ಭಂಡಾರಿ, ಆಟೋ ಚಾಲಕರ ಘಟಕದ ಅಧ್ಯಕ್ಷ ಹಣಮಂತ ಶುಕ್ಲ, ನಗರ ಘಟಕ ಅಧ್ಯಕ್ಷ ಶಿವಕುಮಾರ್ ಗಾಜಲದಿನ್ನಿ, ಪ್ರವೀಣ ವಿಭೂತೆ, ನಾಗಲಿಂಗ ಕರೆಗಾರ, ಅಯ್ಯಪ್ಪ ಹಾಸನಾಪುರ, ಯುವ ಘಟಕ ಅಧ್ಯಕ್ಷ ರವಿ ನಾಯಕ ಬಿಚಗತ್ತಿಗೇರ, ಉಪಾಧ್ಯಕ್ಷರು ರವಿ ಟರ್ಕೆರ್ ದೀವಳಗುಡ್ಡ, ಮಲ್ಲಪ್ಪ, ಟರ್ಕೆರ್, ಮಲ್ಲಪ್ಪ ಕೊಂಗಂಡಿ, ಸತ್ಯಚಿದಾನಂದ ಲಕ್ಷ್ಮೀಪುರ, ಯಲ್ಲಪ್ಪ ಕೃಷ್ಣಾಪುರ, ಮರೆಪ್ಪ ಕೃಷ್ಣಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

